Chitradurga news | nammajana.com | 12-07-2025
ನಮ್ಮಜನ.ಕಾಂ, ಹಿರಿಯೂರು: ನರೇಗಾ(NREGA) ಯೋಜನೆಯಡಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವ ಹಿಸುತ್ತಿರುವ ಸಿಬ್ಬಂದಿಗೆ ಕಳೆದ 6 ತಿಂಗ ಳಿಂದ ವೇತನ ನೀಡದಿರುವುದರ ಬಗ್ಗೆ ತಾಲೂ ಕಿನ ಸಿಬ್ಬಂದಿಗಳು ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ

ತಾಲೂಕು ಮಟ್ಟದ ವಿವಿಧ ಸ್ತರಗಳಲ್ಲಿ ಹಲವಾರು ವರ್ಷಗಳಿಂದ ಉದ್ಯೋಗ ಖಾತರಿ ಯೋಜನೆಯ ಸಮಗ್ರ ಅನುಷ್ಠಾನಕ್ಕೆ ಶ್ರಮಿಸುತ್ತಿ ದ್ದೇವೆ. ವಿವಿಧ ಸ್ತರದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಜನವರಿ 2025 ರಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿಲ್ಲ.
ಹಾಗಾಗಿ ನೌಕರರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಸಾಲದ ಕಂತುಗಳು ಹೀಗೇ ಹಲವು ಸಂಕಷ್ಟಗಳು ಎದುರಾಗಿವೆ. ಇದರಿಂದಾಗಿ ನೌಕರರ ಆತ್ಮ ಸ್ಥೆರ್ಯ ಕುಸಿಯುತ್ತಿದೆ. ನೌಕರರ
ವೇತನ ಪಾವತಿಗೆ ಮೇಲಾಧಿಕಾರಿಗಳನ್ನು ವಿಚಾರಿಸಿದರೆ ಕೇಂದ್ರ ದಿಂದ ಅನುದಾನ(NREGA) ಬಂದಿಲ್ಲ ಎನ್ನುತ್ತಿದ್ದರು. ಇದೀಗ ಕೇಂದ್ರದಿಂದ ರಾಜ್ಯಕ್ಕೆ ಹಾಗೂ ರಾಜ್ಯ ದಿಂದ ಜಿಲ್ಲಾ ಕೇಂದ್ರಕ್ಕೆ ಅನುದಾನ ಬಂದಿದೆ ಎನ್ನಲಾಗುತ್ತಿದ್ದು ವೇತನ ಬಿಡುಗಡೆಗೆ ತಾಂತ್ರಿಕ ಸಮಸ್ಯೆ ಬಗೆಹರಿದಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ರಾಜ್ಯ ಸಂಘದ ನಿರ್ದೇಶನದಂತೆ ಜು.11 ರಿಂದ ಯಾವುದೇ ರೀತಿಯ ಕೆಲಸ ನಿರ್ವಹಿಸದಿರಲು ತೀರ್ಮಾ ನಿಸಲಾಗಿದೆ ಎಂದು ನೌಕರರು ತಿಳಿಸಿದರು.
ಇದನ್ನೂ ಓದಿ: ಇತಿಹಾಸದಲ್ಲಿ ಮೊದಲ ಬಾರಿಗೆ ಭದ್ರಾ ಜಲಾಶಯದಿಂದ ನದಿಗೆ ನೀರು
ಈ ವೇಳೆ ತಾಪಂ ತಾಂತ್ರಿಕ ಸಂಯೋಜಕ ಡಿ.ಶಿವಕುಮಾರ್, ಕೆ.ಎಲ್.ಮಹಾಂತೇಶ್, ತಾಂತ್ರಿಕ ಸಹಾಯ ಕರಾದ ಎನ್.ಕಿರಣ್ ಕುಮಾರ್, ಗುರುದೇವ್, ವಿರೂಪಾಕ್ಷ, ಕಾರ್ತಿಕ್, ಮಲ್ಲೇಶ್, ಅಶ್ವಿನಿ, ಮೀನಾ, ಲಕ್ಷ್ಮೀದೇವಿ, ಕವಿತಾ, ರಂಜಿತಾ, ಗೌರಿಶ್ರೀ, ಕಮಲಮ್ಮ ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252