Chitradurga news|nammajana.com|28-7-2024
ನಮ್ಮಜನ.ಕಾಂ, ಹೊಸದುರ್ಗ: ತಾಲ್ಲೂಕು ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2023-24 ನೇ ಸಾಲಿನ ವಾಲ್ಮೀಕಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ (Pratibha Puraskara) ಆಹ್ವಾನಿಸಲಾಗಿದ್ದು, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.75 ಕಿಂತ ಅಂಕ ಮೇಲ್ಪಟ್ಟ ತಾಲೂಕು ನಾಯಕ ಸಮುದಾಯದ ವಿದ್ಯಾರ್ಥಿಗಳು ಮತ್ತು ಸಿಇಟಿ, ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಹೊಸದುರ್ಗ ತಾಲೂಕಿನ ನಾಯಕ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 11.08.2024 ರ ಭಾನುವಾರದಂದು ಪಟ್ಟಣದ ವಾಲ್ಮೀಕಿ (Pratibha Puraskara) ಸಮುದಾಯ ಭವನದಲ್ಲಿ ವಾಲ್ಮೀಕಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿದ್ಯಾರ್ಥಿಗಳು ಸಲ್ಲಿಸಬೇಕಾದ ಅಗತ್ಯ ದಾಖಲೆಗಳು
ಸಮುದಾಯದ ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ತೇರ್ಗಡೆಹೊಂದಿದ ಪರೀಕ್ಷೆಯ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ ಮತ್ತು ಇತ್ತೀಚಿನ 2 ಭಾವ ಚಿತ್ರಗಳನ್ನು ನೀಡಿ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಿ ಎಂದು ಸಂಘದ ಅಧ್ಯಕ್ಷ ಜಯ ಪ್ರಕಾಶ್ ತಿಳಿಸಿದ್ದಾರೆ.
ಇದನ್ನೂ ಓದಿ: Jujata challakere: ನಲ್ಲೂರಹಳ್ಳಿ ಹಾಡುಹಗಲೇ ಜೂಜಾಟ | ಓರ್ವ ವ್ಯಕ್ತಿ ವಶ
ಮಾಹಿತಿಗಾಗಿ ಸಂಪರ್ಕಿಸಿ:
ಮತ್ತೋಡು ಹೋಬಳಿ- ಹನುಮಂತಪ್ಪ (Pratibha Puraskara) ಹಗಲಕೆರೆ-8861723266
ಮಾಡದಕೆರೆ ಹೋಬಳಿ: ಜಯರಾಮಪ್ಪ – 8861124905
ಕಸಬಾ ಹೋಬಳಿ: ಷಣ್ಮುಖಪ್ಪ- 9731245402
ಶ್ರೀರಾಂಪುರ ಹೋಬಳಿ: ಪರಮ್ಮ – 9008060596 ಮತ್ತು ಹೊಸದುರ್ಗ ಟೌನ್:ಜಯಣ್ಣ- 9481670770 ಇವರುಗಳನ್ನು ಸಂಪರ್ಕಿಸಬಹುದಾಗಿದೆ.