Chitradurga news|nammajana.com|21-04-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮ್ಮನಹಳ್ಳಿ ಗ್ರಾಮದ ರಸ್ತೆಯ ಚರಂಡಿಯಲ್ಲಿ (Newborn baby) ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಸಾರ್ವಜನಿಕರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.

ಗ್ರಾಮದ ಚರಂಡಿಯಲ್ಲಿ ನವಜಾತಶಿಶುವಿನ ಮೃತದೇಹ ವೀಕ್ಷಿಸಿದ ಸಾರ್ವಜನಿಕರು ಕೂಡಲೇ ತಳಕು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ , ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ಯಾವ ಸಮಯದಲ್ಲಿ ಯಾರೂ ನವಜಾತಶಿಶುವನ್ನು ಚರಂಡಿಯಲ್ಲಿ ಎಸೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. (Newborn baby) ನವಜಾತ ಶಿಶುವಿನ ಮೃತದೇಹ ದೊರೆತ ಬಗ್ಗೆ ಪೊಲೀಸರು ವಿಚಾರಣೆ ಮುಂದುವರೆಸಿದ್ಧಾರೆ.
