Chitradurga news|nammajana.com|25-6-2024
ನಮ್ಮಜನ.ಕಾಂ, ಹೊಸದುರ್ಗ: ಬೆಂಗಳೂರಿನ ಫ.ಗು ಹಳಕಟ್ಟಿ ಫೌಂಡೇಷನ್‌ನಿಂದ ಪ್ರತಿವರ್ಷ ವಚನ ಸಾಹಿತ್ಯ ಸಾಧಕರಿಗೆ ಕೊಡ ಮಾಡುವ ಫ.ಗು. ಹಳಕಟ್ಟಿ ಪ್ರಶಸ್ತಿಯನ್ನು ಈ ವರ್ಷ ಸಾಣೇಹಳ್ಳಿ ಯ ಶ್ರೀ ಪಂಡಿತಾರಾಧ್ಯ (Panditaradhya Shri) ಶಿವಾಚಾರ್ಯ ಸ್ವಾಮೀಜಿ ಅವರಿಗೆ ನೀಡಲಾಗಿದೆ.
ಫ.ಗು ಹಳಕಟ್ಟಿ ವಚನ ಸಾಹಿತ್ಯ ಸಂರಕ್ಷಣೆಗಾಗಿ ತಮ್ಮ ತನು, ಮನ, ಧನ ಸಮರ್ಪಿಸಿಕೊಂಡವರು. ಅವರ ಪರಿಶ್ರಮ ಇಲ್ಲದಿದ್ದರೆ ಅಮೂಲ್ಯ ವಚನಸಾಹಿತ್ಯಬೆಳಕುಕಾಣುವುದು ಕಷ್ಟಸಾಧ್ಯವಾಗಿತ್ತು.
ವಚನ ಸಾಹಿತ್ಯ, ಸಂಶೋಧನೆ, ಸಂರಕ್ಷಣೆ, ಪ್ರಕಟಣೆಗಾಗಿ ಅವರುತಮ್ಮ ಮನೆಯನ್ನೇ ಮಾರಿದರು. ಹೀಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಶ್ರೀ ಪಂಡಿತಾರಾಧ್ಯ ಶ್ರೀ (Panditaradhya Shri) ಅವರ ಲೇಖನಿಯಿಂದ ಶರಣರ ಬದುಕನ್ನು ಕುರಿತಂತೆ ಜಂಗಮದೆಡೆಗೆ,ಮೋಳಿಗೆ ಮಾರಯ್ಯ, ಗುರುಮಾತೆ ಅಕ್ಕನಾಗಲಾಂಬಿಕೆ, ಅಂತರಂಗ ಬಹಿರಂಗ ನಾಟಕಕೃತಿಗಳು ಹೊರಬಂದಿವೆ.
ಶರಣರ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುವ ಧರ್ಮಗುರು, ಶಿವಬೆಳಗು, ಕಾಯಕ ದಾಸೋಹ, ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ, ವಚನ ವೈಭವ, ಬಸವಧರ್ಮ, ಶರಣ ಸಂಕುಲ, ಲಿಂಗಾಯತ ಧರ್ಮ, ವಚನಕಾರರ ಬದ್ಧತೆ, ಕಲ್ಯಾಣದೆಡೆಗೆ, ಶರಣ ಸಂದೇಶ, ವಚನ ಸಂದೇಶ, ಕಲ್ಯಾಣದ ಬೆಳಕು, ಬಸವಪ್ರಜ್ಞೆ, ಲಿಂಗಾಯತರು ಮತ್ತು ಬಸವ ತತ್ವ, ವಚನ ಸಂವಿಧಾನ (Panditaradhya Shri) ಹೀಗೆ ನೂರಾರು ಕೃತಿಗಳು ಹೊರಬಂದಿವೆ. ಅದರಲ್ಲೂ ‘ಮತ್ತೆ ಕಲ್ಯಾಣ’ ಕೃತಿ ಸಂಪುಟ ಸಂಶೋಧಕರಿಗೆ ಒಂದು ಆಕರ ಗ್ರಂಥದಂತಿದೆ.
ಇದನ್ನೂ ಓದಿ: ದಿನ ಭವಿಷ್ಯ 25-6-2024 | Dina Bhavishya
ಪ್ರತಿವರ್ಷ ನಡೆಯುವ ಶಿವಸಂಚಾರ ರಂಗ ರೆಪರ್ಟರಿಯಲ್ಲಿ ಶರಣರ ತತ್ವಗಳಿಗೆ ಸಂಬಂಧಿಸಿದ ಒಂದು ನಾಟಕ ಇರುತ್ತದೆ. ಈ ಎಲ್ಲ ಸಾಧನೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಫಲಕದೊಂದಿಗೆ 1ಲಕ್ಷ ರು.ನಗದು ಇರಲಿದೆ. ಜು.2ರಂದು ಸಂಜೆ 5.30ಕ್ಕೆ ಬೆಂಗಳೂರಲ್ಲಿ ಕುಮಾರಕೃಪ ರಸ್ತೆಯ ಗಾಂಧಿ ಭವನದಲ್ಲಿ ಈ ಸಮಾರಂಭ ನಡೆಯಲಿದೆ.