Chitradurga news|nammajana.com|8-11-2024
ನಮ್ಮಜನ.ಕಾಂ, ಸಿರಿಗೆರೆ: ಕನ್ನಡ ರಾಜ್ಯೋತ್ಸವ ಅಂಗವಾಗಿ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಆಯೋಜಿಸಿರುವ (Nudi Habba) ತರಳಬಾಳು ನುಡಿಹಬ್ಬವು ನ. 8ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ತರಳಬಾಳು ನುಡಿಹಬ್ಬದ ದಿವ್ಯ ಸಾನಿಧ್ಯವನ್ನು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿರುವರು. ನುಡಿಹಬ್ಬ ಅಂಗವಾಗಿ ಹಲವು ಗೋಷ್ಠಿ, ಕವಿಗೋಷ್ಠಿ, ಚರ್ಚಾಗೋಷ್ಠಿಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗೋಷ್ಠಿಗಳು ಗುರುಶಾಂತೇಶ್ವರ ದಾಸೋಹ ಮಂಟಪ ಸಭಾಂಗಣದಲ್ಲಿ ನಡೆಯುತ್ತವೆ. ಸಂಜೆ ವೇಳೆಯಲ್ಲಿ (Nudi Habba) ನಡೆಯಲಿರುವ ಸಾಂಸ್ಕೃತಿಕ ಕಾರ್ಯ ಕ್ರಮಗಳು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಸ್ಮಾರಕ ಬಾಲಕರ ವಿದ್ಯಾರ್ಥಿ ನಿಲಯ ಒಳಾವರಣದಲ್ಲಿ ನಡೆಯಲಿವೆ. ಅದಕ್ಕಾಗಿ ಸಿದ್ಧತೆಗಳು ನಡೆದಿವೆ.
ಇಂದಿನ ಕಾರ್ಯಕ್ರಮಗಳು:
ಬೆಳಗ್ಗೆ 8 ಗಂಟೆಯಿಂದ ವಿದ್ಯಾರ್ಥಿಗಳಪ್ರಭಾತ್ಪೇರಿ ಮತ್ತು ಕಲಾತಂಡಗಳೊಂದಿಗೆ ಭುವನೇಶ್ವರಿ ತಾಯಿಭಾವಚಿತ್ರ ಮೆರವಣಿಗೆನಡೆಯಲಿದೆ.
9 ಗಂಟೆಗೆ ತರಳಬಾಳು ಸಿಬಿಎಸ್ಸಿ ಶಾಲೆ ಮುಂಭಾಗದಲ್ಲಿ ವಿಶೇಷವಾಗಿ ರೂಪಿಸಿರುವ ವೇದಿಕೆಯಲ್ಲಿ ಕನ್ನಡ ಧ್ವಜಾರೋಹಣ ಕಾರ್ಯವು ತರಳಬಾಳು ಜಗದ್ಗುರುಡಾ. ಶಿವಮೂರ್ತಿಶಿವಾಚಾರ್ಯ ರ್ತಿಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗುವುದು.
ಕನ್ನಡ ಧ್ವಜಾರೋಹಣ ಆದ ನಂತರ ಸುಮಾರು 4000 ಸಾವಿರ ಶಾಲಾ ಮಕ್ಕಳ ಸಹಸ್ರಕಂಠ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯುವುದು.
9 ಗಂಟೆಗೆ ಕನ್ನಡ ಸಾಹಿತ್ಯ ಮತ್ತು ಪರಂಪರೆ ಕುರಿತ ಮೊದಲ ಗೋಷ್ಠಿ ಆರಂಭವಾಗುವುದು. ಶಿವಮೊಗ್ಗ ಕುವೆಂಪು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕುಮಾರ ಚಲ್ಯ, ಉಡುಪಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರಸುರೇಂದ್ರ, ದಾವಣಗೆರೆ ವಿವಿ ಕನ್ನಡವಿಭಾಗದ ಸಹಾಯಕ ಪ್ರಾಧ್ಯಾಪಕ (Nudi Habba) ಡಾ.ಭೀಮಾಶಂಕರ ಜೋಷಿ ವಿಷಯ ಮಂಡನೆ ಮಾಡುವರು. ಸರ್ವಜ್ಞನ ತ್ರಿಪದಿಗಳು ಹಾಗೂ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ತಂತ್ರಾಂಶ ಬಿಡುಗಡೆ ನಡೆಯುವುದು.
ಇದನ್ನೂ ಓದಿ: Dina Bhavishya: ಇಂದಿನ ರಾಶಿ ಭವಿಷ್ಯ, ಯಾರಿಗೆ ಕಾನೂನಿನಲ್ಲಿ ಜಯ
ಮಧ್ಯಾಹ್ನ 2.30 ಗಂಟೆಗೆ ಕನ್ನಡದ ಅಸ್ಥಿತೆಕನ್ನಡಿಗರಿಂದ ಸಾಧ್ಯ ಹಾಗೂ ಕನ್ನಡ ಮಾಧ್ಯಮದ ಕಲಿಕೆ ಉದ್ಯೋಗಕ್ಕೆ ಪೂರಕ ಕುರಿತಂತೆ ಚರ್ಚಾಗೋಷ್ಠಿ ನಡೆಯುವುದು. ಅನುವಾದಕ ಎಂ.ಜಿ. ರಂಗಸ್ವಾಮಿ, ದಾವಣಗೆರೆ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ವಿ. ಜಯರಾಮಯ್ಯ ಭಾಗವಹಿಸುವರು. ಸಂಜೆ 6.30 ಗಂಟೆಗೆ ನಡೆಯುವ ನಾಟಕೋತ್ಸವದಲ್ಲಿ ರೈತನ ಧ್ವನಿ, ಬೆಟ್ಟದ ಮೇಲೊಂದು ಮನೆಯ ಮಾಡಿ ಹಾಗೂ ಟ್ಯಾಬ್ಲೆಟ್ ಪ್ರದರ್ಶನಗೊಳ್ಳುವವು.