Chitradurga news|nammajana.com|19-7-2024
ನಮ್ಮಜನ.ಕಾಂ, ಚಿತ್ರದುರ್ಗ: ಸೊಂಡೆಕೊಳ ಗ್ರಾಮದಲ್ಲಿರುವ ವೀರಭದ್ರೇಶ್ವರ ಅನುದಾನಿತ ಪ್ರೌಢಶಾಲೆಯ ಬೀಗ ಮುರಿದು (Private school furniture destroyed) ಒಳಗೆ ಪ್ರವೇಶಿಸಿ ಮದ್ಯ ಸೇವಿಸಿ ಕುರ್ಚಿ ಟೇಬಲ್‍ಗಳನ್ನು ಒಡೆದು ಹಾಕಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.
ಮುಖ್ಯೋಪಾಧ್ಯಾಯರ ಕೊಠಡಿಯೊಳಗೆ ನುಗ್ಗಿ ಅಲ್ಲಿಯೇ (Private school furniture destroyed) ಕುಡಿದು ಬಾಟಲಿಗಳನ್ನು ಹೊಡೆದು ಮೂತ್ರ ವಿಸರ್ಜನೆ ಮಾಡಿ ಅಮಾನವೀಯತೆ ಮೆರೆದಿರುವುದು ನಾಚಿಕೆಗೇಡಿನ ಸಂಗತಿ. ಈಗಾಗಲೆ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು,

ಅಸಹ್ಯಕರ ಘಟನೆಗಳು ನಡೆಯುತ್ತಿದ್ದರೆ ಪೋಷಕರುಗಳು (Private school furniture destroyed) ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದಿಲ್ಲ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದವರೆ ಹೆಚ್ಚಾಗಿ ಹಳ್ಳಿಗಾಡಿನಲ್ಲಿ ಓದುತ್ತಿರುವುದರಿಂದ ನಂದಿಪುರ, ಉಪ್ಪನಾಯಕನಹಳ್ಳಿ, ಸೊಂಡೆಕೊಳ, ಬಂಜೇನಹಳ್ಳಿ, ಹಲಗಪ್ಪನಹಟ್ಟಿ ಸೇರಿದಂತೆ ಎಂಟತ್ತು ಹಳ್ಳಿಗಳು ಒಳಪಡುತ್ತವೆ.
ವೀರಭದ್ರೇಶ್ವರ ಶಾಲೆಯಲ್ಲಿ 130 ಮಕ್ಕಳು ಅಧ್ಯಯನ (Private school furniture destroyed)
ವೀರಭದ್ರೇಶ್ವರ ಪ್ರೌಢಶಾಲೆಯಲ್ಲಿ 130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದು, ಶಾಲಾ ಕೊಠಡಿಯನ್ನೇ ಮೋಜು ಮಸ್ತಿಗಾಗಿ ಬಳಸಿಕೊಂಡಿರುವವರಿಗೆ ಕಠಿಣ (Private school furniture destroyed) ಶಿಕ್ಷೆಯಾಗಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು
ಇದನ್ನೂ ಓದಿ: Channagiri Today Adike Rate:19 ಜುಲೈ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ಧಾರಣೆ
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ (Private school furniture destroyed) ಕಾರ್ಯದರ್ಶಿ ಗೋಪಿನಾಥ್ ಎಸ್. ಉಪಾಧ್ಯಕ್ಷೆ ರತ್ನಮ್ಮ, ರಾಜ್ಯ ಸಮಿತಿ ಸದಸ್ಯ ನಿಸಾರ್ ಅಹಮದ್, ಸಂಚಾಲಕ ಹರೀಶ್‍ಕುಮಾರ್, ಕಾರ್ಯದರ್ಶಿಗಳಾದ ಜಗದೀಶ್, ಅಣ್ಣಪ್ಪ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಮಧುಸೂದನ್, ಸುರೇಶ್, ಅಖಿಲೇಶ್, ಅವಿನಾಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252