Chitradurga news|nammajana.com|20-11-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಿತಿಕೇಂದ್ರದವರು ಕಳೆದ ಕೆಲವು (Poor workmanship) ತಿಂಗಳುಗಳಿಂದ ನಿರ್ಮಾಣ ಮಾಡುತ್ತಿದ್ದು, ಕಳಪೆ ಕಾಮಗಾರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಕೆಲ ಸದಸ್ಯರು ಆರೋಪಿಸಿದ್ಧಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಸದಸ್ಯರಾದ ಚಿನ್ನಯ್ಯ, ಓಬಯ್ಯ, ತಿಪ್ಪೇಸ್ವಾಮಿ, ಪಾರಿಜಾತ, ಸಣ್ಣಬೋರಮ್ಮ,ಕೆ.ಓಬಯ್ಯ, ಗೀತಮ್ಮ, ಬಾಲೇನಹಳ್ಳಿಓಬಯ್ಯ ಮುಂತಾದವರು ಈಗಾಗಲೇ (Poor workmanship) ಕಟ್ಟಡ ನಿರ್ಮಾಣ ಕಾಮಗಾರಿಗೆ ಲಕ್ಷಾಂತರ ರೂಪಾಯಿ ಹಣವನ್ನು ಪಡೆಯಲಾಗಿದೆ.
ಗುಣಮಟ್ಟದ ಕಾಮಗಾರಿ ಕಾಣುತ್ತಿಲ್ಲ. ಈ ಬಗ್ಗೆ ಪಂಚಾಯಿತಿ ಅಧಿಕಾರಿಯೂ ಸಹ ಗಮನಹರಿಸಿಲ್ಲ, ಆದ್ದರಿಂದ (Poor workmanship) ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ಧಾರೆ.
ಇದನ್ನೂ ಓದಿ: suicide | ಮನನೊಂದು ತಾಯಿ ಮಗಳು ಆತ್ಮಹತ್ಯೆ
ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಸದಸ್ಯರ ಆರೋಪದ ಬಗ್ಗೆ ಸ್ವಷ್ಟಣೆ ನೀಡಿದ ಪಿಡಿಒ ಇನಾಯಿತ್‌ಪಾಷ, ಇತ್ತೀಚೆಗೆ ನಡೆದ ಪಂಚಾಯಿತಿ ಸಭೆಯಲ್ಲಿ ಕಳಪೆ ಕಾಮಗಾರಿಯ ಬಗ್ಗೆ ಕೆಲವು ಸದಸ್ಯರು ಆರೋಪಿಸಿದಾಗ ಸ್ವಷ್ಟಣೆ ನೀಡಿ ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳಿಗೆ ಸದಸ್ಯರ ಆರೋಪದ ಬಗ್ಗೆ (Poor workmanship) ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಭರವಸೆ ನೀಡಿದ್ಧಾರೆಂದರು.