Chitradurga news|nammajana.com|16-7-2024
ನಮ್ಮಜನ.ಕಾಂ, ಹೊಸದುರ್ಗ: ಪಟ್ಟಣದ ಮಾರುತಿ ನಗರ (Organization of NSUI) ಬಡಾವಣೆಯ ನಿವಾಸಿಗಳಾದ ಮುಮ್ತಾಜ್ ಮತ್ತು ನುರುಲ್ಲಾ ಎಂಬ ದಂಪತಿಗಳ 2 ನೇಯ ಮಗ ಸಲೀಂ ಎಂಬ ಯುವಕ ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲೆ ಮಾಡಲಾಗಿತ್ತು.
ಕಾಯಿಲೆ ದೊಡ್ಡ ಮಟ್ಟದಲ್ಲಿ ಆಗಿರುವುದರಿಂದ ಯುವಕ (Organization of NSUI) ಗುಣಮುಖನಾಗಬೇಕಾದರೆ, 25.ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಇದನ್ನರಿತ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಹೊಸದುರ್ಗ ತಾಲ್ಲೂಕು ಘಟಕದ ಸಂಘಟನೆಯು ಪಟ್ಟಣದ ಕಾಲೇಜುಗಳಿಗೆ ಭೇಟಿ, ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹ ಮಾಡಿ, ಮಂಗಳವಾರ ರೋಗಿಯ ಚಿಕಿತ್ಸೆಗೆಂದು 40.ಸಾವಿರ ರೂಪಾಯಿ ಹಣ ನೀಡಿ, ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಎನ್ಎಸ್ ಯುಐ (Organization of NSUI) ಸಂಘಟನೆಯ ಉಪಾಧ್ಯಕ್ಷ ಲೋಹಿತ್ ಮಾತನಾಡಿ ಕಳೆದ 2 ತಿಂಗಳಿನಿಂದ ಸಲೀಂ ಎಂಬ ಯುವಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾನೆ. ಈತನಿಗೆ ಒಬ್ಬಳು ತಂಗಿ ಇದ್ದು, ಅತ್ಯಂತ ಬಡ ಕುಟುಂಬವಾಗಿದೆ.
ಕುಟುಂಬದ ನಿರ್ವಹಣೆಗೆ ಈತನೇ ಆಧಾರ ಸ್ತಂಭವಾಗಿದ್ದನು. ಈತನು ಇದೀಗ, ರೋಗದಿಂದ ಬಳಲುತ್ತಿದ್ದು, (Organization of NSUI) ಕುಟುಂಬದ ಸ್ಥಿತಿ ಅತಂತ್ರವಾಗಿದೆ. ಈ ವಿಷಯ ನಮಗೆ ತಡವಾಗಿ ಗೊತ್ತಾಯಿತು. ನಮ್ಮ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಕೈಲಾದಷ್ಟು ಸಹಾಯ ಮಾಡಿದ್ದೇವೆ.
ದಾನಿಗಳು ಮಾನವೀಯತೆಯಿಂದ ಈ ಯುವಕನ ಜೀವ (Organization of NSUI) ಉಳಿಸಲು ಸಹಕರಿಸಿ. ಸಹಾಯ ಮಾಡ ಬಯಸುವವರು ಮೊಬೈಲ್ ಸಂಖ್ಯೆ: 7625036523 ನಂಬರ್ ಗೆ ಕರೆ ಮಾಡಿ. ರೋಗಿಯ ಬೆನ್ನಿಗೆ ನಿಂತು ಆರೋಗ್ಯವಂತನಾಗಿ ಹಿಂದಿರುಗಿ ಬರಲೆಂದು ಹಾರೈಸಿ ಎಂದು ಮನವಿ ಮಾಡಿದರು.
ಈ ವೇಳೆ ಸಂಘಟನೆಯ ಮಂಜುನಾಥ್, ಪ್ರದೀಪ್, ಸಂತೋಷ್, ಮಧು, ಅಜ್ಮ ಮತ್ತು ಗೀತಾಂಜಲಿ ಸೇರಿದಂತೆ ಇತರರಿದ್ದರು.