
Chitradurga news|nammajana.com|28-11-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರ ಉಪವಿಭಾಗ ಘಟಕ-2ರ ವ್ಯಾಪ್ತಿಯಲ್ಲಿ ಬರುವ ಎಫ್-15 ಮಿಲ್ ಏರಿಯಾ ಮಾರ್ಗದ ಎಂ.ಕೆ ಪ್ಯಾಲೇಸ್ ಮುಂಭಾಗದ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಲಾಗಿರುವ 11 ಕೆ.ವಿ/ ಎಲ್.ಟಿ (Power cut) ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ಚಿತ್ರದುರ್ಗ ನಗರಸಭೆ ಅವರು ನಿರ್ವಹಿಸುತ್ತಿರುವುದರಿಂದ ಇದೇ ನ.28ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ವಿ ವಿ ಸಾಗರ ಜಲಾಶಯ | 27 ನವೆಂಬರ್ 2024 | ಎಷ್ಟಿದೆ ಇಂದಿನ ನೀರಿನ ಮಟ್ಟ ? | Vani Vilasa Sagara

ವಿದ್ಯುತ್ ಅಡಚಣೆಗೆ ಒಳಪಡುವ ಪ್ರದೇಶಗಳು:
ಎಫ್-15 ಮಿಲ್ ಏರಿಯಾದ ಎಂ.ಕೆ ಪ್ಯಾಲೇಸ್ ಹತ್ತಿರ, ರೈಲ್ವೇ ಸ್ಟೇಷನ್, ಚೋಳಗುಡ್ಡ, ನೆಹರು ನಗರ, ಅಗಸನಕಲ್ಲು, ತಾಜ್ಪೀರ್ ಲೇಔಟ್, ಆಶ್ರಯ ಬಡಾವಣೆ ಹಂತ-1 ಮತ್ತು ಹಂತ-2, ಇಟಗಿ ಚನ್ನಬಸಪ್ಪ ಲೇಔಟ್, ಸದಾನಂದಯ್ಯ (Power cut) ಬಡಾವಣೆ, ದವಳಗಿರಿ ಬಡಾವಣೆ 3ನೇ ಹಂತ, ವಿದ್ಯಾಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು, ಗ್ರಾಹಕರು ಸಹಕರಿಸಬೇಕೆಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೇಷ್ಟ್ರುಗಳು ರಾಜಕಾರಣ ಮಾಡುತ್ತ ದೇಶ ಹಾಳು ಮಾಡುತ್ತಿದ್ದಾರೆ: ಎಂ.ಸಿ.ರಘುಚಂದನ್ | Farewell