Chitradurga News | Nammajana.com | 25-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಹಿರಿಯೂರು(Power cut)ಉಪ ವಿಭಾಗದ ವ್ಯಾಪ್ತಿಯ ಹರಿಯಬ್ಬೆ ಹಾಗೂ ಪಿ.ಡಿ. ಕೋಟೆ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವ ಹಿನ್ನಲೆಯಲ್ಲಿ ಸದರಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸೆ.25ರ ಬೆಳಿಗ್ಗೆ 10 ರಿಂದ ಸಂಜೆ 05 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಆಡಚಣೆಯಾಗುವ ಪ್ರದೇಶಗಳು:
ಹರಿಯಬ್ಬೆ, ಧರ್ಮಪುರ, ಶ್ರವಣಗೆರೆ, ಬೆನಕನಹಳ್ಳಿ, ಸಕ್ಕರ, ಕೃಷ್ಣಪುರ, ಸೂಗುರು, ಬುರುಡುಕುಂಟೆ, ಚಿಲ್ಲಹಳ್ಳಿ, ಈಶ್ವರಗೆರೆ, ಹೂವಿನಹೊಳೆ, ಅಬ್ಬಿನಹೊಳೆ, ಕಣಜನಹಳ್ಳಿ, ಬೇತೂರು, ಬೇತೂರು ಪಾಳ್ಯ, ವಿ.ಕೆ.ಗುಡ್ಡ, ಪಿ.ಡಿ.ಕೋಟೆ, ಖಂಡೆನಹಳ್ಳಿ, ಹಲಗಲದ್ಧಿ, ಮದ್ದಿಹಳ್ಳಿ, ಹೊಸಕೆರೆ, ಅರಳಿಕೆರೆ, ಬಿ.ಕೆ.ಹಟ್ಟಿ, ಹಾಗೂ ಸುತ್ತ ಮುತ್ತಲಿನ ಗ್ರಾಮದದಲ್ಲಿ ವಿದ್ಯುತ್ ಆಡಚಣೆಯಾಗಲಿದೆ.
ಇದನ್ನೂ ಓದಿ: ನೊಂದಾಯಿತ ಪತ್ರಕರ್ತರಿಗೆ ಉಚಿತ OPD ಸೇವೆ ರಿಯಾಯಿತಿ ದರದಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ
ಗ್ರಾಹಕರು, ರೈತರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
