
Chitradurga news|nammajana.com|10-02-2025
ನಮ್ಮಜನ.ಕಾಂ, ಚಳ್ಳಕೆರೆ: ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚೌಳೂರು ಜಗಜೀವನರಾಮ್ ಕಾಲೋನಿಯ (Parasurampura) ಕುರಿನಿಂಗಪ್ಪನವರ ಜಮೀನಿನ ಬಳಿ ಯಾರೋ ದುಷ್ಕರ್ಮಿಗಳು ಜೆಜೆ ಕಾಲೋನಿಯ ಜೆ.ಎಚ್.ಪ್ರಭಾಕರ(55)ಎಂಬ ವ್ಯಕ್ತಿಯನ್ನು ಹರಿತವಾದ ಆಯುಧಗಳಿಂದ ಹೊಡೆದು ರಕ್ತಗಾಯಗೊಳಿಸಿ ಕೊಲೆಮಾಡಿ ಪರಾರಿಯಾದ ಘಟನೆ ನಡೆದಿದೆ.
ಮೃತನ ಪತ್ನಿ ಹನುಮಕ್ಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ನನ್ನ ಗಂಡ ಜೆ.ಎಚ್.ಪ್ರಭಾಕರ ಪರಶುರಾಮಪುರದಲ್ಲಿ ಚಪ್ಪಲ್ಲಿ ಹೊಲೆಯುವ ಕೆಲಸ ಮಾಡುತ್ತಿದ್ದು, ಪ್ರತಿನಿತ್ಯ ಚೌಳೂರು ಗ್ರಾಮದ ಜೆಜೆ ಕಾಲೋನಿಯಿಂದ ಪರಶುರಾಮಪುರಕ್ಕೆ ಹೋಗಿ ಸಂಜೆ ವಾಪಾಸಾಗುತ್ತಿದ್ದ, ಫೆ.9 ರ ಸಂಜೆ ಸುಮಾರು 7 ರ ಸಮಯದಲ್ಲಿ ಪರಶುರಾಮಪುರದಿಂದ ಚೌಳೂರಿನ (Parasurampura) ಜೆಜೆ.ಕಾಲೋನಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಕೊಲೆಯಾಗಿ ಬಿದ್ದು, ಈ ಬಗ್ಗೆ ಆರೋಪಿಗಳನ್ನು ಪತ್ತೆ ಮಾಡುವಂತೆ ದೂರು ನೀಡಿದ್ಧಾಳೆ.

ಇದನ್ನೂ ಓದಿ: ಶರಣರ ಜಯಂತಿಗಳಿಂದ ಸಮಾಜದಲ್ಲಿ ಸಾಮರಸ್ಯ ಮೂಡಿದೆ: ಟಿ.ರಘುಮೂರ್ತಿ | Kayak Sharanara
ಜಿಲ್ಲಾ ರಕ್ಷಣಾಧಿಕಾರಿ ಭೇಟಿ :
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ತಳಕು ವೃತ್ತ ನಿರೀಕ್ಷಕ ಹನುಮಂತಪ್ಪಶಿರೆಹಳ್ಳಿ ಭೇಟಿ ನೀಡಿ (Parasurampura) ಪರಿಶೀಲಿಸಿದರು. ಪರಶುರಾಮಪುರ ಪಿಎಸ್‌ಐ ಮಾರುತಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ಧಾರೆ.
