Chitradurga | nammajana.com | 22-8-2024
ನಮ್ಮಜನ.ಕಾಂ, ಚಿತ್ರದುರ್ಗ: ನಾಯಕನಹಟ್ಟಿ ಪೊಲೀಸ್ ಠಾಣೆ ಮುಂಭಾಗದಲ್ಲಿನ ದೊಡ್ಡಚರಂಡಿ ಬ್ಲಾಕ್ ಆಗಿದೆ. ಹೀಗಾಗಿ (Police Station) ಚರಂಡಿಯ ಮೂಲಕ ಹರಿಯಬೇಕಿದ್ದ ನೀರು ಠಾಣೆ ಆವರಣಕ್ಕೆ ನುಗ್ಗಿದೆ.
ಹೀಗಾಗಿ ಇಡೀ ಠಾಣೆ ಜಲಾವೃತಗೊಂಡಿತ್ತು. ಮೊಳಕಾಲುದ್ದದ ನೀರನ್ನು ದಾಟಿ ಠಾಣೆಗೆ ಹೋಗಬೇಕಾಗಿತ್ತು. ನಾನಾ (Police Station) ಅಪಘಾತಗಳಿಂದ ಪೊಲೀಸ್ ಠಾಣೆಗೆ ತಂದಿದ್ದ 30ಕ್ಕೂ ಹೆಚ್ಚು ಬೈಕ್‌ಗಳು ನೀರಿನಿಂದ ಆವರಿಸಿದ್ದವು. ಬೆಳಗ್ಗೆ 10 ಗಂಟೆಯ ವೇಳೆಗೆ ಪೌರ ಕಾರ್ಮಿಕರು ಚರಂಡಿ ಬ್ಲಾಕ್ ತೆರವುಗೊಳಿಸಿದರು.
ರುದ್ರಭೂಮಿ ಮತ್ತು ಖಬರ್ ಸ್ಥಾನದ ಕಡೆಯಿಂದ ಹರಿದು ಬರುವ ರಾಜಕಾಲುವೆ ಪೊಲೀಸ್ ಠಾಣೆ ಮುಂದೆ (Police Station) ಕಿರಿದಾಗಿರುವುದರಿಂದ ಹೆಚ್ಚಿನ ಮಳೆಯಾದರೆ ಠಾಣೆ ಜಲಾವೃತವಾಗುತ್ತದೆ.
ಇದನ್ನೂ ಓದಿ: ಹೊಸದುರ್ಗ ಪುರಸಭಾ ಅಧ್ಯಕ್ಷ ಸ್ಥಾನ ಯಾರ ಪಾಲಾಗಬಹುದು? Hosadurga News
ಪಪಂ ರಾಜಕಾಲುವೆ ಬ್ಲಾಕ್ ಆಗದಂತೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಹಾಗೂ ಪೊಲೀಸ್ ಸಿಬ್ಬಂದಿ (Police Station) ಒತ್ತಾಯವಾಗಿದೆ.