Chitradurga news|nammajana.com|26-10-2024
ನಮ್ಮಜನ.ಕಾಂ, ಹೊಸದುರ್ಗ: ಹೊಸದುರ್ಗ ಪುರಸಭೆ ಬ್ರಷ್ಟ ಪುರಸಭೆ ಎಂದು 2021 ರಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ (Protest) ಬಗ್ಗೆ ಅಂದಿನ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳೇ ಮಾಹಿತಿ ನೀಡಬೇಕು.
ಶಾಂತಿನಗರ ಬಡಾವಣೆಯ ಆಶ್ರಯ ಯೋಜನೆ ಬಗ್ಗೆ ಮಾಹಿತಿ, ಸರ್ಕಾರದ ಜಮೀನಿನ ಕುರಿತು ಬಹಿರಂಗ ಹರಾಜು ಮಾಹಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಟ್ಟಣದ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಎರಡನೇ ದಿನದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆದವು.
ಬಿಸಿ ಬಿಸಿ ಚರ್ಚೆಗಳ ನಡುವೆ ಪುರಸಭೆಯಲ್ಲಿ ಇದುವರೆಗೂ ಆಶ್ರಯ ಯೋಜನೆಯಡಿ ಸೌಲಭ್ಯ ಪಡೆದಿರುವವರ ಬಗ್ಗೆ (Protest) ಮಾಹಿತಿ, ಅಕ್ರಮ, ಅವ್ಯವಹಾರ, ಕಳಪೆ ಕಾಮಗಾರಿ ಸೇರಿದಂತೆ 23 ನೇ ವಾರ್ಡ್ ಗಳ ಸಂಪೂರ್ಣ ಮಾಹಿತಿ ಬೇಕು.
ಅಲ್ಲಿಯವರೆಗೂ ಸಭೆ ಮುಂದೂಡಿ ಎಂದು ಒತ್ತಾಯಿಸಿ, ಪುರಸಭೆ ಸದಸ್ಯರಾದ ಪುಷ್ಪಲತಾ ಗಂಗಾಧರ್ ಸಭೆ ಮಧ್ಯೆ ಬಂದು ಕುಳಿತು ಪ್ರತಿಭಟಿಸಿದರು. ಈ ಪ್ರಸಂಗ ಬಂದಾಗ ಕೆಲ ಕಾಲ ಸಭೆಯಲ್ಲಿ ಮೌನ ಆವರಿಸಿತು.
ನಂತರ ಮತ್ತೆ ಪುರಸಭೆ ಸದಸ್ಯರು ಮಾತಿನ ಚಕಮಕಿ ನಡೆಸಿದರು. ಸದ್ಯರುಗಳ ವಾಗ್ವಾದ ನಿಲ್ಲದಂತಾಗಿ ಯಾರು ಯಾರಿಗೆ ಹೇನು ಹೇಳುತ್ತಿದ್ದಾರೆ ಎಂಬುದೇ ನಿಗೂಢವಾಗಿತ್ತು.
ಮಾತಿನ ಚಕ ಮುಖಿ ತಿಳಿಯಾದಾಗ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಅ.22 ರಂದು ದೂರು ನೀಡಿದ್ದು, ಆ ಬಗ್ಗೆ ಬಿರುಸಿನ ಚರ್ಚೆ ನಡೆಯಿತು.
ಅಧ್ಯಕ್ಷರು ದೂರಿನಲ್ಲಿರುವ ಅಂಶಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು ಮುಖ್ಯಾಧಿಕಾರಿಗಳು ತಮಗೆ ಏಕವಚನದಲ್ಲಿ ಮಾತನಾಡಿಲ್ಲ. ಮುಖ್ಯಾಧಿಕಾರಿಗಳು ಯಾವರೀತಿಯಲ್ಲೂ (Protest) ಅಸಭ್ಯವಾಗ ನಡೆದುಕೊಂಡಿಲ್ಲ, ಎಕವಚನದಿಂದ ಯಾರಿಗೂ ಸಹಾ ಮಾತನಾಡಿಲ್ಲ ಅವರು ಅಂತವರೂ ಅಲ್ಲ ದೂರಿನಲ್ಲಿ ಆ ಅಂಶವಿರುವುದನ್ನು ಪರಿಗಣಿಸಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನಲ್ಲಿರುವ ಅಂಶದ ಬಗ್ಗೆ ಸ್ಪಷ್ಟನೆ ನೀಡಿದರು.
ಪುರಸಭೆ ಸದಸ್ಯ ದೊಡ್ಡಯ್ಯ ಮಾತನಾಡಿ, ಇಲ್ಲಿ ಸದಸ್ಯರು ಸಭಾ ನಡವಳಿಗಳ ಬಗ್ಗೆ ತಿಳಿಯಬೇಕು. ಇದೊಂದು ಮಹತ್ವದ ಸಭೆಯಾಗಿದೆ. ಸದಸ್ಯರಾಗಿದ್ದು, ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚಿಸುವುದನ್ನು, ಬಿಟ್ಟು ವೈಯಕ್ತಿಕ ವಿಚಾರಗಳಿಗೆ ಚರ್ಚೆ ಸಲ್ಲದು.ಹೀಗೆ ಮಾಡಿದರೆ ಪುರಸಭೆ ಹಾಗೂ ಸದಸ್ಯರ ವರ್ಚಸ್ಸು ಕಡಿಮೆಯಾಗುತ್ತದೆ. ಆವೇಶ ಬಿಟ್ಟು, ಸೌಮ್ಯತೆಯಿಂದ ವರ್ತಿಸಿ, ಅಹಿತಕರ ಘಟನೆ ನಡೆಯದಂತೆ ಸುಗಮವಾಗಿ ಸಭೆ ನಡೆಯಲು ಸಹಕರಿಸಿ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Loan facility
ಸಭೆಯಲ್ಲಿ ಅನಗತ್ಯವಾಗಿ ಶಾಸಕರ ವಿಚಾರ ಬೇಡ. ಪುರಸಭೆ ಅಧ್ಯಕ್ಷರು ಸದಸ್ಯರ ಆಹ್ವಾನ ವಿದ್ದರೇ ಮಾತ್ರ ಅವರು ಭಾಗವಹಿಸುವರು. ಅವರೇ ಬರಲಿ ಎಂಬುದು ತಪ್ಪು. (Protest) ಪುರಸಭೆಯಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಶಾಸಕರ ಗಮನಕ್ಕೆ ತರುವುದು ಒಳಿತು ಎಂದು ಸದಸ್ಯರೊಬ್ಬರ ಮಾತಿಗೆ ಸದಸ್ಯ ಶಂಕ್ರಪ್ಪ ಪ್ರತಿಕ್ರಿಯಿಸಿದರು. ಮುಖ್ಯಾಧಿಕಾರಿ ತಿಮ್ಮರಾಜು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಸಿಬ್ಬಂದಿಗಳಿದ್ದರು.