Chitradurga news|Nammajana.com|20-7-2025
ನಮ್ಮಜನ.ಕಾಂ, ಚಳ್ಳಕೆರೆ: ದೇಶದ ಬೆನ್ನೆಲುಬು ಆಗಿರುವ ರೈತರ ಬದುಕು ಸೂಚನೀಯವಾಗಿದೆ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ (Poor seed) ತಾಲ್ಲೂಕು ಬಯಲು ಸೀಮೆಯ ಬರದ ನಾಡು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ತಾಲೂಕಿನಲ್ಲಿ ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಲಕ್ಷನು ಗಟ್ಟಲೆ ರೈತರು ಸಾಲ ಮಾಡಿ ಬೆಳೆ ಬೆಳೆಯಲು ಮುಂದಾಗತ್ತಿರುವ ರೈತರಿಗೆ ಖಾಸಗಿ ಅಂಗಡಿ ಮಾಲೀಕರು ರೈತರು ಕೇಳಿದ ಬಿತ್ತನೆ ಬೀಜ ನೀಡದೆ ಹೊಸ ತಳಿಯ ಮೆಕ್ಕೆಜೋಳ ಬೀಜ ಬಂದಿದೆ, ಉತ್ತಮ ಇಳುವರಿ ಬರುತ್ತದೆ ಎಂದು ರೈತರನ್ನು ನಂಬಿಸಿ ಮಾರಾಟ ಮಾಡ್ಡುತ್ತಿದ್ದು. ಅಧಿಕ (Poor seed) ಲಾಭ ಪಡೆಯಲು ಈ ಮೆಕ್ಕೆಜೋಳ ಬೀಜ ಬಿತ್ತನೆ ಮಾಡಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ರೈತರಿಗೆ ಕಳಪೆ ಮೆಕ್ಕೆಜೋಳ ಬೀಜ ಮಾರಾಟ ಮಾಡಿದ ಖಾಸಗಿ ಅಂಗಡಿ ಮೇಲೆ ಕ್ರಮ ಕೈಗೊಳ್ಳಲು ಕೃಷಿ ಇಲಾಖೆಗೆ ರೈತರು ಮನವಿ ನೀಡಿದರು ಸಹ ಮನವಿ ಪಡೆದ ಕೃಷಿ ಇಲಾಖೆ (Poor seed) ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ.ಕಳಪೆ ಮೆಕ್ಕೆಜೋಳ ನೀಡುವ ಮಾಲೀಕರಿಗೆ ಕಡಿವಾಣ ಹಾಕುವರು ಯಾರು ಎಂದು ರೈತರಿಗೆ ಯಕ್ಷ ಪ್ರಶ್ನೆಯಾಗಿದೆ.

ತಾಲ್ಲೂಕಿನ ಸಾಣೀಕೆರೆ ಗ್ರಾಮದ ನಿಂಗಪ್ಪ ಎಂಬ ರೈತ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ವಿನಾಯಕ ಪರ್ಟಿಲೈಜರ್ಸ್ ಅಂಗಡಿಯಲ್ಲಿ ಎರಡು ತಿಂಗಳ ಹಿಂದೆ 4 ಪಾಕೇಟ್ ಎಲ್.ಜಿ.36612 ಹೆಸರಿನ ಮೆಕ್ಕೆಜೋಳ ಬೀಜವನ್ನು ಖರೀದಿಸಿ, ಸರ್ವೆ ನಂ. 170/4 ರಲ್ಲಿ ಎರಡು ಎಕರೆ (Poor seed) ಜಮೀನಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಬಂಡವಾಳ ಹೂಡಿಕೆ ಮಾಡಿ ಬಿತ್ತನೆ ಮಾಡಿದ್ದು, ಬಿತ್ತನೆ ಮಾಡಿದ ಬೀಜ ಕಳಪೆ (Poor seed) ಆಗಿರುವುದರಿಂದ ಮೆಕ್ಕೆಜೋಳ ಫಸಲು ಬೆಳೆದರು ತೆನೆ ಕಟ್ಟದ ಬೆಳೆ ಬೆಳವಣಿಗೆಯಲ್ಲಿ ಕುಂಠಿತ ಆಗಿರುವುದರಿಂದ ಲಕ್ಷಾತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ರೈತರಿಗೆ ಸ್ಪಂದಿಸದ ಖಾಸಗಿ ಅಂಗಡಿ ಮಾಲೀಕರು* ಉತ್ತಮ ಇಳುವರಿ ಬರುತ್ತದೆ ಎಂದು ರೈತರನ್ನು ನಂಬಿಸಿ ಹೊಸ ತಳಿಯ ಎಲ್.ಜಿ.36612 ಬೀಜಗಳನ್ನು ವಿನಾಯಕ ಪರ್ಟಿಲೈಜರ್ಸ್ ಅಂಗಡಿಯಲ್ಲಿ ಮಾರಾಟ ಮಾಡಿದ್ದು ಇದನ್ನು ನಂಬಿ ಬಿತ್ತನೆ ಮಾಡಿದ ರೈತರಿಗೆ ಎರಡು ತಿಂಗಳು ಕಳೆದರೂ ಮೆಕ್ಕೆಜೋಳ ಬೆಳೆದಿಲ್ಲ, ಜೂಲಂಗಿ ಹೊಡೆದಿಲ್ಲ, ತೆನೆ ಕಟ್ಟಿಲ್ಲ, ಬೀಜ (Poor seed) ಕಳಪೆಯಾಗಿದೆ ಎಂದು ಅಂಗಡಿ ಮಾಲೀಕ ಮಂಜುನಾಥ್ ಹಾಗೂ ಶ್ರೀನಿವಾಸ್ ಅವರನ್ನು ಕೇಳಿದ್ದರೆ ರೈತರಿಗೆ ಸ್ಪಂದಿಸದೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ರೈತರು ನಂಬಿದ ಅಂಗಡಿಗಳೇ ಈ ರೀತಿ ಮೋಸ ಮಾಡಿದ್ದರೆ ರೈತರಿಗೆ ಉಳಿಗಾಲ ಎಲ್ಲಿದೆ ಎಂದು ಕಳಪೆ ಬೀಜ ಮಾರಾಟ ಮಾಡುವವರಿಗೆ ಕಡಿವಾಣ ಯಾವಾಗ ಎಂಬ ಪ್ರಶ್ನೆಯಾಗಿದೆ.
ರೈತರ ಮನವಿ ಪಡೆದು ನಿದ್ದೆಗೆ ಜಾರಿದ ಕೃಷಿ ಇಲಾಖೆ ಅಧಿಕಾರಿಗಳು (Poor seed)
ರೈತರಿಗೆ ಕಳಪೆ ಬೀಜ ಮಾರಾಟ ಮಾಡಿದರೆ ಅಂತಹಾ ಅಂಗಡಿಗಳ ಪರವಾನಿಗೆ ರದ್ದು ಮಾಡಿ, ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬ ಕೃಷಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ.
ಕಳಪೆ ಬೀಜ ಬಿತ್ತನೆ ಮಾಡಿ ಸಂಕಷ್ಟಕ್ಕೆ ಸಿಲುಕಿದ ರೈತ ನ್ಯಾಯ ಒದಗಿಸಲು ಮನವಿ ನೀಡಿದ್ದು ರೈತರಿಂದ ಮನವಿ ಪಡೆದ ಕೃಷಿ ಇಲಾಖೆಯ ಅಧಿಕಾರಿಗಳು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಿಂದ ವಿಜ್ಞಾನಿಗಳನ್ನು ಕರೆಸಿ ಪರಿಶೀಲನೆ ನಡೆಸುತ್ತೆವೆ ಎಂದು ಹೇಳಿದ್ದಾರೆ ಒರತು ಯಾವುದೇ ಕ್ರಮ ಕೈಗೊಳ್ಳದೆ ಕೃಷಿ ಇಲಾಖೆಯ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಕೃಷಿಯಲ್ಲಿ 20 ವರ್ಷದಿಂದ ಜೀವನ ನಿರ್ವಹಣೆ
20 ವರ್ಷದಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದು ನಮ್ಮ ಜಮೀನಿನಲ್ಲಿ ತೊಗರಿ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ರಾಗಿ, ಎಲ್ಲಾ ಬೆಳೆಯನ್ನು ಬೆಳೆಯುತ್ತಿದ್ದೇನೆ. ಈ ಬಾರಿ ಜಮೀನಿಗೆ ಸಾವಯವ ಗೊಬ್ಬರ ಹಾಕಿದ್ದೇನೆ ಭೂಮಿ ಫಲವತತ್ತೆ ಹೊಂದಿದೆ ಉತ್ತಮ ಇಳುವರಿ ಪಡೆಯ ಬೇಕು ಎಂದು ಬೀಜ ಕೇಳಿದಾಗ ಹೊಸ ತಳಿಯ ಬೀಜ ನೀಡಿದ್ದು ಹಾಕಿದ ಮೊದಲ ತಿಂಗಳಲ್ಲಿ ಉತ್ತಮವಾಗಿ ಪೈರು ಬೆಳೆಯಿತು ನಂತರ ಬೇರುಗಳೆಲ್ಲ ಕೊಳೆತು ತೆನೆ ಸರಿಯಾಗಿ ಕಟ್ಟದೆ ಗಿಡಗಳು ಬೆಳವಣಿಗೆಯಾಗದೆ ಇರುವುದನ್ನು ಗಮನಿಸಿ ಅಂಗಡಿ (Poor seed) ಮಾಲೀಕನಿಗೆ ಹೇಳಿದಾಗ ಅವರು ದಾವಣಗೆರೆಯಿಂದ ಕಂಪನಿಯವರನ್ನು ಕಳಿಸಿದಾಗ ನೋಡಿಕೊಂಡು ಹೋಗಿದ್ದಾರೆ.
ಅದಕ್ಕೆ ಏನು ಕಾರಣ ಎಂಬುದು ಪತ್ತೆ ಹಚ್ಚಿಲ್ಲ ಮತ್ತೆ ಅಂಗಡಿ ಮಾಲೀಕಮಂಜುನಾಥ್ ಹಾಗೂ ಶ್ರೀನಿವಾಸ್ ಅವರ ಕೇಳಿದಾಗ ಬಿತ್ತನೆ ಮಾಡಿದ ತಿಂಗಳು ಸರಿಯಿಲ್ಲ ಎಂದು ಹೇಳುತ್ತಾರೆ. ಕಳಪೆ ಬೀಜ ನೀಡಿದವರ ಮೇಲೆ ಕ್ರಮ ಜರುಗಿಸುವಂತೆ ಕೃಷಿ ಇಲಾಖೆಗೆ ಮನವಿ ಸಲ್ಲಿಸಿದಾಗ ಕೃಷಿ ವಿಜ್ಞಾನಿಗಳನ್ನು ಕಳುಹಿಸುತ್ತೇವೆ ಎಂದರು ಇಲ್ಲಿಯವರೆಗೂ ಯಾವ (Poor seed) ಅಧಿಕಾರಿಗಳು ಬಂದಿಲ್ಲ ಮೆಕ್ಕೆಜೋಳ ಬೆಳೆಯಲು ಲಕ್ಷಾಂತರ ರೂಪಾಯಿ ಹಣವನ್ನು ಸಾಲ ಪಡೆದಿದ್ದು ಎಲ್ಲವೂ ನಷ್ಟವಾಗಿದೆ.
ಇದನ್ನೂ ಓದಿ: suicide: ಮದುವೆಯ ಚಿಂತೆಯಲ್ಲಿ ಮನನೊಂದು ಹೋಂ ಗಾರ್ಡ್ ಆತ್ಮಹತ್ಯೆ
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಂಗಡಿ ಮಾಲೀಕರು ಕುಲಂಕುಶವಾಗಿ ಪರಿಶೀಲನೆ ನಡೆಸಿ ತನಿಖೆ ಮಾಡಿ ಬೇರೆ ರೈತರಿಗೆ ಕಳಪೆ ಬೀಜ ವಿತರಣೆ ಮಾಡದಂತೆ ಕ್ರಮವಹಿಸಿ ಬೆಳೆ ನಷ್ಟ ಪರಿಹಾರ ನೀಡುವಂತೆ ರೈತ ನಿಂಗಪ್ಪ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Adike Rate: ಅಡಕೆ ರೇಟ್ | ಯಾವ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ?
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252