Chitradurga news | nammajana.com | 21-08-2025
ನಮ್ಮಜನ.ಕಾಂ,ಹಿರಿಯೂರು: ಹಿರಿಯೂರು(Power cut) ಉಪ ವಿಭಾಗ ವ್ಯಾಪ್ತಿಯ ರಂಗನಾಥಪುರ ಮತ್ತು ಕೆಆರ್ ಹಳ್ಳಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ 11 ಕೆವಿ ಮಾರ್ಗಗಳ ನಿರ್ವಹಣಾ ಕಾಮಗಾರಿ ಇರುವ ಪ್ರಯುಕ್ತ ಆ.21 ರಂದು ಬೆಳಿಗ್ಗೆ 9 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ರಂಗನಾಥಪುರ, ಆರನಕಟ್ಟೆ, ಕುಂದಲಗುರ, ಕುರುಬರಹಳ್ಳಿ, ಇಕ್ಕನೂರು, ಉಪ್ಪಳಗೆರೆ, ನಾಗೇನಹಳ್ಳಿ, ದೊಡ್ಡಕಟ್ಟೆ, ಕೂಡ್ಲಹಳ್ಳಿ, ಪಿಟ್ಲಾಲಿ, ಲಕ್ಷ್ಮಿಪುರ, ಹೊಸ ಯಳನಾಡು, ಹಳೆ ಯಳನಾಡು, ಆಲೂರು, ಕಸವನಹಳ್ಳಿ, ಸಮುದ್ರ ದಹಳ್ಳಿ, ಕೋಡಿಹಳ್ಳಿ, ಮ್ಯಾದನಹೊಳೆ, ಶಿವಪುರ, ಶಿವನಗರ, ಕೆಆರ್ ಹಳ್ಳಿ, ಬೋರನಕುಂಟೆ, ಯರೇ ಚಿಕ್ಕೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇದನ್ನೂ ಓದಿ: CM Siddaramaiah ಗೆ ಖುದ್ದು ಕೃತಜ್ಞತೆ ಸಲ್ಲಿಸಿದ ಮಾದಿಗರು : ಅಲೆಮಾರಿಗಳನ್ನು ಕೈಬಿಡದಂತೆ ಆಂಜನೇಯ ಆಗ್ರಹ
ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕೆಂದು ಹಿರಿಯೂರು ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿಜಿನಿಯರ್‌ಕೋರಿದ್ದಾರೆ.
