Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಅಳಿಸಿ ಹೋಗುವುದನ್ನು ಉಳಿಸುವುದೇ ಸಂಶೋಧನೆಯ ಕೆಲಸವಾಗಬೇಕು: ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಮತ |Prof. Baraguru Ramachandrappa
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಅಳಿಸಿ ಹೋಗುವುದನ್ನು ಉಳಿಸುವುದೇ ಸಂಶೋಧನೆಯ ಕೆಲಸವಾಗಬೇಕು: ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಮತ |Prof. Baraguru Ramachandrappa
ಇಂದಿನ ಸುದ್ದಿ

ಅಳಿಸಿ ಹೋಗುವುದನ್ನು ಉಳಿಸುವುದೇ ಸಂಶೋಧನೆಯ ಕೆಲಸವಾಗಬೇಕು: ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಮತ |Prof. Baraguru Ramachandrappa

Editor Nammajana
Last updated: 6 July 2024 4:55 PM
By Editor Nammajana 4 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|6-7-2024

ನಮ್ಮಜನ.ಕಾಂ, ಚಿತ್ರದುರ್ಗ: “ಅಳಿಸಿ ಹೋಗುವುದನ್ನು ಉಳಿಸುವುದೇ ಸಂಶೋಧನೆಯ ಕೆಲಸವಾಗಬೇಕು” ಎಂದು ಸಂಸ್ಕøತಿ ಚಿಂತಕರಾದ ಪ್ರೊ.ಬರಗೂರು ರಾಮಚಂದ್ರಪ್ಪ (Prof. Baraguru Ramachandrappa) ಹೇಳಿದರು.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ದಾವಣಗೆರೆ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಜ್ಞಾನ ಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ವತಿಯಿಂದ “ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು” ಎಂಬ (Prof. Baraguru Ramachandrappa) ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಅಸಂಘಟಿತ ವಲಯಕ್ಕೆ ಸ್ಥಿತ್ಯಂತರಗೊಳ್ಳಬೇಕಾದ ಕಾಲದಲ್ಲಿ ನಾವಿದ್ದೇವೆ (Prof. Baraguru Ramachandrappa)

ಸಂಘಟಿತ ವಲಯದಿಂದ ಅಸಂಘಟಿತ ವಲಯಕ್ಕೆ ಸ್ಥಿತ್ಯಂತರಗೊಳ್ಳಬೇಕಾದ ಕಾಲದಲ್ಲಿ ನಾವಿದ್ದೇವೆ. ಸಂಘಟಿತ ವಲಯದ ಸಂಶೋಧನೆಗಳು ಸಾಕಷ್ಟು ನಡೆಯುತ್ತಿದ್ದು, ಇದು ಸ್ವಾಗತಾರ್ಹ. ಆದರೆ ಸಂಘಟಿತ ವಲಯದಿಂದ ಅಸಂಘಟಿತ ವಲಯಕ್ಕೆ ಸಂಶೋಧನೆ ಸ್ಥಿತ್ಯಂತರ, ವಿಸ್ತರಣೆಗೊಳ್ಳಬೇಕಾಗಿದೆ. ಇದು ಹೊಸ ಸವಾಲು ಹಾಗೂ ಹೊಸ ಸಾಧ್ಯತೆಯೂ ಹೌದು (Prof. Baraguru Ramachandrappa) ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಬರೀ ಹೂವು ನೋಡಿ ಬಹಳ ಸುಂದರವಾಗಿದೆ ಎಂದರೆ ಸಾಲದು, ತನ್ನ ಜೀವನವನ್ನೇ ತೇದು ಹೂವು ಮಾಡಿದ ಮೊಳಕೆಯನ್ನೂ ಜ್ಞಾಪಿಸಿಕೊಳ್ಳಬೇಕು.

ಇದು ಮನುಷ್ಯನಿಗೆ ಇರುವ ಜವಾಬ್ದಾರಿ. ಹಾಗೆಯೇ ಸಂಶೋಧನೆಯು ಹಾಗೂ ಸಾಹಿತ್ಯ ಸೃಷ್ಠಿಯೂ ಸಹ ಹೂವುನಿಂದ ಮೊಳಕೆವರೆಗೂ ಬರಬೇಕಾಗಿದೆ ಎಂದರು.
ಸಾಮಾಜಿಕ, ಆರ್ಥಿಕ ಸಂರಚನೆಗೂ ಹಾಗೂ ಸಾಹಿತ್ಯ ಸೃಷ್ಠಿ, ಸಂಶೋಧನೆಗೆ ಸಂಬಂಧ ಇದೆ. ಸಾಮಾಜಿಕ ಮತ್ತು ಆರ್ಥಿಕ ಸಂರಚನೆಯ ಬೆಳವಣಿಗೆಗಳು ಸಾಹಿತ್ಯ, ಸಂಶೋಧನೆಯ ಮೇಲೆ ಪರಿಣಾಮ ಬೀರುತ್ತವೆ. ಆ ಸಂರಚನೆಯಯಲ್ಲಿಯೇ ಶ್ರೇಣಿಗಳಿರುತ್ತವೆ. ಕೆಲವು ಶ್ರೇಣಿಗಳು ನಮಗೆ ಎದ್ದು ಕಾಣಿಸುತ್ತವೆ ಅದನ್ನು ನಾವು ಪ್ರಧಾನ ಎಂದು ಭಾವಿಸುತ್ತೇವೆ.

ಇನ್ನೂ ಕೆಲವು ಕಾಣಿಸುವುದಿಲ್ಲ ಅದನ್ನು ಅಧೀನ ಎಂದು ತಿಳಿದುಕೊಳ್ಳತ್ತೇವೆ. ಸಾಮಾಜಿಕ, ಆರ್ಥಿಕ ಸಂರಚನೆಯ ತಿಳುವಳಿಕೆ ಇದ್ದರೆ ಆ ತಿಳುವಳಿಕೆ ಮೂಲಕ ಸಾಹಿತ್ಯವನ್ನು ಬೇರೆ ಬೇರೆ ಆಯಾಮಗಳಿಂದ ಅರ್ಥ ಮಾಡಿಕೊಳ್ಳಲು ಸಾಧ್ಯ. ಅದು ಸಂಶೋಧನೆಯಲ್ಲೂ ಫಲಿತವಾಗಲು ಸಾಧ್ಯವಾಗಲಿದೆ ಎಂದರು.

ಬುಡಕಟ್ಟು ಸಂಶೋಧನೆ, ಅಲೆಮಾರಿ ಬದುಕು, ದಲಿತ ಲೋಕ, ಮಹಿಳಾ ಲೋಕ ಸೇರಿದಂತೆ ಅಲಕ್ಷಿತವಾದ ಲೋಕ ಹೊರಗಡೆ ಬರುವ ಮುಖಾಂತರ ದೇಶದಲ್ಲಿ ನಡೆದ ದೊಡ್ಡ ಬೆಳವಣಿಗೆ ಅಂದರೆ ಬಹು ಸಂಸ್ಕøತಿಯ ಅನಾವರಣ. ನಮ್ಮ ದೇಶ ಏಕ (Prof. Baraguru Ramachandrappa) ಸಂಸ್ಕøತಿಯ ದೇಶವಲ್ಲ, ಇದು ಬಹುಸಂಸ್ಕøತಿಯ ದೇಶ, ಬಹು ಬದುಕು, ಬಹು ವಿನ್ಯಾಸಗಳ ದೇಶ. ನಮ್ಮಲ್ಲಿ ಬುಡಕಟ್ಟು, ಅಲೆಮಾರಿಗಳ ಸಂಶೋಧನೆ ಶುರುವಾದ ನಂತರ ಏಕೆ ಸಂಸ್ಕøತಿಯ ಮಿಥ್ಯವನ್ನು ಹೊಡೆದು ಹಾಕಲಾಯಿತು.

ಇದು ಅಲಕ್ಷಿತ ಸಂಶೋಧನೆಯ ಫಲ ಹಾಗೂ ಈ ದೇಶದಲ್ಲಿ ನಡೆದ ಬಹುದೊಡ್ಡ ಪಲ್ಲಟವಾಗಿದ್ದು, ಪ್ರಜಾಸತ್ತಾತ್ಮಕ ಮೌಲ್ಯ, ಪ್ರಜಾಸತ್ತಾತ್ಮಕ ಸಮಾಜಕ್ಕೆ ದೊಡ್ಡ ಕೊಡುಗೆ ಎಂದು ಹೇಳಿದರು.

ಸಾಹಿತ್ಯ ಕ್ಷೇತ್ರದವರಿಗೆ, ಸಂಶೋಧನೆಗೆ ಅಂತ್ಹಶಿಸ್ತೀಯ ತಿಳಿವಳಿಕೆಯ ಅಗತ್ಯವಿದೆ. ಚರಿತ್ರೆ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಸಂರಚನೆಯ ತಿಳುವಳಿಕೆ ಇದ್ದಲ್ಲಿ, ಇಂತಹ ಸಾಹಿತ್ಯ ಏಕೆ ರಚನೆಯಾಗಿದೆ ಎಂಬುವುದು ಮನವರಿಕೆಯಾಗಲಿದೆ. ಹಾಗಾಗಿ ಸಾಹಿತ್ಯ ಕ್ಷೇತ್ರದವರಿಗೆ ಅಂತ್ಹಶಿಸ್ತೀಯ ತಿಳುವಳಿಕೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಸಂಶೋಧನೆ, ವಿಮರ್ಶೆ ಓದು ಪೂರ್ವಗ್ರಹ ಹಾಗೂ ಪಕ್ಷಪಾತ ರಹಿತವಾಗಿರಬೇಕು. ಸಂಶೋಧನೆ, ವಿಮರ್ಶೆ ಮಾಡುವವರಿಗೆ ಜಾತಿ, ಧರ್ಮ, ಪಕ್ಷ, ಪಂಥ ಇವೆಲ್ಲವನ್ನೂ ಮೀರಿದ ಮನಸ್ಥಿತಿ ಇರಬೇಕು. ಈ ಸೂಕ್ಷ್ಮವನ್ನು ಸಾಧಿಸುವವನೇ ಸಂಶೋಧನೆ ಹಾಗೂ ವಿಮರ್ಶೆಯ ಹೊಸ ಸಾಧ್ಯತೆಗಳನ್ನು ಹುಡುಕಲು ಸಾಧ್ಯ. ಕಂಡುಕೊಳ್ಳುವ ಕ್ರಿಯೆ ಎಷ್ಟರ ಮಟ್ಟಿಗೆ ಜಾಗೃತವಾಗಿರುತ್ತದೆಯೋ ಅಷ್ಟರ ಮಟ್ಟಿಗೆ ಸಂಶೋಧನೆ, ವಿಮರ್ಶೆಯ ಸಾಧ್ಯತೆಗಳು ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ನಾವು ಕೊಂಡುಕೊಳ್ಳುವುದಕ್ಕೆ ಮಾತ್ರ ಮೀಸಲಾಗದೇ ಕಂಡುಕೊಳ್ಳುವ ಮನುಷ್ಯರಾಗೋಣ ಎಂದು ಹೇಳಿದರು.

ಶಿಕ್ಷಣದಿಂದ ಸಾಹಿತ್ಯ, ಸಂಶೋಧನೆ ವಿಸ್ತರಣೆ:

ಶಿಕ್ಷಣ ವಿಸ್ತರಣೆಯಾದಂತೆ ಸಾಹಿತ್ಯ, ವಿಮರ್ಶೆ, ಸಂಶೋಧನೆಯ ವಿಸ್ತರಣೆಯೂ ಆಯಿತು. ಈ ಹಿನ್ನಲೆಯಲ್ಲಿ ಶಿಕ್ಷಣವು ಹಟ್ಟಿ, ಹಾಡಿ, ಗುಡಿಸಲು, ಮಣ್ಣಿನ ಮನೆ, ಮಹಿಳೆಯರಿಗೆ ಶಿಕ್ಷಣ ಬಂತು. ಹಟ್ಟಿಗೆ ಶಿಕ್ಷಣ ಬಂದ ಮೇಲೆ ಆತಂಕ, ಅಕ್ರೋಶ ಹೊರಬರಲು ಶುರುವಾಯಿತು. ಹಾಡುಗಳಿಂದ ಅದರ ಪಾಡುಗಳು, ಮಣ್ಣಿನ ಮನೆಯಿಂದ ಮನದಾಳ, ಮಹಿಳೆಯರಿಗೆ ಶಿಕ್ಷಣ ತಲುಪಿದ ನಂತರ ಇನ್ನೊಂದು ಆಯಾಮವೇ ಸಾಹಿತ್ಯದಲ್ಲಿ ಸೃಷ್ಠಿಯಾಯಿತು. ಹಾಗಾಗಿ ಶಿಕ್ಷಣದಿಂದ ಮಹಿಳಾ ಲೋಕ, ಬುಡಕಟ್ಟು ಲೋಕ, ಅಲೆಮಾರಿ ಲೋಕ ಸಾಹಿತ್ಯ ಸಂಸ್ಕøತಿ ಸೇರಿದಂತೆ ಬೇರೆ ಬೇರೆ ಲೋಕ ಅನಾವರಣಕ್ಕೆ ಕಾರಣವಾಯಿತು ಎಂದರು.

ಸಾಹಿತ್ಯ ಸಂಶೋಧನೆ, ವಿಮರ್ಶೆ ಒಂದರೊಳಗೊಂದು ಸೇರಿಕೊಂಡಿರುವುದನ್ನು ನಾವು ನೋಡುತ್ತಿದ್ದೇವೆ. ಸಾಹಿತ್ಯ ಸಂಶೋಧನೆಗೆ ವಿಮರ್ಶೆಯ ವಿವೇಕ ಬೇಕಾಗಿದೆ. ಆದರೆ ವಿಮರ್ಶೆ ಎಲ್ಲವೂ ಸಂಶೋಧನೆ ಆಗಬೇಕಾಗಿರುವುದಿಲ್ಲ. ಸಂಶೋಧನೆ ಅಂದರೆ ಅಜ್ಞಾತಗಳ ಹುಡುಕಾಟ. ವಿಮರ್ಶೆ ಎನ್ನುವುದು ವ್ಯಾಖ್ಯಾನಗಳ ಒಕ್ಕೂಟ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ಇದನ್ನೂ ಓದಿ: ಚಿನ್ನದ ನಾಣ್ಯ‌ದ ಆಸೆ ತೋರಿಸಿ 54 ಲಕ್ಷ ವಂಚನೆ ಮಾಡಿದ್ದ ಗ್ಯಾಂಗ್ ಅರೆಸ್ಟ್ | gold coin fraud

ಜಿ.ಆರ್.ಹಳ್ಳಿ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಜಿ. ವಿಜಯಕುಮಾರ್ ಮಾತನಾಡಿ, “ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು” ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಲೇಖನಗಳನ್ನು ಆಹ್ವಾನಿಸಿ, 210 ಜನ ವಿದ್ವಾಂಸರು, ಸಂಶೋಧಕರು ಲೇಖನಗಳನ್ನು ಕಳಿಸಿದ್ದು, ಇವುಗಳನ್ನು (Prof. Baraguru Ramachandrappa) “ನವನೀತ” ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ಗ್ರಂಥ ಪ್ರಕಟಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಲೇಖನಗಳ ಒಳಗೊಂಡ “ನವನೀತ” ಬೃಹತ್ ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು

ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ವಿಶ್ರಾಂತಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಕುವೆಂಪು ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್ ಸಿದ್ದೇಶ್, ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ಎಂ.ಯು.ಲೋಕೇಶ್, ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗ ಅಧ್ಯಕ್ಷ ಡಾ.ವಿ.ಜಯರಾಮಯ್ಯ, ಶಿಕಾರಿಪುರ ಸುವ್ವಿ ಪಬ್ಲಿಕೇಷನ್ ಪ್ರಕಾಶಕ ಬಿ.ಎನ್.ಸುನೀಲ್ ಕುಮಾರ್, ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಗೀತಾ ವಸಂತ, ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಸೇರಿದಂತೆ ಮತ್ತಿತರರು ಇದ್ದರು.

Telegram Group Join Now
WhatsApp Group Join Now

You Might Also Like

Gold price | ಬಂಗಾರದ ಬೆಲೆಯಲ್ಲಿ ಇಳಿಕೆ

ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere

Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು

Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ

ದಿನ ಭವಿಷ್ಯ | 09-10-2025 | Dina Bhavishya

TAGGED:Center for Kannada Studies and Research and Department of Kannada StudiesChitradurga NewsDavangere UniversityG.R. HalliGnanagangotri Postgraduate CentreGnanagangotri Postgraduate Studies Center inaugurated a two-day National Symposium onKannada Newskannada suddiNammajana.comNew Possibilities of Kannada Literary ResearchProf. Baraguru Ramachandrappaಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕನ್ನಡ ನ್ಯೂಸ್ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳುಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜಿ.ಆರ್.ಹಳ್ಳಿಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಾವಣಗೆರೆ ವಿಶ್ವವಿದ್ಯಾನಿಲಯನಮ್ಮಜನ.ಕಾಂಪ್ರೋ.ಬರಗೂರು ರಾಮಚಂದ್ರಪ್ಪರಾಷ್ಟ್ರೀಯ ವಿಚಾರ ಸಂಕಿರಣ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಚಿನ್ನದ ನಾಣ್ಯ‌ದ ಆಸೆ ತೋರಿಸಿ 54 ಲಕ್ಷ ವಂಚನೆ ಮಾಡಿದ್ದ ಗ್ಯಾಂಗ್ ಅರೆಸ್ಟ್ | gold coin fraud
Next Article Dina Bhavishya kannada: ಇಂದಿನ ದಿನ ಭವಿಷ್ಯ 7-7-2024
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ
ಇಂದಿನ ಸುದ್ದಿ
V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ
ಇಂದಿನ ಸುದ್ದಿ
Astrology | ದಿನ ಭವಿಷ್ಯ, ಇವತ್ತು ಹೇಗಿದೆ ರಾಶಿ ಭವಿಷ್ಯ
ದಿನ ಭವಿಷ್ಯ
ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ | Valmiki Jayanti
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?