Chitradurga news|nammajana.com|27-7-2024
ನಮ್ಮಜನ.ಕಾಂ, ಚಿತ್ರದುರ್ಗ: ಹಣಕಾಸು ವ್ಯವಹಾರದಲ್ಲಿ ಹಣ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ (PDO SASPENDED) ಚಿಕ್ಕಗೊಂಡನಹಳ್ಳಿ ಪಿ.ಡಿ.ಓ ಎನ್.ಪಾಲಯ್ಯ ಅವರನ್ನು ಅಮಾನತುಗೊಳಿಸಿ, ಅವರ ವಿರುದ್ದ ವಿಚಾರಣೆ ಕಾಯ್ದಿರಿಸಿ, ಜಿಲ್ಲಾ ಪಂಚಾಯತ ಸಿಇಓ ಎಸ್.ಜೆ.ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.
ನನ್ನಿವಾಳ ಗ್ರಾ.ಪಂ. ಪಿಡಿಓ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಎನ್.ಪಾಲಯ್ಯ ಅವರು ಗ್ರಾ.ಪಂ. ಸಿಬ್ಬಂದಿ ವೇತನ, 14 ಮತ್ತು 15ನೇ ಹಣಕಾಸು ಯೋಜನೆ ಅನುದಾನ, ಲೇ ಔಟ್‌ಗಳ ತೆರಿಗೆ ಹಾಗೂ ಶುಲ್ಕ ಸಂಗ್ರಹದ ವ್ಯವಹಾರದಲ್ಲಿ ಹಣಕಾಸಿನ (PDO SASPENDED) ದುರಪಯೋಗ ತೋರಿದ್ದಾರೆ,
ಪಿಡಿಓ ಅಮಾನತು ಮಾಡಲು ಮುಖ್ಯ ಕಾರಣಗಳು (PDO SASPENDED)
- ಗ್ರಾಮ ಪಂಚಾಯತಿ ಸಿಬ್ಬಂದಿ ವೇತನವನ್ನು ದುರುಪಯೋಗ ಪಡಿಸಿಕೊಂಡಿರುವುದು.
- ಗ್ರಾಮ ಪಂಚಾಯತಿಯ 14 ಮತ್ತು 15ನೇ ಹಣಕಾಸು ಯೋಜನೆಯ ಹಣ ದುರುಪಯೋಗ (PDO SASPENDED( ಪಡಿಸಿಕೊಂಡಿರುವುದು.
- ರಿ.ಸರ್ವೆ ಸಂಖ್ಯೆ 245 ಭೂತಯ್ಯ ಲೇಔಟ್ (ಪಾರ್ಕ್ ಜಾಗವನ್ನು) ನಿಯಮ ಬಾಹಿರವಾಗಿ ನಿವೇಶನ ಮಾಡಿರುವ ಬಗ್ಗೆ.
- ವೆಂಕಟೇಶ್ವರ ನಗರದ ರಿ.ಸರ್ವೆ ಸಂಖ್ಯೆ 128 ರಲ್ಲಿ ಕಿವುಡ ಮೂಗರಿಗೆ ಹಂಚಿಕೆಯಾದ ನಿವೇಶನ ದುರ್ಬಳಕೆ.
- ನನ್ನಿವಾಳ ಗ್ರಾಮ ಪಂಚಾಯತಿಯಲ್ಲಿ ರಚನೆಯಾಗಿರುವ ಹೊಸ ವಸತಿ ಬಡಾವಣೆಗಳ ಮಾಲೀಕರಿಂದ ಹಣವನ್ನು ಸಂಗ್ರಹಿಸಿಯೂ ಸಹ ತೆರಿಗೆಗಳು, ಅಭಿವೃದ್ಧಿ ಶುಲ್ಕಗಳು ಹಾಗೂ ಇತರೆ ಶುಲ್ಕಗಳನ್ನು ಗ್ರಾಮ ಪಂಚಾಯತಿಗೆ ಪಾವತಿಸದೇ ಸ್ವಂತಕ್ಕೆ ಬಳಸಿಕೊಂಡು ಸರ್ಕಾರಕ್ಕೆ (PDO SASPENDED) ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿರುವ ಬಗ್ಗೆ.
- ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಆಯಿಲ್‌ಮಿಲ್ ಮತ್ತು ಜಲ್ಲಿ ಕ್ರಷರ್‌ಗಳಿಂದ ವೈಯಕ್ತಿಕವಾಗಿ ಲಾಭ ಪಡೆದುಕೊಂಡು ಅವೈಜ್ಞಾನಿಕವಾಗಿ ಸಣ್ಣ ಮೊತ್ತದ ತೆರಿಗೆ ಸಂಗ್ರಹಿಸಿ ಗ್ರಾಮ ಪಂಚಾಯತಿಗೆ ಆರ್ಥಿಕ ನಷ್ಟ ಉಂಟು ಮಾಡಿರುವ ಬಗ್ಗೆ.
ಸಮಯ ಕೊಟ್ಟರು ಉತ್ತರ ಕೊಡಲಿಲ್ಲ ಪಿಡಿಓ (PDO SASPENDED)
ಅದರಂತೆ ಮೇಲ್ಕಂಡಂತಹ ಆರೋಪಗಳ ಕುರಿತು ಲಿಖಿತ ಸಮಜಾಯಿಷಿಯನ್ನು ಸಲ್ಲಿಸುವಂತೆ ಉಲ್ಲೇಖ(2)ರಲ್ಲಿ ಈ (PDO SASPENDED) ಕಾರ್ಯಾಲಯದಿಂದ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿರುತ್ತದೆ.
ಉಲ್ಲೇಖ(3)ರಲ್ಲಿ ಆಪಾದಿತ ನೌಕರರು ಆರೋಪಗಳ ಕುರಿತು ದಾಖಲಾತಿಗಳನ್ನು ಖುದ್ದು ವೀಕ್ಷಿಸಲು ನನಗೆ 15 ದಿನಗಳ ಕಾಲಾವಕಾಶವನ್ನು ನೀಡಿದಲ್ಲಿ ಸಂಬಂಧಪಟ್ಟ ನನ್ನಿವಾಳ ಗ್ರಾಮ ಪಂಚಾಯಿತಿಯಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ (PDO SASPENDED) ಮಾಹಿತಿಯನ್ನು ಲಿಖಿತ ಉತ್ತರದೊಂದಿಗೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಕೋರಿರುತ್ತಾರೆ.
ಇದನ್ನೂ ಓದಿ: Kannada Dina Bhavishya: ದಿನ ಭವಿಷ್ಯ ಯಾವ ರಾಶಿಗೆ ಶುಭ ಅಶುಭ? 27-7-2024
ಆದರೆ ಸದರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರುPDO SASPENDED) ಇದುವರೆವಿಗೂ ತಮ್ಮ ಲಿಖಿತ ಸಮಜಾಯಿಷಿಯನ್ನು ಸಲ್ಲಿಸಿರುವುದಿಲ್ಲ.
ಇವೆಲ್ಲವನ್ನೂ ಪರಿಗಣಿಸಿ ಜಿಲ್ಲಾ ಪಂಚಾಯತ ಸಿಇಓ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.