Chitradurga news|nammajana.com|26-7-2024
ನಮ್ಮಜನ.ಕಾಂ, ಚಿತ್ರದುರ್ಗ: ಹಣಕಾಸು ವ್ಯವಹಾರದಲ್ಲಿ ಹಣ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ (PDO Suspended ಚಿಕ್ಕಗೊಂಡನಹಳ್ಳಿ ವರ್ಗಾವಣೆ ಆದರು ಅವರನ್ನು ಆಡಳಿತ ಹಿತ ದೃಷ್ಟಿಯಿಂದ ನಂತರ ಅನ್ಯಾಳ್ ಗ್ರಾಮ ಪಂಚಾಯತಿಗೆ ವರ್ಗಾವಣೆ ಮಾಡಿದ್ದ ಪಿ.ಡಿ.ಓ ಎನ್.ಪಾಲಯ್ಯ ಅವರನ್ನು ಅಮಾನತುಗೊಳಿಸಿ, ಅವರ ವಿರುದ್ದ ವಿಚಾರಣೆ ಕಾಯ್ದಿರಿಸಿ, ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.
14 -15 ನೇ ಹಣಕಾಸು ದುರುಪಯೋಗ (PDO Suspended)
ನನ್ನಿವಾಳ ಗ್ರಾ.ಪಂ. ಪಿಡಿಓ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಎನ್.ಪಾಲಯ್ಯ ಅವರು ಗ್ರಾ.ಪಂ. ಸಿಬ್ಬಂದಿ ವೇತನ, 14 ಮತ್ತು 15ನೇ ಹಣಕಾಸು ಯೋಜನೆ ಅನುದಾನ, ಲೇ ಔಟ್‌ಗಳ ತೆರಿಗೆ ಹಾಗೂ ಶುಲ್ಕ ಸಂಗ್ರಹದ ವ್ಯವಹಾರದಲ್ಲಿ ಹಣಕಾಸಿನ (PDO Suspended) ದುರಪಯೋಗ ತೋರಿದ್ದಾರೆ.
ಕಡಿಮೆ ತೆರಿಗೆ ವಿಧಿಸಿ ಗ್ರಾ.ಪಂ. ಆರ್ಥಿಕ ನಷ್ಟ (PDO Suspend)
ಇದರ ಜೊತೆಗೆ ಕಿವುಡ ಹಾಗೂ ಮೂಗರ ನಿವೇಶನಗಳ ಹಂಚಿಕೆ, ವೈಯಕ್ತಿಕ ಲಾಭಕ್ಕಾಗಿ ಆಯಿಲ್ ಮಿಲ್, ಜಲ್ಲಿ (PDO Suspended) ಕ್ರಷರ್‌ಗಳಿಗೆ ಕಡಿಮೆ ತೆರಿಗೆ ವಿಧಿಸಿ ಗ್ರಾ.ಪಂ.ಗೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪಕ್ಕೆ ಗುರಿಯಾಗಿದ್ದರು.
ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನೀಡಿದ (PDO Suspended) ನೋಟಿಸ್‌ಗೂ ಸರಿಯಾದ ಉತ್ತರ ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ.
ಇದನ್ನೂ ಓದಿ: Kargil Victory: ದೇಶದ ಒಳಗೆ ನಾವು ನೆಮ್ಮದಿಯಿಂದ ಇರಲು ಸೈನಿಕರು ಕಾರಣ: ಜಿ.ಹೆಚ್.ತಿಪ್ಪಾರೆಡ್ಡಿ
ಈ ಹಿನ್ನಲೆಯಲ್ಲಿ ಚಳ್ಳಕೆರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯಿಂದ ವರದಿ ಪಡೆದು, ನಿಯಮಾನುಸಾರ ಎನ್. ಪಾಲಯ್ಯ ಅವರನ್ನು ಅಮಾನತುಗೊಳಿಸಲಾಗಿದೆ (PDO Suspended) ಎಂದು ಸಿಇಓ ಎಸ್.ಜೆ.ಸೋಮಶೇಖರ್ ಆದೇಶದಲ್ಲಿ ತಿಳಿಸಿದ್ದಾರೆ.