Chitradurga news|nammajana.com|21-6-2024
ನಮ್ಮಜನ.ಕಾಂ, ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರತಿಭೆಯನ್ನು (Pratibha Puraskara) ಸಾರ್ವಜನಿಕವಾಗಿ ಪರಿಚಯಿಸಿ ಅವರನ್ನು ಅಭಿನಂದಿಸುವ ಮೂಲಕ ಆತ್ಮ ಸ್ಥೈರ್ಯ ತುಂಬುವ ಕಾರ್ಯ ನಡೆಯುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನಲ್ಲಿರುವ ಪ್ರತಿಭೆಯನ್ನು ವ್ಯಕ್ತಪಡಿಸುವುದರಲ್ಲಿ ಹಿಂದೇಟುಬೀಳಬಾರದು. ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ಮತ್ತಷ್ಟು ಹುಮ್ಮಸ್ಸು ತುಂಬುತ್ತದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶುಕ್ರವಾರ ಶಾಸಕರ ಭವನದಲ್ಲಿ ಹಿರಿಯಪತ್ರಕರ್ತ ಸೊಂಡೆಕೆರೆ ಶಿವಣ್ಣ ವಾಲ್ಮೀಕಿ ಸಮುದಾಯದ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಮುಂದಾಗಬೇಕು, ಶೈಕ್ಷಣಿಕ (Pratibha Puraskara) ಪ್ರಗತಿ ನಿಮ್ಮ ಬದುಕಿಗೆ ಭದ್ರಬುನಾದಿಯನ್ನು ನೀಡಲಿದೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆದಿರುವುದು ಸಂತಸ ತಂದಿದೆ ಎಂದರು.
ಇದನ್ನೂ ಓದಿ: Adike prices fall: ರಾಶಿ ಅಡಿಕೆ ರೇಟ್ ಇಳಿಕೆ | 21 ಜೂನ್ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ಬೆಲೆ?
ಸೊಂಡೆಕೆರೆಶಿವಣ್ಣ ಮಾತನಾಡಿ ಪ್ರಸ್ತುತ ೨೦೨೪ರ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು (Pratibha Puraskara) ಅಂಕಗಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಗುರುತಿಸಿಗೌರವಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಈ ಗೌರವವನ್ನು ಪಡೆಯುವತ್ತ ಮುನ್ನೆಡೆಯಬೇಕು ಎಂದರು.
ಇದನ್ನೂ ಓದಿ: Zilla Panchayath Chitradurga: ಜಿ.ಪಂ ಕೆಡಿಪಿ ಸಭೆ: ಜೂನ್ 26ಕ್ಕೆ ಮುಂದೂಡಿಕೆ
ವಿದ್ಯಾರ್ಥಿಗಳಾದ ಬಿ.ಆದಿತ್ಯ, ಪ್ರಿಯಾಂಕ, ಮಮತ, ಟಿ.ಸಿಂಚನ, ವತ್ಸಲ, ಕೆ.ಟಿ.ವಿಜಯ್, ರೈತ ಚಂದ್ರಣ್ಣನವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಟಿ.ಪ್ರಭುದೇವ್, ನಿವೃತ್ತ ಪ್ರಾಂಶುಪಾಲ ಬಿ.ವಿ.ಸಿರಿಯಣ್ಣ, ನಾಟಕ ಅಕಾಡೆಮೆ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಿ.ಟಿ.ಶ್ರೀನಿವಾಸ್, ಭೂತಲಿಂಗಪ್ಪ, ಸಿ.ಟಿ.ವೀರೇಶ್, ದೊರೆಅಪ್ಪಣ್ಣ, ರಾಜಣ್ಣ, ರುದ್ರೇಶ್, ಕೃಷ್ಣಮೂರ್ತಿ, ಪ್ರಹ್ಲಾದ್, ಉಳ್ಳಾರ್ತಿಗೌರೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.