Chitradurga news | nammajana.com | 22-07-2025
ನಮ್ಮಜನ.ಕಾಂ, ಚಿತ್ರದುರ್ಗ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (PDO) ಆಡಳಿತಾತ್ಮಕ ಆಯಾ ಜಿಲ್ಲಾ ವ್ಯಾಪ್ತಿಯ ಒಳಗೆ ನಿಯೋಜನೆ ಮಾಡುವ ಅಧಿಕಾರವನ್ನು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ನೀಡಿ ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಪಂಚಾಯತ್ ರಾಜ್ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದಿಪಡಿ ತಂದಿತ್ತು. ಆದರೆ, ಕೆಲವರು ಕೋರ್ಟ್ ಮೆಟ್ಟಿಲೇರಿದ ಕಾರಣ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗಿದೆ. ಆಡಳಿತಾತ್ಮಕ ಅಥವಾ ಇತರೆ ಕಾರಣಗಳಿಗಾಗಿ ನಿಯೋಜನೆ ಮಾಡಲು ಇಲಾಖೆಯ ಸಚಿವರ ಅನುಮತಿ ಪಡೆಯಬೇಕಿತ್ತು.
ಹೊಸ ಆದೇಶದ ಪ್ರಕಾರ(PDO) ಸಿಇಒಗಳು ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪಿಡಿಒಗಳ ಒಟ್ಟು ಸಂಖ್ಯೆಯಲ್ಲಿ ಶೇ.4ರಷ್ಟು ಮಂದಿಯನ್ನು ಖಾಲಿ ಇರುವ ಹುದ್ದೆಗಳಿಗೆ ನಿಯೋಜನೆ ಮಾಡಬಹುದು. ನಿಯೋಜನೆಗೊಳ್ಳುವ ಪಿಡಿಒಗಳು ಒಂದು ಸ್ಥಳದಲ್ಲಿ ಮೂರು ವರ್ಷ ಪೂರೈಸಿರುವುದು ಕಡ್ಡಾಯ.
ಇದನ್ನೂ ಓದಿ: ಬಿವಿಎ ಪದವಿ ಪ್ರವೇಶಾತಿ: ಅರ್ಜಿ ಸಲ್ಲಿಕೆ ಜುಲೈ 30 ರವರೆಗೆ ವಿಸ್ತರಣೆ
