Chitradurga News |Nammajana.com |
22-4-2024
ನಮ್ಮಜನ.ಕಾಂ.ಹೊಳಲ್ಕೆರೆ: ಚುನಾವಣೆಗೊಸ್ಕರ ಕಾಡುಗೊಲ್ಲರನ್ನು ಎಸ್ಟಿ ವರ್ಗಕ್ಕೆ ಸೇರಿಸುತ್ತೇವೆಂದು ಬಿಜೆಪಿ ಪಕ್ಷದ ಮುಖಂಡರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕಳೆದ 10 ವರ್ಷ ಕೇಂದ್ರದಲ್ಲಿ ಬಿಜೆಪಿ ಸರಕಾರ ಇತ್ತು. ಏಕೆ ಕಾಡುಗೊಲ್ಲರನ್ನು ಎಸ್ಟಿ ವರ್ಗಕ್ಕೆ ಸೇರಿಸಿಲ್ಲ ಎನ್ನುವುದನ್ನು ಪ್ರಧಾನಿಗಳು ಉತ್ತರ ನೀಡಬೇಕೆಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪ್ರಶ್ನಿಸಿದರು.
ತಾಲೂಕಿನ ಗೊಲ್ಲರಹಟ್ಟಿಗಳಾದ ಅವಿನಹಟ್ಟಿ, ತಿರುಮಲ್ಲಾಪುರ, ಗೊಲ್ಲರಹಳ್ಳಿ, ಗೌಡಿಹಳ್ಳಿ, ಗಂಗಸಮುದ್ರ, ರಾಮಗಿರಿ, ದುಮ್ಮಿಗೊಲ್ಲರಹಟ್ಟಿ, ಅಮೃತಾಪುರ, ಚಿತ್ರಹಳ್ಳಿ ಗೊಲ್ಲರಹಟ್ಟಿ ಸೇರಿ ವಿವಿಧ ಹಟ್ಟಿಗಳನ್ನು ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದರು.
2014 ರಲ್ಲಿ ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ
ಸಿ.ಎಂ. ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರಕಾರ 2014 ರಲ್ಲಿ ಕಾಡುಗೊಲ್ಲರನ್ನು ಎಸ್ಟಿ ವರ್ಗಕ್ಕೆ ಸೇರಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೆಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಕಳೆದ 10 ವರ್ಷ ಆಡಳಿತ ನಡೆಸಿದೆ. ನಾನು ಶಾಸಕಿಯಾಗಿ ಕೇಂದ್ರ ಸರಕಾರಕ್ಕೆ ಕಾಡುಗೊಲ್ಲರನ್ನು ಎಸ್ಟಿ ವರ್ಗಕ್ಕೆ ಸೇರಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದೆ.
ಸಮಾಜದ ಮುಖಂಡರ ನಿಯೋಗದ ಜತೆ ಕೇಂದ್ರ ಸಚಿವರನ್ನು ಭೇಟಿ ಮಾಡಿದೆ. ಯರೊಬ್ಬರೂ ಸಕಾರತ್ಮಕವಾಗಿ ಸ್ಪಂದಿಸಲಿಲ್ಲ.ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವಂತೆ ಬೇಡಿಕೊಂಡರು ಸ್ಪಂದಿಸಲಿಲ್ಲ. ಚುನಾವಣೆಯಲ್ಲಿ ಗೊಲ್ಲರ ಮತಕ್ಕಾಗಿ ಎಸ್ಟಿ ಸೇರಿಸುವ ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ. ಬಿಜೆಪಿ ಪಕ್ಷದ ಕಾಡುಗೊಲ್ಲರ ವಿರೋಧಿ ನೀತಿಯನ್ನು ಖಂಡಿಸಿ ಪಕ್ಷವನ್ನು ಬಿಟ್ಟಿದ್ದೇನೆಂದರು.
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಉತ್ತಮವಾಗಿ ಕೆಲಸ ಮಾಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಯೋಜನೆಯಿಂದ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ತುಂಬ ಸಹಾಕಾರಿಯಾಗಿದೆ. ಕಾಂಗ್ರೇಸ್ ಪಕ್ಷದ ನೀಡಿರುವ ಗ್ಯಾರಂಟಿಗೆ ಬೆಂಬಲಿಸಿ ಜನರು ಮತ ನೀಡಬೇಕೆಂದರು.
ಬಿಜೆಪಿ ಸರ್ಕಾರ ನೀರಾವರಿಗೆ ಪ್ರೋತ್ಸಾಹ ನೀಡಲಿಲ್ಲ
ಚಿತ್ರದುರ್ಗ ಜಿಲ್ಲೆ ಹಿಂದುಳಿಯಲು ಕೇಂದ್ರ ಸರಕಾರ ಕಾರಣ. ಕಳೆದ 10 ವರ್ಷದಲ್ಲಿ ಯಾವುದೇ ಆಭಿವೃದ್ಧಿಯನ್ನು ಜಿಲ್ಲೆಯಲ್ಲಿ ಕೈಗೊಂಡಿಲ್ಲ. ಭದ್ರ ಮೇಲ್ಕಂಡೆ ಯೋಜನೆಗೆ 5300 ಕೋಟಿ ಅನುದಾನ ಬಿಡುಗಡೆ ಮಾಡಲಿಲ್ಲ. ಜಿಲ್ಲೆಯನ್ನು ನೀರಾವರಿಗೊಳಿಸಲು ಪ್ರೋತ್ಸಾಹ ನೀಡಲಿಲ್ಲ. ಈಗ ಸಾಕಷ್ಟು ಭರವಸೆ ನೀಡುತ್ತಿದ್ದಾರೆ.ಜನರು ಬಿಜೆಪಿ ಸುಳ್ಳು ನಂಬಿ ಮೋಸಹೊಗದೆ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧ
ಈ ಸಂದರ್ಭಗಳಲ್ಲಿ ಕಾಂಗ್ರೇಸ್ ಪಕ್ಷ ಮುಖಂಡ ಬ್ರಿಜೇಶ್ ಯಾದವ್, ಪುರಸಭೆ ಸದಸ್ಯ ಕೆ.ಸಿ.ರಮೇಶ್, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್, ಜಿ.ಪಂ.ಮಾಜಿ ಸದಸ್ಯೆ ಇಂದಿರಾಕಿರಣ್, ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಕಿರಣ್ ಯಾದವ್, ಎ.ಚಿತ್ತಪ್ಪಯಾದವ್, ಗ್ರಾ.ಪಂ.ಮಾಜಿ ಅಧ್ಯಕ್ಷ ತಿಮ್ಮಪ್ಪ, ಗ್ರಾ.ಪಂ.ಸದಸ್ಯ ಚಂದ್ರಪ್ಪ, ಮೋಹನ್, ರಂಗಸ್ವಾಮಿ, ನಾಗರಾಜಪ್ಪ, ರಾಮಣ್ಣ, ಪವನ್ ಯಾದವ್, ಸುರೇಶ್, ಶಶಿಕುಮಾರ, ತಿಪ್ಪೇಸ್ವಾಮಿ ಮತ್ತೀತರ ಕಾಂಗ್ರೇಸ್ ಮುಖಂಡರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252
