Chitradurga news|nammajana.com|18-6-2024
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ನಡೆಯುವ ಗೃಹಾಧಾರಿತ ಮತ್ತು ಶಾಲಾಧಾರಿತ ಶಿಕ್ಷಣ ಪಡೆಯುತ್ತಿರುವ 93 ಮಕ್ಕಳಿಗೆ ಫಿಜಿಯೋಥೆರಪಿಸ್ಟ್ ಸೇವೆ (Physiotherapy) ಪಡೆಯಲು ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಅರ್ಜಿ ಆಹ್ವಾನಿಸಿದೆ.

ಇದನ್ನೂ ಓದಿ: Dina Bhavishya kannada: ಇಂದಿನ ದಿನ ಭವಿಷ್ಯ 18-6-2024
ಡಿ.ಪಿ.ಟಿ, ಬಿ.ಪಿ.ಟಿ ಅರ್ಹ ವಿದ್ಯಾರ್ಹತೆ ಹೊಂದಿರುವ (Physiotherapy) ಅಭ್ಯರ್ಥಿಗಳಿಂದ ಇದೇ ಜೂನ್ 20ರೊಳಗೆ ಅರ್ಜಿಗಳನ್ನು ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣ ಬಿ.ಆರ್.ಸಿ ಕಚೇರಿಗೆ ಸಲ್ಲಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕ ಕ್ಷೇತ್ರ ಸಮನ್ವಯಾಧಿಕಾರಿ ತಿಳಿಸಿದ್ದಾರೆ.
