Chitradurga news|nammajana.com|27-11-2024
ನಮ್ಮಜನ.ಕಾಂ, ಚಳ್ಳಕೆರೆ: ಪ್ರಗತಿಪರಿಶೀಲನಾ ಸಭೆಗೆ ಬರುವ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬನ್ನಿ. (Progress review meeting) ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಶಾಸಕರು ಸೂಚಿಸಿದ್ದು ಸಿಇಒಗೆ ಶಾಸಕ ಟಿ.ರಘುಮೂರ್ತಿ ಸೂಚನೆ ನೀಡಿದರು.
ಅವರು, ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೃಷಿ ಇಲಾಖೆ ವರದಿ ನೀಡಿದ ಸಹಾಯಕ ನಿರ್ದೇಶಕ ಅಶೋಕ್, ಈ ಬಾರಿ ವಾಡಿಕೆಗಿಂತಹ ಶೇ.58ರಷ್ಟು ಹೆಚ್ಚು ಮಳೆಯಾಗಿದೆ. ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರದಲ್ಲಿ ಉತ್ತಮ (Progress review meeting) ಮಳೆಯಾಗಿದೆ. 982 ಹೆಕ್ಟೇರ್ ಪ್ರದೇಶದ ಶೇಂಗಾ ಬೆಳೆ ಮಳೆಯಿಂದ ನಾಶವಾದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದರು.
ಈ ವೇಳೆ ಶಾಸಕರು ಕಳೆದ ಸೆಪ್ಟಂಬರ್‌ನಿಂದ ಮಳೆ ಬಂದಿದೆ. ಪ್ರಾರಂಭದ ಜೂನ್, ಜುಲೈ ತಿಂಗಳಲ್ಲಿ ರೈತರು ಬಿತ್ತನೆಮಾಡಿದ್ದ ಶೇಂಗಾ ಸಂಪೂರ್ಣ ನಾಶವಾಗಿತ್ತು. ಈ ಬಗ್ಗೆ ವರದಿಯನ್ನು ಪ್ರತ್ಯೇಕವಾಗಿ ಸಿದ್ದಪಡಿಸಿ ಸರ್ಕಾರಕ್ಕೆ ಕಳಿಸುವಂತೆ ಸೂಚನೆ ನೀಡಿದರು.ಕ್ಷೇತ್ರದ ತೊಗರಿಬೆಳೆಗಾರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ ಮಾಹಿತಿ ನೀಡಿ, ತಾಲ್ಲೂಕಿನಾದ್ಯಂತ ಒಟ್ಟು 62 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಇವೆ. ಮಳೆ ಅನಾವೃಷ್ಠಿಯಿಂದ 53 ಲಕ್ಷ ಮೌಲ್ಯದ ತೋಟಗಾರಿಕೆ ಬೆಳೆನಷ್ಟವಾಗಿದೆ ಎಂದರು.
ಪಶುವೈದ್ಯಾಧಿಕಾರಿ ರೇವಣ್ಣ ಮಾಹಿತಿ ನೀಡಿ, ಅನುಗ್ರಹ ಯೋಜನೆಯಲ್ಲಿ 996 ಅರ್ಜಿ ಸಲ್ಲಿಕೆಯಾಗಿವೆ, 606 ಅರ್ಜಿಗಳಿಗೆ ಪರಿಹಾರ ನೀಡಿದ್ದು, 390 ಅರ್ಜಿಗಳಿಗೆ ಪರಿಹಾರ ನೀಡಬೇಕಿದೆ ಎಂದರು. ರೇಷ್ಮೆ ಅಧಿಕಾರಿ ಉಮಾಪತಿ, ಪ್ರಸ್ತುತ ವರ್ಷ ಹೊಸದಾಗಿ 30 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆಬೆಳೆ ಬೆಳೆಯಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಸೋರುತ್ತಿರುವ ಶಾಲೆಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮುಖ್ಯಮಂತ್ರಿಗಳಿಂದ 8 ಕೋಟಿ, ನನ್ನ ಅನುದಾನದಲ್ಲಿ 16 ಕೋಟಿ ಒಟ್ಟು 24 ಕೋಟಿ ಹಣವನ್ನು ಕೆಆರ್‌ಐಡಿಎಲ್, (Progress review meeting) ನಿರ್ಮಿತಿ ಕೇಂದ್ರ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗಕ್ಕೆ ನೀಡಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.
ಸಿಡಿಪಿಒ ಹರಿಪ್ರಸಾದ್, 8 ಅಂಗನವಾಡಿ ಕಟ್ಟಡ ಶಿಥಿಲಗೊಂಡಿದ್ದು ಅವುಗಳನ್ನುಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದರು.
ಇದನ್ನೂ ಓದಿ: Dina Bhavishya: 27 ನವೆಂಬರ್ 2024 | ಯಾವ್ಯಾವ ರಾಶಿ ಶುಭ ಯೋಗ, ಸಂಕಷ್ಟ ನೋಡಿ
ಪ್ರಗತಿಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಾಲ್ಲೂಕುಪಂಚಾಯಿತಿ ಆಡಳಿತಾಧಿಕಾರಿ ಟಿ.ಮಂಜುನಾಥ, ತಹಶೀಲ್ಧಾರ್ ರೇಹಾನ್‌ಪಾಷ, ಇಒ ಶಶಿಧರ. ತಾಲ್ಲೂಕು ಮಟ್ಟದ ಅಧಿಕಾರಿಗಳು ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ವಿ ವಿ ಸಾಗರ ಜಲಾಶಯ | 27 ನವೆಂಬರ್ 2024 | ಎಷ್ಟಿದೆ ಇಂದಿನ ನೀರಿನ ಮಟ್ಟ ? | Vani Vilasa Sagara