
Chitradurga news | nammajana.com | 20-8-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಕಾಲ್ಗೆರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಎಸ್.ಬಸವರಾಜ್ ಅವರನ್ನು ಸಸ್ಪೆಂಡ್ ಮಾಡಿ ಜಿಲ್ಲಾ ಪಂಚಾಯತ ಸಿಇಓ ಎಸ್.ಜೆ.ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
ಯರಬಳ್ಳಿ ಗ್ರಾಮ (PDO Suspended) ಪಂಚಾಯತಿ, ಹಿರಿಯೂರು ತಾಲ್ಲೂಕು, ಪ್ರಸ್ತುತ ಕಾಲ್ಕೆರೆ ಗ್ರಾಮ ಪಂಚಾಯತಿ, ಚಿತ್ರದುರ್ಗ ತಾಲ್ಲೂಕು ಇವರು ಸರ್ಕಾರಿ ಹಣ ದುರುಪಯೋಗ, ಸ್ಪಷ್ಟವಾಗಿ ಉಲ್ಲಂಘಿಸಿರುತ್ತಾರೆ.

ಅಮಾನತ್ತು ಅವಧಿಯಲ್ಲಿ, ಈ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರಸ್ಥಾನ ಬಿಡುವಂತಿಲ್ಲ ಮತ್ತು ಅನ್ಯ (PDO Suspended) ಉದ್ಯೋಗದಲ್ಲಿ ತೊಡಗುವಂತಿಲ್ಲ ಹಾಗೂ ನಿಯಮಾನುಸಾರ ಜೀವನಾಧಾರ ಭತ್ಯೆಗೆ ಅರ್ಹರಿರುತ್ತಾರೆ ಎಂದು ತಿಳಿಸಿದ್ದಾರೆ.
ಸರ್ಕಾರದ ಮಾನದಂಡ ಉಲ್ಲಂಘನೆ ಮತ್ತು ಸಸ್ಪೆಡ್ ಗೆ ಕಾರಣ ಇಲ್ಲಿದೆ.(PDO Suspended)
ಹಾಗು ಅಂಗನವಾಡಿ ಕಟ್ಟಡಗಳಿಗೆ ಸಂಬಂಧಿಸಿದ ಪರಿಹಾರ ಧನವನ್ನು ಸಂಬಂಧಿಸಿದ ಇಲಾಖೆಯಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರಿಗೆ ಬೇಡಿಕೆ ವಹಿಯಲ್ಲಿನಂತೆ (PDO Suspended) ದಾಖಲೆಗಳನ್ನು ಒದಗಿಸಿ ಅವರ ಬ್ಯಾಂಕ್ ಖಾತೆಗೆ ಪರಿಹಾರ ಧನ ಬಿಡುಗಡೆಗೊಳ್ಳುವಂತೆ ಕ್ರಮವಹಿಸಬೇಕಿರುತ್ತದೆ.
ಆದರೆ ಪಿಡಿಒ ರವರು ಬೇಡಿಕೆ ವಹಿಯಲ್ಲಿ ಯರಬಳ್ಳಿ ಗ್ರಾಮದ ಬೇಡಿಕೆ ವಹಿಯ ಕ್ರಸಂ:435 ರಲ್ಲಿ ಅಂಗನವಾಡಿ ಕೇಂದ್ರ ಭಾಗ-01 ಯರಬಳ್ಳಿ ಮತ್ತು ಕ್ರಸಂ:435ಎ ಅಂಗನವಾಡಿ (PDO Suspended) ಕೇಂದ್ರ ಭಾಗ-02 ಯರಬಳ್ಳಿ (20+20 ಅಡಿಗಳು) ಎಂದು ನಮೂದು ಇದ್ದಾಗ್ಯೂ ಆ ಇಲಾಖೆಗೆ ಪರಿಹಾರ ಧನ ಬಿಡುಗಡೆಗೆ ಕ್ರಮವಹಿಸದೇ ಗ್ರಾಪಂ ಗೆ ಪರಿಹಾರ ಧನ ಪಡೆದಿರುತ್ತಾರೆ.
ಸದರಿ ಪರಿಹಾರ ಧನ ರೂ.12,29,830/-ಗಳನ್ನು ಪಡೆದ ನಂತರವೂ ಮ.ನರೇಗಾ ಯೋಜನೆ ಮತ್ತು ಸದರಿ ಪರಿಹಾರದ ಮೊತ್ತದಲ್ಲಿ ಒಗ್ಗೂಡಿಸುವಿಕೆ ಕ್ರಿಯಾಯೋಜನೆ ತಯಾರಿಸಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಬೇಕಾಗಿತ್ತು.
ಅಂಗನವಾಡಿ ಕಟ್ಟಡ ನಿರ್ಮಾಣ ಮಾಡದೇ (PDO Suspended) ರೂ.12,29,830/-ಗಳ ಮೊತ್ತವನ್ನು ಬೇರೆ ಉದ್ದೇಶಕ್ಕೆ ಬಳಸಿ ಹಣ ದುರುಪಯೋಗಪಡಿಸಿಕೊಂಡಿರುತ್ತಾರೆ ಮತ್ತು ಪರಿಶೀಲನಾ ತಂಡಕ್ಕೆ ಅಗತ್ಯವಾದ ದಾಖಲೆಗಳನ್ನು ಒದಗಿಸದೆ ಕರ್ತವ್ಯ ನಿರ್ಲಕ್ಷತನ ತೋರಿರುತ್ತಾರೆ.
ಇದನ್ನೂ ಓದಿ: ನುಡಿದಂತೆ ನಡೆದ ಸರ್ಕಾರ ನಮ್ಮದು: ಶಾಸಕ ಟಿ.ರಘುಮೂರ್ತಿ | MLA T. Raghumurthy
ಪ್ರಯುಕ್ತ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಹಾಗೂ ಸರ್ಕಾರಿ ನಿಯಮಗಳನ್ನು ಪಾಲಿಸದೇ ಕರ್ತವ್ಯ ಲೋಪವೆಸಗಿರುವ ಶ್ರೀ ಎಸ್.ಬಸವರಾಜ್, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಯರಬಳ್ಳಿ ಗ್ರಾಪಂ ಹಾಗೂ ಹಾಲಿ ಪಿಡಿಓ, ಗ್ರಾ.ಪಂ-ಕಾಲ್ಲೆರೆ ಚಿತ್ರದುರ್ಗ ತಾಲ್ಲೂಕು ಇವರ ವಿರುದ್ಧ (PDO Suspended) ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಗಳು-1957ರ ನಿಯಮ 10ರನ್ವಯ ಅಮಾನತ್ತುಗೊಳಿಸಲು ಹಾಗೂ ನಿಯಮ 11 ರಂತೆ ಇಲಾಖಾ ವಿಚಾರಣೆ ನಡೆಸಲು ಈ ಕೆಳಕಂಡ ದಾಖಲೆಗಳೊಂದಿಗೆ ಶಿಸ್ತುಕ್ರಮ ಕೈಗೊಳ್ಳಲು ಹಾಗೂ ಭಾರತ ದಂಡಸಂಹಿತರನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಕೋರಲಾಗಿರುತ್ತದೆ.
ಸದರಿ ವರದಿಯನ್ವಯ ಲಿಖಿತ ಸಮಜಾಯಿಷಿಯನ್ನು ಸಲ್ಲಿಸುವಂತೆ ಉಲ್ಲೇಖ(2)ರಲ್ಲಿ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿರುತ್ತದೆ.
ಅದರಂತೆ ಉಲ್ಲೇಖ (3)ರಲ್ಲಿ ಸದರಿ ನೌಕರರು ಸಲ್ಲಿಸಿರುವ ಸಮಜಾಯಷಿಯನ್ನು ಒಪ್ಪಲು ಸಾಧ್ಯವಿಲ್ಲದ ಕಾರಣ ಉಲ್ಲೇಖ(4)ರಲ್ಲಿ, ಸದರಿಯವರಿಗೆ (PDO Suspended) ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ-11 (4) ರಂತೆ, ದೋಷಾರೋಪಣಾ ಪಟ್ಟಿಯೊಂದಿಗೆ (ಅನುಬಂಧ-01 ರಿಂದ 04 ರವರೆಗೆ) ಕಾರಣ ಕೇಳಿ ನೋಟೀಸ್ ಜಾರಿಮಾಡುತ್ತಾ, ಲಿಖಿತ ರಕ್ಷಣಾ ಹೇಳಿಕೆ ಸಲ್ಲಿಸಲು ತಿಳಿಸಲಾಗಿರುತ್ತದೆ.
ಉಲ್ಲೇಖ(5)ರಲ್ಲಿ ಸದರಿ ನೌಕರರು ಸಮಜಾಯಿಷಿಯನ್ನು ಸಲ್ಲಿಸಿದ್ದು, ಸದರಿ ಸಮಜಾಯಿಷಿಯು ಸಮರ್ಪಕವಾಗಿರುವುದಿಲ್ಲ.
ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಶೀಲಿಸಿದಂತೆ. ಶ್ರೀ ಬಸವರಾಜ್.ಎಸ್, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯರಬಳ್ಳಿ ಗ್ರಾಮ ಪಂಚಾಯತಿ, ಹಿರಿಯೂರು ತಾಲ್ಲೂಕು, ಪ್ರಸ್ತುತ ಕಾಲಗೆರೆ ಗ್ರಾಮ ಪಂಚಾಯತಿ, ಚಿತ್ರದುರ್ಗ ತಾಲ್ಲೂಕು ಇವರು ಒಬ್ಬ ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಯಾಗಿ, (PDO Suspended) ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ನಡವಳಿ) ನಿಯಮಾವಳಿಗಳು-1966ರ, ನಿಯಮ-3(i) (ii)&(iii)ನ್ನು, ಉಲ್ಲಂಘಿಸಿರುವುದು, ಕಂಡು ಬಂದಿರುವ ಕಾರಣ ಸದರಿ ಅಧಿಕಾರಿಯವರನ್ನು ಅಮಾನತ್ತುಗೊಳಿಸುವುದು ಸೂಕ್ತವೆಂದು ಪರಿಗಣಿಸಿ ಈ ಕೆಳಕಂಡಂತೆ ಆದೇಶಿಸಿದೆ.
