Chitradurga news|nammajana.com|27-6-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ತಮ್ಮ ಮನೆಯ ಮೇಲ್ಭಾಗದ ಮಣ್ಣಿನ (person died due soil collapse) ಚಾವಣಿಯನ್ನು ಮುಚ್ಚುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮಣ್ಣು ಕುಸಿದು ಬಿದ್ದು ಮನೆಯವರಾದ ಮುರುಳೀಧರ (೪೫) ಚಿತ್ರದುರ್ಗ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅವರೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣಪ್ಪ ಎಂಬ ವ್ಯಕ್ತಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾನೆ.
ಗ್ರಾಮದಲ್ಲಿ ಹಲವಾರು ಮಣ್ಣಿನ ಮಾಳಿಗೆಗಳಿದ್ದು ತಮ್ಮ ಮನೆಯ ಮಾಳಿಗೆಗೆ ಮಣ್ಣನ್ನು ಹಾಕುವ ಸಂದರ್ಭದಲ್ಲಿ ಈ ಅವಘಡ (person died due soil collapse) ಸಂಭವಿಸಿದೆ. ಮಣ್ಣು ಕುಸಿದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮುರುಳೀಧರವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ಇದನ್ನೂ ಓದಿ: ದಿನ ಭವಿಷ್ಯ 27-6-2024 | Dina Bhavishya kannada
ತಹಶೀಲ್ಧಾರ್ ರೇಹಾನ್‌ಪಾಷ ಸ್ಥಳಕ್ಕೆ (person died due soil collapse) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂದಾಯಾಧಿಕಾರಿ ಲಿಂಗೇಗೌಡ, ಪಿಎಸ್‌ಐ ಧರೆಪ್ಪಬಾಳಪ್ಪದೊಡ್ಡಮನಿ ಮುಂತಾದವರು ಭೇಟಿ ನೀಡಿದ್ದರು.