Chitradurga news|nammajana.com|31-1-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್ಡಿ) ಬ್ಯಾಂಕ್ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಿ.ಜೆ.ಶಿವಪ್ರಸಾದ್, ಉಪಾಧ್ಯಕ್ಷರಾಗಿ ಎಂ.ಎನ್.ಶರಣಪ್ಪ (PLD Bank Chitradurga)ವಿರೋಧವಾಗಿ ಆಯ್ಕೆಯಾದರು.
ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಪಿಳ್ಳೆಕರನಹಳ್ಳಿ ಶಿವಪ್ರಸಾದ್ ಅಧ್ಯಕ್ಷ ಸ್ಥಾನಕ್ಕೆ ಮತ್ತು ಎಂ.ಎನ್.ಶರಣಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದೆ (PLD Bank Chitradurga) ಮಾಡಿದ್ದರು ಆದರೆ ಯಾರು ಇವರ ವಿರುದ್ದ ನಾಮಪತ್ರ ಸಲ್ಲಿಸದ ಹಿನ್ನೆಲೆ ಅವಿರೋಧವಾಗಿ ಇಬ್ಬರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.
ನೂತನ ಅಧ್ಯಕ್ಷ ಪಿ.ಜೆ.ಶಿವಪ್ರಸಾದ್ ಮಾತನಾಡಿ ಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿರುವ ತಾಲೂಕಿನ ರೈತರಿಗೆ ಪಿಎಲ್ಡಿ ಬ್ಯಾಂಕ್ ಮೂಲಕ ಸಿಗಬಹುದಾದ ಸರ್ಕಾರದ ವಿವಿಧ ಬಗೆಯ ಸಾಲ ಸವಲತ್ತು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ನಮ್ಮ ತಂದೆಯ ಕಾಲದಿಂದಲೂ ನಮಗೆ ಪಿಎಲ್ ಡಿ ಬ್ಯಾಂಕ್ ಜೊತೆ ಒಡನಾಟವಿದೆ. ನಮ್ಮ ತಂದೆ ಸಹ ಇಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ನಾನು ಸಹ ಬ್ಯಾಂಕ್ನ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚು ಮಾಡುವ ಜೊತೆಗೆ, ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಮತ್ತು ಹಿರಿಯ ಸಹಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಬ್ಯಾಂಕ್ನ (PLD Bank Chitradurga) ಅಭಿವೃದ್ಧಿಗೆ ಪೂರಕವಾಗಿ ಕ್ರಮವಹಿಸಲಾಗುವುದು ಎಂದರು.
ಸಂಸ್ಥೆಗೆ ನಾನು ಅಧ್ಯಕ್ಷನಾಗಲು ಕಾರಣಕರ್ತರಾದ ಎಲ್ಲಾ ಮತದಾರರಿಗೆ ಮತ್ತು ನಿರ್ದೇಶಕರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾರಿಗೂ ಧನ್ಯವಾದಗಳು (PLD Bank Chitradurga) ತಿಳಿಸುತ್ತೇನೆ ಎಂದರು.
ಅವಿರೋಧ ಆಯ್ಕೆಯಾಗುತ್ತಿದ್ದಂತೆ ಬ್ಯಾಂಕ್ನ ಮುಂಭಾಗದಲ್ಲಿ ಅಭಿಮಾನಿಗಳು, @a ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಇದನ್ನೂ ಓದಿ: BUS PASS | ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ಬಸ್ ಪಾಸ್ | ಆನ್ಲೈನ್ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ನಿರ್ದೇಶಕರಾದ ಜೆ.ಶಿವಪ್ರಕಾಶ್, ಕೆ.ಆರ್.ರವಿ, ಪಿ.ಎಸ್.ಜಗದೀಶ್, ಎನ್.ಎಸ್.ಮಾರುತಿ, ವನಜಾಕ್ಷಮ್ಮ, ಹೆಚ್.ಸಿ.ವಿಜಯಕುಮಾರ್, ಮಣ್ಣೆರು ನಾಗಪ್ಪ, ಕೆ.ಸಿ.ಮೌನೇಶ್, ಕೆ.ಎಸ್.ಸತೀಶ್, ಎನ್.ಆರ್.ಕೋಟ್ರೇಶ್, ಪದ್ಮ, ಕೆ.ಜೆ.ಸುನೀಲ್ ಇದ್ದರು.