Chitradurga News | Nammajana.com | 30-08-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಮೆದೇಹಳ್ಳಿ ಗ್ರಾಮ (Medehalli) ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್.ನಿರಂಜನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ನಗರಸಭೆಯ ಅಧ್ಯಕ್ಷರಾಗಿ ಶಕೀಲಬಾನು ಆಧಿಕಾರ ಸ್ವೀಕಾರ
ಮೇದೇಹಳ್ಳಿ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿದ್ದ ಕಾವ್ಯ ವಿಜಯಕುಮಾರ್ ರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆಯನ್ನು ನಡೆಸಲಾಯಿತು.
ಚಿತ್ರದುರ್ಗದ ಉಪ ವಿಭಾಗಾಧಿಕಾರಿಗಳಾದ ಮೆಹಬೂಬ ಜಿಲಾನಿ ಖುರೇಷಿ ಚುನಾವಣಾ ಅಧಿಕಾರಿಗಳಾಗಿ ಅಗಮಿಸಿದ್ದರು, ನಾಮಪತ್ರ ಸಲ್ಲಿಸುವ ಸಮಯದಲ್ಲಿ ವಿದ್ಯಾನಗರದಿಂದ ಮೇದೇಹಳ್ಳಿ ಪಂಚಾಯಿತಿಗೆ ಆಯ್ಕೆಯಾದ ಆರ್.ನಿರಂಜನ್ ಒಬ್ಬರೇ ನಾಮಪತ್ರವನ್ನು ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವರ ಅಯ್ಕೆಯನ್ನು ಅವಿರೋಧವಾಗಿ ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ನಿರಂಜನ್, ನನ್ನ ಅಧ್ಯಕ್ಷ ಅವಧಿ ಕಡಿಮೆ ಇದ್ದರೂ ಸಹಾ ಇರುವ ಸಮಯದಲ್ಲಿಯೇ ಮೆದೇಹಳ್ಳಿ ಪಂಚಾಯಿತಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡಲಾಗುವುದು. ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ನೀಡಲಾಗುವುದು ಎಂದರು.
ಇದನ್ನೂ ಓದಿ: ಡಿಜೆಗೆ ಸರಕಾರಕ್ಕೆ ಮನವಿ: ಮಾದಾರ ಚನ್ನಯ್ಯ ಶ್ರೀ
ಮೆದೇಹಳ್ಳಿ ಗ್ರಾಮ ಪಂಚಾಯಿತಿ(Medehalli) ಸದಸ್ಯರಾದ ಕಾವ್ಯ ವಿಜಯಕುಮಾರ್, ನಿಂಗಪ್ಪ, ಹೆಚ್.ತಿಮ್ಮಣ್ಣ, ಲಕ್ಷ್ಮೀದೇವಿ ಶ್ರೀನಿವಾಸ್, ದುಗ್ಗಪ್ಪ ಎಸ್, ಸುಶೀಲಮ್ಮ ಮಂಜಣ್ಣ, ಹೆಚ್ ಶ್ರೀನಿವಾಸ್, ಡಿ.ಎಂ.ಶೃತಿ ವಿಜಯಕುಮಾರ್, ಹೆಚ್.ಗೌರಮ್ಮ, ಕೆ.ಹನುಮಂತಪ್ಪ, ಎಂ,ಜಿ, ಜಯರಾಮರೆಡ್ಡಿ, ಎಸ್.ಸಿ.ಧನ್ಯಕುಮಾರ್, ಎ.ಸಿ.ಮಮತಾ ಜೆ.ಎಸ್.ಶಿವಪ್ರಕಾಶ್, ಎನ್.ಎಂ. ಪ್ರಿಯಾದರ್ಶಿನಿ, ಪಂಚಾಯಿತಿ ಅಭೀವೃದ್ದಿ ಅಧಿಕಾರಿ ಆರ್.ಪಾತಣ್ಣ ಸೇರಿದಂತೆ ಇತರರು ಹಾಜರಿದ್ದರು.
