Chitradurga news | nammajana.com | 21-8-2024
ವರದಿ: ಚಳ್ಳಕೆರೆ ವೀರೇಶ್
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಮಂಗಳವಾರ ರಾತ್ರಿ ಸುರಿದ ಮಳೆ ಆರ್ಭಟಕ್ಕೆ ರಹೀಂನಗರ, ಕಾಟಪ್ಪನಹಟ್ಟಿ, (Rain) ಚಿತ್ರಯ್ಯನಹಟ್ಟಿ, ಸೂಜಿಮಲ್ಲೇಶನಗರ ಸೇರಿದಂತೆ ಹಲವಾರು ನಗರಗಳ ಮಳೆ ನೀರಿನಿಂದ ದಿಗ್ಬಂಧನವಾಗಿದೆ.
ರಾಜಕಾಲುವೆ ಅಕ್ಕಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ನೀರಿಗೆ ಆಹುತಿಯಾಗಿವೆ. ಜನರು ಇಡೀ ರಾತ್ರಿ (Rain)/ ಮನೆಗೆ ನುಗ್ಗಿದ ನೀರನ್ನು ಹೊರಹಾಕುವುದೇ ಪ್ರಯಾಸವಾಗಿದೆ.
ರಹಿಂ ನಗರ, ಸೂಜಿಮಲ್ಲೆಶ್ವರ ನಗರದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿ ಮಾಡಿದರೆ. ಕಾಟಪನಹಟ್ಟಿ, ಪಾವಗಡ ರಸ್ತೆಯ ಶಾಲಾ, ಕಾಲೇಜು, ಮನೆಗಳಿಗೆ ಓಡಾಟ ನಡೆಸಲು (Rain) ಜಲಾಸುರ ದಿಗ್ಭಂಧನ ಹಾಕಿದ್ದ ಜನರು ನಗರದೊಳಗೆ ಬರಲು ಪರದಾಟ ನಡೆಸಿದರು.
ಅಂಬೇಡ್ಕರ್, ಗಾಂಧಿನಗರ, ಜನತಾಕಾಲೋನಿ, ನಾಯಕನಹಟ್ಟಿ ಪೊಲೀಸ್ ಠಾಣೆಗೆ ನೀರು ನುಗ್ಗಿ ಸಮಸ್ಯೆಯನ್ನೇ ಉಂಟು ಮಾಡಿದೆ.
ಇದನ್ನೂ ಓದಿ: Molakalmuru Rain | ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ರೈತರ ಬದುಕು | ಹೊಸಕೋಟೆ ಗ್ರಾಮ ಜಲಾವೃತ್ತ |
ರಾಜಕಾಲುವೆಯಲ್ಲಿ ಸ್ವಚ್ಚತೆ ಇಲ್ಲದೆ ಗಿಡಗಂಟೆ ಬೆಳೆದು ಮಳೆಯ ನೀರು ಮುಂದಕ್ಕೆ ಸಾಗದೆ ಮನೆಗಳಿಗೆ ನೀರುನುಗ್ಗಿ ಮನೆಯಲ್ಲಿ ಇರುವ ದವಸ ಧಾನ್ಯಗಳನ್ನು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ.