Chitradurga News |Nammajana.com | 20-4-2024
ನಮ್ಮಜನ.ಕಾಂ. ಚಿತ್ರದುರ್ಗ :ಚಿತ್ರದುರ್ಗ ನಗರಸಭೆಯ ಆಸ್ತಿ ತೆರಿಗೆ, ನೀರಿನ ಕರ ಹಾಗೂ ಇತರೆ ಶುಲ್ಕಗಳನ್ನು ಮೊಬೈಲ್ ಹಾಗೂ ಆನ್‍ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
• ಯಾವ ಆ್ಯಪ್ ಗಳ ಮೂಲಕ ಹಣ ಪಾವತಿಸಬಹುದು
ಮೊಬೈಲ್ ಅಪ್ಲಿಕೇಷನ್‍ಗಳಾದ ಭೀಮ್, ಭಾರತ್ ಬಿಲ್ ಪೇ, ಫೋನ್ ಪೇ, ಪೇಟಿಎಂ, ಗೂಗಲ್ ಪೇ ಗಳ ಮುಖಾಂತರ ಸಾರ್ವಜನಿಕರು ಕರ ಪಾವತಿಸಬಹದು. ಇಲ್ಲವಾದರೆ ಖಜಾನೆ-2 ತಂತ್ರಾಂಶದಲ್ಲಿ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳಲ್ಲಿ ಪಾವತಿಸಬಹುದಾಗಿದೆ.ಇದರ ಹೊರತಾಗಿ ನಗರಸಭೆ ಕಚೇರಿಯಲ್ಲಿನ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಕೌಂಟರ್ ನಲ್ಲಿ ಸಹ ಕರ ಪಾವತಿಸಬಹುದಾಗಿದೆ.
ಇದನ್ನೂ ಓದಿ: ಪ್ರತಿಷ್ಠಿತ ಶಾಲೆ| 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಸಾರ್ವಜನಿಕರು ಈ ಅವಕಾಶಗಳನ್ನು ಬಳಸಿ ಸುಗಮವಾಗಿ ನಗರಸಭೆಯ ಕರಗಳನ್ನು ಪಾವತಿಸುವಂತೆ ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.