Chitradurga news | nammajana.com|11-07-2025
ನಮ್ಮಜನ.ಕಾಂ, ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಪಾವಗಡ(Pavagada) ರಸ್ತೆಯ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಕಳೆದ ತಿಂಗಳು ರೈತ ಸಂಘವೂ ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ಧಾರರು ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ 500 ರೂ ಏರಿಕೆ

ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ, ತಹಶೀಲ್ಧಾರ್, ಸರ್ವೆ ಮತ್ತು ನಗರಸಭೆ ಆಡಳಿತ ಅಧಿಕಾರಿಗಳು ಗುರುವಾರ ಬೆಳಗ್ಗೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕುರಿತಂತೆ ಭೂಸ್ವಾಧಿನ ಪ್ರಕ್ರಿಯೆಗೆ ಅಳತೆ ಮೂಲಕ ಚಾಲನೆ ನೀಡಿದ್ಧಾರೆ.
ತಹಶೀಲ್ಧಾರ್ ರೇಹಾನ್ ಪಾಷ, ನಗರಸಭೆ ಅಧ್ಯಕ್ಷೆ ಶಿಲ್ಪಮುರುಳಿ, ಉಪಾಧ್ಯಕ್ಷ ಕವಿತಾಬೋರಯ್ಯ, ರೈಲ್ವೆ ಇಲಾಖೆ ಇಂಜಿನಿಯರ್(Pavagada) ಹರೀಶ್‌ಕುಮಾರ್, ಸರ್ವೆ ಇಲಾಖೆ ಅಧಿಕಾರಿ ಬಾಬುರೆಡ್ಡಿ, ರವಿ, ಪೌರಾಯುಕ್ತ ಜಗರೆಡ್ಡಿ, ಎಇಇ ಕೆ.ವಿನಯ್, ಸಹಾಯಕ ಇಂಜಿನಿಯರ್ ಲೋಕೇಶ್ ಹಾಗೂ ಸರ್ವೆ ಇಲಾಖೆ ಸಿಬ್ಬಂದಿ ವರ್ಗ ಭೂಮಿಯ ಅಳತೆ ಕಾರ್ಯಪೂರೈಸಿದರು.
ಭೂಸ್ವಾದಿನ ಕುರಿತಂತೆ ತಹಶೀಲ್ಧಾರ್ ರೇಹಾನ್‌ಪಾಷ ಮಾಹಿತಿ ನೀಡಿ, ಪ್ರಸ್ತುತ ಈ ರಸ್ತೆ ಈಗಾಗಲೇ ಅಗಲೀಕರಣಕ್ಕೆ ಸಿದ್ದತೆ ನಡೆಸುತ್ತಿದ್ದು, ಒಟ್ಟು 30 ಮೀಟರ್ ಅಗಲದ ರಸ್ತೆಯಾಗಲಿದೆ. ರಸ್ತೆಮಧ್ಯಭಾಗದಿಂದ ಎರಡೂ ಕಡೆ 15ಮೀಟರ್‌ನಂತೆ ಒಟ್ಟು 30 ಮೀಟರ್ ರಸ್ತೆ ಅಗಲೀಕರಣವಾಗಲಿದೆ.
ಇದನ್ನೂ ಓದಿ: ಜುಲೈ 12ರಂದು ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ
ಪಾವಗಡ ರಸ್ತೆಯ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಸ್ವಾಧಿನಕ್ಕೆ ಸಂಬ0ಧಿಸಿದ0ತೆ ದಾಖಲಾತಿಗಳನ್ನು ಸಿದ್ದಪಡಿಸಿ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗುವುದು ಎಂದರು.
ಸದರಿ ಜಾಗದಲ್ಲಿ ಖಾಸಗಿ ಹಾಗೂ ಸರ್ಕಾರಿ ಜಮೀನಿದ್ದು, ಕಾನೂನು ರೀತ್ಯ ಖಾಸಗಿ(Pavagada) ಜಮೀನಿಗೆ ಬೆಲೆ ನಿಗದಿಪಡಿಸಿ, ಉಪನೊಂದಾವಣಾಧಿಕಾರಿಗಳು ನಿಗದಿಪಡಿಸಿದ ದರವನ್ನು ನೀಡಲಾಗುವುದು ಒಟ್ಟಿನಲ್ಲಿ ಭೂಸ್ವಾಧಿನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಚಿತ್ರದುರ್ಗ | ತುರುವನೂರಿನ ಮಾಜಿ MLC ಎನ್.ತಿಪ್ಪಣ್ಣ ಇನ್ನಿಲ್ಲ
ಸಾರ್ವಜನಿಕರು ಹಾಗೂ ಹೋರಾಟ ಸಮಿತಿಯವರು ತಾಲ್ಲೂಕು ಆಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252