Chitradurga news|nammajana.com|14-10-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಗ್ರಾಮದಲ್ಲಿ ಖಾಸಗಿ ಬಾರೊಂದು (Protest) ದೇವಸ್ಥಾನ, ಶಾಲೆಯ ಬಳಿಯೇ ಇದ್ದು ಇದರಿಂದ ಸಾರ್ವಜನಿಕರಿಗೆ ಹಾಗೂ ದೇವಸ್ಥಾನಕ್ಕೆ ಬಂದುಹೋಗುವ ಭಕ್ತರಿಗೆ ತೊಂದರೆ ಉಂಟಾಗುತ್ತಿದ್ದು ಕೂಡಲೇ ಬಾರನ್ನು ಮುಚ್ಚಬೇಕೆಂದು ಒತ್ತಾಯಿಸಿ ಬಾರ್‌ಮುಂದೆ ಭಾನುವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಶಿಕುಮಾರ್ ನೇತೃತ್ವದಲ್ಲಿ ಪ್ರತಿಭಟನೆನಡೆದಿದ್ದು, ಈಗಾಗಲೇ ಸಂಬAಧಪಟ್ಟ ಅಬಕಾರಿ ಇಲಾಖೆ, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಲಿಖಿತಮೂಲಕ ಮನವಿ ನೀಡಿ ಪ್ರತಿನಿತ್ಯ ನೂರಾರು ಜನರು ಕುಡಿದು ರಸ್ತೆಯಲ್ಲಿ ಅವಾಚ್ಯಶಬ್ದಗಳಿಂದನಿಂದಿಸುತ್ತಾರೆ.
ವಿಶೇಷವಾಗಿ ಮಹಿಳೆಯರ ಬಗ್ಗೆ ಅನಗತ್ಯವಾಗಿ, ಲಘುವಾಗಿ ಮಾತನಾಡುತ್ತಾರೆ. ಅಪಾಯಕಾರಿ ಸಂಗತಿ ಎಂದರೆ ಇತ್ತೀಚಿಗೆ ಶಾಲಾ ವಿದ್ಯಾರ್ಥಿಗಳು ಸಹ ಕಂಡುಕಾಣದಂತೆ ಬಾರ್‌ಗೆ (Protest) ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಸಂಜೆ ವೇಳೆಯಲ್ಲಿ ಗ್ರಾಮ ಎಲ್ಲಾ ರಸ್ತೆಗಳಲ್ಲಿ ಕುಡುಕರ ದರ್ಬಾರು ಹೆಚ್ಚಾಗುತ್ತದೆ. ಯಾರೇ ಎದುರಿಗೆ ಬರಲಿ ಅವರನ್ನು ತುಚ್ಯವಾಗಿ ಬೈಯುತ್ತಿದ್ದಾರೆ, ಯಾರಾದರೂ ಮಹಿಳೆ ಓಡಾಟ ನಡೆಸಿದರೆ ಹೀಯಾಳಿಸುತ್ತಾರೆ. ಇದರಿಂದ ಗ್ರಾಮದ ಜನರು ರೋಸಿದ್ದಾರೆ, ಗ್ರಾಮದಲ್ಲಿ ನೆಮ್ಮದಿ ಮಾಯವಾಗಿ ಅಶಾಂತಿ (Protest) ವಾತಾವರಣ ಉಂಟಾಗಿದೆ ಎಂದು ಅವರು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಾತ್ಯತೀತ ನಾಯಕ ರಾಜವೀರ ಮದಕರಿನಾಯಕ: ವಾಲ್ಮೀಕಿ ಶ್ರೀ ಬಣ್ಣನೆ | Madakari Nayaka
ಗ್ರಾಮ ಪಂಚಾಯಿತಿ ಸದಸ್ಯರಾದ ಈರಣ್ಣ, ನಾಗರಾಜು, ಗ್ರಾಮಸ್ಥರಾದ ಭಾಗ್ಯಮ್ಮ, ಮಾರಕ್ಕ, ನಾಗರಾಜ, ರಾಜಶೇಖರ, ಚಂದ್ರಶೇಖರ, ಪಾಲಕ್ಕ, ಉಷಾ, ಸುಧಾ, ಗಂಗಮ್ಮ, ಗೌರಮ್ಮ, ಮುರುಳಿ, ನಾಗರಾಜು ಮುಂತಾದವರು ಪ್ರತಿಭಟನೆಯಲ್ಲಿ ಪಾಳ್ಗೊಂಡಿದ್ದರು