Chitradurga news | nammajana.com | 13-07-2025
ನಮ್ಮಜನ.ಕಾಂ, ಚಳ್ಳಕೆರೆ: ಎರಡು ಕಾಲು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ(Maize) ಕಾಳು ಕಟ್ಟಿಲ್ಲ, ಹಣ, ಶ್ರಮ, ಕನಸು, ಈ ವರ್ಷದ ಭವಿಷ್ಯ ಎಲ್ಲವೂ ಮಣ್ಣಿನಲ್ಲಿ ಮಣ್ಣಾಗಿ ರೈತ ದಿಗೂಢನಾಗಿದ್ದಾನೆ.
ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ರೈತ ಸಂಘ ವಿರೋಧ

ತಾಲೂಕಿನ ಸಾಣಿಕೆರೆ ಗ್ರಾಮದ ರೈತ ನಿಂಗಪ್ಪನ ಈ ವರ್ಷದ ಮುಂಗಾರು ಹಂಗಾ ಮಿನ ಮೆಕ್ಕೆಜೋಳ ಬೆಳೆಯ ಕತೆಯಿದು.
ಚಳ್ಳಕೆರೆಯ ಖಾಸಗಿ ರಸಗೊಬ್ಬರ ಅಂಗಡಿ ‘ಯಲ್ಲಿ 1900 ರೂ.ನಂತೆ 4 ಪ್ಯಾಕೇಟ್ ಮೆಕ್ಕೆ ಜೋಳ(Maize) ಬಿತ್ತನೆ ಬೀಜ ಖರೀದಿಸಿ, ತನ್ನ ಎರಡು ಕಾಲು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಕಳಪೆ ಬೀಜದಿಂದ ಬೆಳೆ ಕೈಕೊಟ್ಟಿದೆ. ಇದರಿಂದ ಚಿಂತಿತರಾಗಿರುವ ರೈತ, ದುಡ್ಡಿನ ಆಸೆಗಾಗಿ ಅಂಗಡಿಯವರು ಹೊಸ ತಳಿಯ ಕಳಪೆ ಬೀಜ ನೀಡಿದ್ದರಿಂದ ಈ ಸಮಸ್ಯೆ ಸಾಣಿಕೆರೆ ಗ್ರಾಮದ ರೈತನ ಅಳಲು ಜೊತೆಗೆ 90 ಸಾವಿರ ಖರ್ಚು ಮಾಡಿದ್ದೇನೆ.
ನಾಲ್ಕು ಕಾಸು ಮಾಡುವ ಆಸೆಗೆ ತಣ್ಣೀರು:
ಉತ್ತಮ ಫಸಲು ಬೆಳೆದು ನಾಲ್ಕು ಕಾಸು ಕಾಣಬೇಕು ಎಂಬ ಕನಸೊತ್ತು, ಭೂಮಿಯನ್ನು ಚೆನ್ನಾಗಿ ಹದಗೊಳಿಸಿ, ಫಲವತ್ತತೆ ಮಾಡಿಯೇ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ. 8 ಸಾವಿರದಂತೆ 8 ಟ್ಯಾಕ್ಟರ್ ಸಗಣಿ ಗೊಬ್ಬರ ಹಾಕಿದ್ದೆ ಜತೆಗೆ ರಾಸಾಯನಿಕ ಗೊಬ್ಬರ, ಬೀಜ, ಕೂಲಿ ಸೇರಿದಂತೆ 90 ಸಾವಿರ ಖರ್ಚು ಮಾಡಿದ್ದೇನೆ ಎಂದು ರೈತ ನಿಂಗಪ್ಪ ತನ್ನ ಬೇಸಾಯದ ಕತೆ ಹೇಳುತ್ತಾರೆ.
ಇದನ್ನೂ ಓದಿ: ಕಾರ್ಮಿಕ ಇಲಾಖೆಯಿಂದ SC-ST ಯುವಕರಿಗೆ “ಆಶಾದೀಪ ಯೋಜನೆ” ಜಾರಿ:Santhosh Lad
ಆದರೀಗ ಎರಡೂವರೆ ತಿಂಗಳು ಕಳೆದರೂ ನಿರೀಕ್ಷಿತ ಎತ್ತರಕ್ಕೆ ಬೆಳೆ ಬೆಳೆದಿಲ್ಲ. ಆಗಲೇ ಸೂಲಂಗಿ ಬಂದಿದೆ, ತೆನೆ ಒಡೆಯುತ್ತಿಲ್ಲ. ಅಲ್ಲೊಂದು ಇಲ್ಲೊಂದು ಒಡೆದ ತೆನೆ ಕಾಳು ಕಟ್ಟದೆ ಇಡೀ ಬೆಳೆಯೇ(Maize) ನಾಶವಾದಂತಾಗಿದೆ. ಬೀಜ ಕೊಟ್ಟ ಖಾಸಗಿ ಅಂಗಡಿಯವರು ಸ್ಪಂದಿಸುತ್ತಿಲ್ಲ, ಇದರಿಂದ ಕೃಷಿ ಇಲಾಖೆಗೆ ದೂರು ನೀಡಿದ್ದೇನೆ ಎನ್ನುತ್ತಾರೆ ರೈತ.
ಗ್ರಾಹಕರ ಕೋರ್ಟ್‌ಗೆ ಹೋಗಲು ಚಿಂತನೆ
ಸಗಣಿ ಗೊಬ್ಬರದಿಂದ ಭೂಮಿ ಫಲವತ್ತತೆ ಮಾಡಿ ಬಿತ್ತನೆ ಮಾಡಿದ್ದರಿಂದ 8 ಅಡಿಗಿಂತ ಉದ್ದ ಬೆಳೆಯಬೇಕಿದ್ದ ಬೆಳೆ ಮೂರು ಅಡಿ ಮಾತ್ರ ಬೆಳೆದಿದೆ. ಕಡ್ಡಿಯೂ ದಪ್ಪವಿಲ್ಲ, ಸೂಲಂಗಿ ಬಂದಿದೆ. ತೆನೆ ಒಡೆಯುತ್ತಿಲ್ಲ, ಇನ್ನೂ 50 ಕಡ್ಡಿಯಲ್ಲಿ ಒಂದು ಚಿಕ್ಕದಾದ ತೆನೆ ಬಂದಿದೆ ಅಷ್ಟೇ. ನನಗಿರುವ ಎರಡೂ ಕಾಲು ಎಕರೆಗೂ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ, ಆದರೆ ಈ ವರ್ಷ ಬೆಳೆಯೇ ಹೋಯಿತು. ಖರ್ಚು ಮಾಡಿರುವ ಲಕ್ಷ ಯಾರು ಕೊಡಬೇಕು? ಹಾಗಾಗಿ ಗ್ರಾಹಕರ ಕೋರ್ಟ್‌ಗೆ ಹೋಗಬೇಕು ಎಂದು ಚಿಂತನೆ ನಡೆಸುತ್ತಿದ್ದೇನೆ ಎಂದು ರೈತ ನಿಂಗಪ್ಪ ತಮ್ಮ ನೋವು ತೋಡಿಕೊಳ್ಳುತ್ತಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252