Chitradurga News | Nammajana.com | 11-08-2025
ನಮ್ಮಜನ.ಕಾಂ,ಹೊಸದುರ್ಗ: ಬೆಂಬಲ(Cereals crop) ಬೆಲೆಯಲ್ಲಿ ಖರೀದಿಸುವ ರಾಗಿ ಸೇರಿದಂತೆ ಸಿರಿಧಾನ್ಯಗಳನ್ನು ಈ ವರ್ಷದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೂ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಇದನ್ನೂ ಓದಿ: ಚಳ್ಳಕೆರೆ: ಹಾವು ಕಚ್ಚಿ ಯುವಕ ಸಾವು

ಬೆಲಗೂರಿನ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಸಿರಿಧಾನ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು ಇದರಿಂದ ರೈತರಿಗೆ ಬೆಲೆ ಸಿಗದೆ ಸಂಕಷ್ಟದಲ್ಲಿದ್ದರು. ಈ ಹಿನ್ನಲೆಯಲ್ಲಿ ಸಿರಿಧಾನ್ಯ ಬೆಳೆಗಳಿಗೂ ಬೆಂಬಲ ಬೆಲೆಯನ್ನು ಘೋಷಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡಹಾಕಲಾಗಿತ್ತು.
ಈ ಹಿನ್ನಲೆಯಲ್ಲಿ ಸಿರಿಧಾನ್ಯ ಬೆಳೆಗಳಿಗೆ 5 ಸಾವಿರ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ಈ ವರ್ಷದಿಂದಲೇ ಯಾವುದೇ ಗುರಿ ನಿಗದಿ ಮಾಡದೆ ಬೆಳೆದ ಎಲ್ಲಾ ಬೆಳೆಗಳನ್ನು ಖರೀದಿ ಮಾಡಲಾಗುವುದು ಹಾಗಾಗಿ ರೈತರು ಯಾರೂ ದಲ್ಲಾಳಿಗಳಿಗೆ ಕಡಿಮೆ ಹಣಕ್ಕೆ ಮಾರಿಕೊಳ್ಳದೆ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಇಲ್ಲಿಯವರೆಗೆ ಸಿರಿಧಾನ್ಯ ಬೆಳೆಗೆ(Cereals crop) ಪ್ರೋತ್ಸಾಹದ ಧನ ಎಂದುಎಕೆರೆಗೆನೀಡಲಾಗುತ್ತಿದ್ದ 10 ಸಾವಿರ ಪ್ರೊತ್ಸಾಹದ ಹಣದ ಬಾಬು 34 ಕೋಟಿ ಹಣವನ್ನು ಈಗಾಗಲೇ ರೈತರ ಖಾತೆಗಳಿಗೆ ಹಾಕಲಾಗಿದೆ ಅಲ್ಲದೆ ಆಹಾರ ನಿಗಮದಿಂದ ಬೆಂಬಲ ಬೆಳೆಯಲ್ಲಿ ಖರೀದಿ ಮಾಡಿದ್ದ ರಾಗಿ ಹಣ 700 ಕೋಟಿ ಯನ್ನು ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಸಂದಾಯಮಾಡಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಅರ್ಜಿ ಹಾಕಲು ದಿನಾಂಕ ವಿಸ್ತರಣೆ
ನೊಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳವ ನಿಟ್ಟಿನಲ್ಲಿ ಈ ಬಾರಿ ಮೂರು ತಿಂಗಳೂ ಮುಂಚಿತವಾಗಿಯೇ ರಾಗಿ ಸೇರಿದಂತೆ ಸಿರಿಧಾನ್ಯಗಳ ನೊಂದಣಿ ಪ್ರಕ್ರಿಯೇ ಪ್ರಾರಂಭಿಸಲಾಗುವುದು.
ಅಲ್ಲದೆ ದಲ್ಲಾಳಿಗಳ(Cereals crop) ಹಾವಳಿ ತಪ್ಪಿಸಲು ಹಾಗೂ ಅರ್ಹ ರೈತರಿಗೆ ಸರ್ಕಾರದ ಯೋಜನೆ ದೊರಕುವಂತಾಗಲು ಬೆಳೆ ಸಮೀಕ್ಷೆ ಕಾರ್ಯವನ್ನು ಸೆಟಲೈಟ್ ಆಧಾರಿತವಾಗಿ ಮಾಡಲು ಕಂದಾಯ ಹಾಗೂ ಕೃಷಿ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ಯಾರು ರಾಗಿ ಅಥವಾ ಸಾವೆ ಬೆಳೆ ಬೆಳೆದಿದ್ದಾರೆ ಅಂತಹ ರೈತರಿಂದ ಮಾತ್ರ ಬೆಂಬಲ ಬೆಲೆಯಲ್ಲಿ ರಾಗಿ ಸಾವೆ ಖರೀದಿ ಮಾಡಲಾಗುವುದು ಎಂದರು.
