
Chitradurga news|nammajana.com|29-03-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಗೌರಸಮುದ್ರಕಾವಲು ವಾಸಿಗಳಾದ ರುದ್ರಪ್ಪ, ತುಳಸಮ್ಮ ದಂಪತಿಗಳ ಪುತ್ರ ರೈತಾಪಿ (PHD) ಕುಟುಂಬದ ಹಿನ್ನೆಲೆಯ ಆರ್.ಕೇದಾರನಾಥಸ್ವಾಮಿಗೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ಘೋಷಿಸಿದೆ.
ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಸಹಪ್ರಾಧ್ಯಾಕರಾಗಿ ಕಾರ್ಯನಿರ್ವಹಿಸುತ್ತಿರುವ ಆರ್.ಕೇದಾರನಾಥಸ್ವಾಮಿ ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಬೆಳಗಾವಿಯ ರಾಣಿಚನ್ನಮ್ಮವಿಶ್ವವಿದ್ಯಾಲಯದ ಕುಲಸಚಿವರ(ಮೌಲ್ಯಮಾಪನ) ಡಾ.ರವೀಂದ್ರನಾಥ ಎನ್.ಕದಮ್ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ (PHD) ‘ಫೈನಾನ್ಸಿಯಲ್ ಅಸೆಸ್‍ಮೆಂಟ್ ಆಫ್ ಡಿಸ್ಟಿಕ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಇನ್ ಕರ್ನಾಟಕ ಎ-ಕಂಪ್ಯಾರಿಟೀವ್ ಸ್ಟಡಿ’ ವಿಷಯಕ್ಕೆ ಮಂಡಿಸಿದ ಪ್ರಬಂಧಕ್ಕೆ ಪಿಎಚ್‍ಡಿ ಪದವಿ ಘೋಷಿಸಲಾಗಿದೆ.

ಇದನ್ನೂ ಓದಿ: Accident | ಟಿಟಿ ಬಸ್ ಅಪಘಾತ, ಮೂವರು ಸಾವು
ಶೀಘ್ರದಲ್ಲೇ ವಿಶ್ವವಿದ್ಯಾಲಯದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಪಿಎಚ್‍ಡಿ ಪದವಿ ಪ್ರಧಾನವಾಗಲಿದೆ.
