Chitradurga news|nammajana.com|20-6-2024
ನಮ್ಮಜನ.ಕಾಂ, ಹೊಸದುರ್ಗ: ತಾಲೂಕಿನ ಸಾಣೆಹಳ್ಳಿಯ ರಂಗ ಜಂಗಮ ರಂದು ಸಾಣೇಹಳ್ಳಿಯ ಶ್ರೀಮಠದ ಶ್ರೀ ಶಾಮನೂರು ಶಿವಶಂಕರಪ್ಪ ಹೊರಾಂಗಣ ರಂಗಮಂದಿರದಲ್ಲಿ ರಾಜ್ಯದ ಬಸವ ತತ್ವ ಪರಂಪರೆಯ ಸುಮಾರು 50 ಕ್ಕೂ ಹೆಚ್ಚು ಮಠಾಧೀಶರಿಗೆ ವಚನ ಕಮ್ಮಟ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಣೆಹಳ್ಳಿಯ ಪಂಡಿತರಾಧ್ಯ ಶ್ರೀಗಳು (Panditaradhya Shri)ತಿಳಿಸಿದರು.
ಸಾಣೆಹಳ್ಳಿಯಲ್ಲಿ ಕಳೆದ 2024 ನೇ 01 ರಂದು 30 ವಿದ್ವಾಂಸರ ಲೇಖನಗಳ ಬಹುಮಹತ್ವದ `ವಚನ ಸಂವಿಧಾನ’ ಕೃತಿಯ ಲೋಕಾರ್ಪಣೆ ಮತ್ತು ಗುರು-ಜಗದ್ಗುರುಗಳ ಜೊತೆಗೆ ಅನುಸಂಧಾನ ನಡೆಯಿತು. ಆಗ ವಚನ ಸಂವಿಧಾನ’ದ ಪರಿಚಯ ನಮ್ಮ ಮಠಾಧೀಶರಿಗೆ ಆಗಬೇಕಾಗಿದೆ. ಅದಕ್ಕಾಗಿ ವಚನ ಕಮ್ಮಟದ ಅಗತ್ಯವಿದೆ ಎಂದು ಮೈಸೂರಿನ ಡಾ. ಶ್ರೀ ಶರಶ್ಚಂದ್ರ ಸ್ವಾಮೀಜಿಯವರು ಸಲಹೆ ನೀಡಿದ ಹಿನ್ನೆಲಯಲ್ಲಿ. ಕರ್ನಾಟಕದಲ್ಲಿ ಬಸವಪರಂಪರೆಯ ಮಠಗಳು ಸಾಕಷ್ಟಿವೆ. ಅಂಥ ಎಷ್ಟೋ ಮಠಗಳಲ್ಲಿ ಬಸವಪರಂಪರೆಗೆ ಪೂರಕವಲ್ಲದ ಹೋಮಾದಿ ಕ್ರಿಯೆಗಳು, ವೇದಾಧ್ಯಯನ, ಜಾತೀಯತೆ, ಲಿಂಗ ಅಸಮಾನತೆ, ಬಹುದೇವತಾರಾಧನೆ, ಮೂಢಾಚರಣೆ ಇತ್ಯಾದಿ ನಡೆಯುತ್ತಲಿವೆ. ಈ ನೆಲೆಯಲ್ಲಿ ಆಸಕ್ತ ಮಠಾಧೀಶರಿಗೆ (ಯುವ ಮಠಾಧೀಶರನ್ನೂ ಒಳಗೊಂಡಂತೆ) ಮತ್ತು ಸ್ವಾಮಿಗಳಾಗಿ ಬರುವವರಿಗೆ ಶರಣ ಪರಂಪರೆಯ ಅಲ್ಪ ಪರಿಚಯವನ್ನಾದರೂ ಮಾಡಿಕೊಡಬೇಕೆನ್ನುವುದು ಹಲವು ಹಿರಿಯ ಮಠಾಧೀಶರ ಅಭಿಪ್ರಾಯವಾಗಿತ್ತು.
ಜುಲೈ 01 ರಿಂದ 05 ರವರೆಗೆ ಸಾಣೇಹಳ್ಳಿಯಲ್ಲಿ ವಚನ ಕಮ್ಮಟ ವನ್ನು ನಡೆಸಲು ಸಾಣೆಹಳ್ಳಿ ಶ್ರೀಮಠ ಸಿದ್ದ.
ಶಿಬಿರದಲ್ಲಿ ಮುಖ್ಯವಾಗಿ ಪ್ರತಿದಿನದ ಯೋಗಾಸನ: ಬೆಳಗ್ಗೆ 06 ರಿಂದ ಶ್ರೀ ಮ ನಿ ಪ್ರ ಮಹಾಂತಸ್ವಾಮಿಗಳವರು, ಸಂಸ್ಥಾನ ಮಠ, ಜಡೆ ಇವರು ನಡೆಸಿಕೊಡುವರು
ನಾಗರಾಜ್, ದಾಕ್ಷಾಯಣಿ, ಶರಣ್ ಬಳಗದವರಿಂದ ವಚನಗೀತೆ ನೆರವೇರುವುದು. ಪ್ರತಿದಿನ ಶಿಬಿರಾರ್ಥಿಗಳಿಂದ ಇಷ್ಟಲಿಂಗ ಪೂಜೆ ಇರುವುದು.
ಜುಲೈ 01 ಬೆಳಗ್ಗೆ 08 ಗಂಟಗೆ ಶಿವಧ್ವಜಾರೋಹಣವನ್ನು ಪಾಂಡೋಮಟ್ಟಿಯ ಶ್ರೀ ಗುರುಬಸವ ಮಹಾಸ್ವಾ”ಗಳವರು ನೆರವೇರಿಸುವರು. ನಂತರ ಶಿವಮಂತ್ರಲೇಖನ ಇರುವುದು.
01/07/2024 ಸೋಮವಾರ ಬೆಳಗ್ಗೆ 11 ಗಂಟೆಗೆ ವಚನ ಕಮ್ಮಟದ ಉದ್ಘಾಟನೆಯ ಸಾನಿಧ್ಯವನ್ನು ಬಾಲ್ಕಿಯ ಹಿರೇಮಠದ ನಾಡೋಜ, ಡಾ. ಶ್ರೀ ಬಸವಲಿಂಗ ಪಟ್ಟದ್ದೇವರು ಹಾಗೂ ಶಿವಮೊಗ್ಗದ ಬೆಕ್ಕಿನಕಲ್ಮಠ ಶ್ರೀ ಮ ನಿ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು. ಶರಣ ತತ್ವ ಚಿಂತಕ ಡಾ. ಬಸವರಾಜ ಸಾದರ ಪ್ರಾಸ್ತಾವಿಕವಾಗಿ ಮಾತನಾಡುವರು ಮಧ್ಯಾಹ್ನ ನಡೆಯುವ ಗೋಷ್ಠಿ ವಿವರ.
ಗೋಷ್ಠಿ: 01– ವಚನಗಳು ಮತ್ತು ವಚನ ಧರ್ಮದ ಆಶಯಗಳು’ ವಿಷಯ ಕುರಿತಂತೆ ಚಿಂತಕ ಶ್ರೀ ಎಸ್ ಜಿ ಸಿದ್ಧರಾಮಯ್ಯ ಉಪನ್ಯಾಸ ನೀಡುವರು. ಅಪರಾಹ್ನ ೩ ರಿಂದ ೫ ರವರೆಗೆ ನಡೆಯುವ ಗೋಷ್ಠಿ: 02- `ವಿವಿಧ ಧರ್ಮಗಳ ಸಂಕ್ಷಿಪ್ತ ಪರಿಚಯ’ ಕುರಿತಂತೆ: ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ. ಡಾ. ಎಸ್ ಎಂ ಜಾಮದಾರ ಮಾತನಾಡುವರು. ಸಂಜೆ 05 ರಿಂದ ೬ರವೆಗೆರೆ ನಡೆಯುವ ಗೋಷ್ಠಿ: 03 – `ಸ್ಥಾವರ-ಜಂಗಮ’ ವಿಷಯ ಕುರಿತಂತೆ `ಹೊಸತು’ ಪತ್ರಿಕೆಯ ಸಂಪಾದಕರಾದ, ಡಾ. ಸಿದ್ಧನಗೌಡ ಪಾಟೀಲರು ಉಪನ್ಯಾಸ ನೀಡುವರು. ಗೋಷ್ಠಿ: ೪ – ರಾತ್ರಿ ೭ ರಿಂದ ೮-೩೦ ರವರೆಗೆ `ಮೂಢಾಚರಣೆಗಳು’ ವಿಷಯ ಕುರಿತಂತೆ ಶಿವನಕೆರೆ ಬಸವಲಿಂಗಪ್ಪ ಮಾತನಾಡುವರು. ಸಾಣೇಹಳ್ಳಿಯ ಆರ್ ಅದಿತಿ, ವಚನ ನೃತ್ಯ ನಡೆಸಿಕೊಡುವರು.
02/07/2024 ಮಂಗಳವಾರ ಬೆಳಗ್ಗೆ 07 ಕ್ಕೆ ಶಿವಮೊಗ್ಗದ ಬಸವಕೇಂದ್ರ, ಡಾ. ಬಸವ ಮರುಳಸಿದ್ಧ ಸ್ವಾಮಿಗಳು ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡುವರು. ಗೋಷ್ಠಿ: 05- ಬೆಳಗ್ಗೆ 09-30 ರಿಂದ `ಪಂಚಾಚಾರ’ ವಿಷಯ ಕುರಿತಂತೆ ಧಾರವಾಡದ ಡಾ. ವೀರಣ್ಣ ರಾಜೂರ ಮಾತನಾಡುವರು.
ಗೋಷ್ಠಿ: 06 – ಬೆಳಗ್ಗೆ 11 ರಿಂದ `ಅಷ್ಟಾವರಣ’ ಕುರಿತಂತೆ ಡಾ. ಬಸವರಾಜ ಸಬರದ ಮಾತನಾಡುವರು. ಗೋಷ್ಠಿ: ೭ – ಮಧ್ಯಾಹ್ನ ೧ ರಿಂದ ೨ರವರೆಗೆ `ಅನುಭವ ಮಂಟಪ’ ಕುರಿತಂತೆ ಡಾ. ವೀರಣ್ಣ ರಾಜೂರ ಉಪನ್ಯಾಸ ನೀಡುವರು. ಗೋಷ್ಠಿ: ೮ – ಅಪರಾಹ್ನ ೩ ರಿಂದ ೫ರವರೆಗೆ `ಷಟ್‌ಸ್ಥಲ’ ಕುರಿತಂತೆ ಪಾಂಡೋಮಟ್ಟಿಯ ಡಾ. ಶ್ರೀ ಗುರುಬಸವ ಮಹಾಸ್ವಾಮಿಗಳು ಉಪನ್ಯಾಸ ನೀಡುವರು. ಗೋಷ್ಠಿ ೯ – ಸಂಜೆ ೫ ರಿಂದ ೬ರವರೆಗೆ ತಾತ್ವಿಕತೆ ಮತ್ತು ಸಂಘಟನೆ’ ಕುರಿತಂತೆ ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮಿಗಳು ಉಪನ್ಯಾಸ ನೀಡುವರು.
ನಂತರ ರಾತ್ರಿ 07 ರಿಂದ 08-30 ಮಹಾದೇವ ಬಣಕಾರ ರಚಿಸಿದ ವೈಡಿ ಬದಾಮಿ ನಿರ್ದೇಶನದ ‘ಉರಿಲಿಂಗ ಪೆದ್ದಿ’ ನಾಟಕವನ್ನು ಶಿವಕುಮಾರ ಕಲಾಸಂಘದ ಕಲಾವಿದರ ಅಭಿನಯಿಸುವರು.
03/07/2024 ಬುಧವಾರ ಬೆಳಗ್ಗೆ ೯
09-30 ರಿಂದ `ಕರಣ ಹಸಿಗೆ’ ವಿಷಯ ಕುರಿತಂತೆ ಮೈಸೂರಿನ ಡಾ. ಶ್ರೀ ಶರಶ್ಚಂದ್ರ ಸ್ವಾಮಿಗಳು ಮಾತನಾಡುವರು. ಗೋಷ್ಠಿ: ೧೧ – ಬೆಳಗ್ಗೆ ೧೧-೩೦ ರಿಂದ ಮಧ್ಯಾಹ್ನ ೧-೩೦ರವರೆಗೆ `ವಚನಕಾರರ ನೆಲೆಯಲ್ಲಿ ಪಾಪ-ಪುಣ್ಯ, ಸ್ವರ್ಗ-ನರಕ’ ವಿಷಯ ಕುರಿತಂತೆ ಚಿಂತಕಿ ಡಾ, ಎಂ ಎಸ್ ಆಶಾದೇವಿ ಉಪನ್ಯಾಸ ನೀಡುವರು.
ಗೋಷ್ಠಿ ೧೨ – ಅಪರಾಹ್ನ ೩ ರಿಂದ ೫ರವರೆಗೆ `ಆತ್ಮನಿವೇದನೆ’ ಕೃತಿಯ ಕುರಿತಂತೆ ಡಾ. ಲೋಕೆಶ್ ಅಗಸನಕಟ್ಟೆ ಅವಲೋಕನ ಮಾಡಿಕೊಳ್ಳುವರು. ಗೋಷ್ಠಿ: ೧೩ – ಇಳಿಹೊತ್ತು ೫ ರಿಂದ ೬ರವರೆಗೆ ವಿಷಯ: `ಲಿಂಗಾಯತ ಮಠಗಳು ಮತ್ತು ಬಸವತತ್ವ ಅನುಷ್ಠಾನ’ದ ಬಗ್ಗೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡುವರು.
ಇದನ್ನೂ ಓದಿ: POWER CUT TODAY: ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ, ಎಲ್ಲೆಲ್ಲಿ?
ನಂತರ ರಾತ್ರಿ 07 ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ರಚಿಸಿದ, ವೈ ಡಿ ಬದಾಮಿ ನಿರ್ದೇಶನದ ಮರಣವೇ ಮಹಾನವಮಿ’ ನಾಟಕವನ್ನು ಶ್ರೀ ಶಿವಕುಮಾರ ಕಲಾಸಂಘದ ಕಲಾವಿದರು ಅಭಿನಯಿಸುವರು.
04/07/2024 ಗುರುವಾರ – ಬೆಳಗ್ಗೆ 09-30 ರಿಂದ `ಕರ್ಮ ಸಿದ್ಧಾಂತ’ ವಿಷಯ ಕುರಿತಂತೆ ಶಿವಮೊಗ್ಗದ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ಉಪನ್ಯಾಸ ನೀಡುವರು. ಗೋಷ್ಠಿ: ೧೫ – ಬೆಳಗ್ಗೆ ೧೧ ರಿಂದ ೧೨-೩೦ರವರೆಗೆ ವಚನ ಕ್ರಾಂತಿ ಮಹಿಳೆಯರ ಸಹಭಾಗಿತ್ವ’ ವಿಷಯವನ್ನು ಕುರಿತು ಧಾರವಾಡದ ವಿನಯಾ ಒಕ್ಕುಂದ ಉಪನ್ಯಾಸ ನೀಡುವರು. ಗೋಷ್ಠಿ: ೧೬ – ಅಪರಾಹ್ನ ೧೨-೩೦ ರಿಂದ ೨ರವರೆಗೆ `ಲಿಂಗಾಯತ/ವೀರಶೈವ’ ವಿಷಯ ಕುರಿತು ಶಿಬಿರಾರ್ಥಿಗಳಿಂದ ಮುಕ್ತ ಅಭಿಪ್ರಾಯ ಹಂಚಿಕೊಳ್ಳಬಹುದು. ಇದರ ಸಾನ್ನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ಶ್ರೀ ಸಿದ್ಧರಾಮ ಮಹಾಸ್ವಾಮಿಗಳವರು ವಹಿಸುವರು.
ಇದನ್ನೂ ಓದಿ: GTTC CHITRADURGA: ಮೊದಲು ಬಂದವರಿಗೆ ಮೊದಲ ಆದ್ಯತೆ| ಜಿಟಿಟಿಸಿ | ಡಿಪ್ಲೊಮಾ ಕೋರ್ಸ್‍ಗಳಿಗೆ ಪ್ರವೇಶ
ಗೋಷ್ಠಿ: ೧೭ – ಅಪರಾಹ್ನ ೩ ರಿಂದ ೫ರವರೆಗೆ `ಶೂನ್ಯ ಸಂಪಾದನೆಯ ಪರಿಚಯ’ ಕುರಿತು ಮೈಸೂರಿನ ಡಾ. ಮರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡುವರು. ಸಂಜೆ ೫ ರಿಂದ ಇಷ್ಟಲಿಂಗದ ವೈಜ್ಞಾನಿಕತೆ (ಪ್ರಾತ್ಯಕ್ಷಿಕೆ)ಯನ್ನು ಬೆಳಗಾವಿಯ ವೈದ್ಯ ಡಾ. ಅವಿನಾಶ ಕವಿ ತಿಳಿಸಿಕೊಡುವರು.
ನಂತರ ರಾತ್ರಿ ೭ರಿಂದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ (Panditaradhya Shri) ಸ್ವಾಮಿಗಳವರು ರಚಿಸಿದ ವೈ ಡಿ ಬದಾಮಿ ನಿರ್ದೇಶನದ ಕ್ರಾಂತಿಗಂಗೋತ್ರಿ ಅಕ್ಕ ನಾಗಲಾಂಬಿಕೆ’ (ಏಕವ್ಯಕ್ತಿ ಪ್ರದರ್ಶನ) ನಾಟಕವನ್ನು ಶ್ರೀಮತಿ ಮಂಜುಳಾ ಬದಾಮಿ ಅಭಿನಯಿಸುವರು.