Chitradurga news |nammajana.com |26-5-2024
ನಮ್ಮಜನ.ಕಾಂ, ಚಳ್ಳಕೆರೆ: ಪ್ರಸ್ತುತ ವರ್ಷದಲ್ಲಿ ಚಳ್ಳಕೆರೆ ತಾಲ್ಲೂಕಿನಾದ್ಯಂತ ಜನರ ನಿರೀಕ್ಷೆಯನ್ನು ಹುಸಿಗೊಳಿಸುವಂತೆ ಭಾರಿ ಪ್ರಮಾಣದಲ್ಲಿ ವರುಣರಾಯ (Rain) ಆಗಮಿಸಿ ಜನರಿಗೆ ಸಂತಸವನ್ನುಂಟು ಮಾಡಿದ್ದಾನೆ. ಆದರೆ ಇದರ ಬೆನ್ನಹಿಂದೆಯೇ ಹೆಚ್ಚಿನ ಮಳೆಯಿಂದ ಮನೆ, ಬೆಳೆಗೂ ಹೆಚ್ಚಿನ ಹಾನಿಯಾಗಿದ್ದಲ್ಲದೆ, ನಗರದ ಕೆಳ ಅಂತಸ್ತಿನ ಅಂಗಡಿ ಮಳಿಗೆ, ಮನೆಗಳಿಗೆ ನೀರು ನುಗ್ಗಿ (Rain) ಅಪಾರವಾದ ಹಾನಿ ಉಂಟು ಮಾಡಿದೆ.
ನಗರ ವ್ಯಾಪ್ತಿಯ ಬೊಮ್ಮಸಮುದ್ರ ರಸ್ತೆಯ ಮೈರಾಡ ಕಾಲೋನಿಯ ಸುಮಾರು 12 ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿನ ಆಹಾರ ಪದಾರ್ಥ, ಬಟ್ಟೆ, ವಸ್ತುಗಳು ನೀರಿನಿಂದ (Rain) ಆವೃತ್ತಿಯಾಗಿವೆ.
ನಗರದ ಹೃದಯ ಖಾಗದಲ್ಲಿರುವ ಖಾಸಗಿ ಬಸ್ಟಾಂಡ್ ಹಿಂಭಾಗದ ಎಂ.ಸಂಜೀವಪ್ಪ(ರಾಜಣ್ಣ) ಎಂಬುವವರ ಮಂಜುನಾಥ ಆಟೋಗ್ಯಾರೇಜ್ ಮತ್ತು ಬ್ಯಾಟರಿ ಸರ್ವಿಸ್ ಕೇಂದ್ರದ ಎರಡು ಮಳಿಗೆಗೆ ಅಪಾರವಾದ ನೀರು ನುಗ್ಗಿ ಸುಮಾರು ಮೂರು ಲಕ್ಷ ನಷ್ಟ ಸಂಭವಿಸಿದೆ.
ತಾಲ್ಲೂಕಿನ ತಳಕು ಹೋಬಳಿಯ ಘಟಪರ್ತಿಗ್ರಾಮದ ರಿ.ಸರ್ವೆ ನಂ. ೩೯/೩ರ ಎರಡು ಎಕರೆ ಪ್ರದೇಶದಲ್ಲಿದ್ದ ನಾಗವೇಣಿ ಎಂಬುವವರಿಗೆ ಸೇರಿದ ಟಮೋಟ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಕೆ.ಡಿ.ಕೋಟೆ ವ್ಯಾಪ್ತಿಯ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ರಿ.ಸರ್ವೆ ನಂ. ೫೧ರಲ್ಲಿ ಶಾಂತಮ್ಮ ಎಂಬುವವರಿಗೆ ಸೇರಿದ ಒಂದು ಎಕರೆ ಪ್ರದೇಶದ ರಾಗಿಬೆಳೆ ಮಳೆಯಿಂದ (Rain) ನೀರಿನಲ್ಲಿ ಮುಳುಗಿದೆ.
ಇದನ್ನೂ ಓದಿ: Vani Vilasa Sagara Dam: ಮೇ 26ರ ವಿ.ವಿ.ಸಾಗರದ ನೀರಿನ ಮಟ್ಟ
ತಿಪ್ಪಾರೆಡ್ಡಿಹಳ್ಳಿ ಗ್ರಾಮದಲ್ಲಿ ಲಕ್ಷ್ಮಿದೇವಿ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದು 50 ಸಾವಿರ ನಷ್ಟ ಉಂಟಾಗಿದೆ. ಓಬಯ್ಯನಹಟ್ಟಿ ಗ್ರಾಮದ ಪ್ರೇಮಲತಾ ಎಂಬುವವರಿಗೆ ಸೇರಿದ ಮನೆ ಬಿದ್ದು ೫೦ ಸಾವಿರ, ಗುಂತಕೋಲಮ್ಮನಹಳ್ಳಿ ಗ್ರಾಮದ ಪಾಲಮ್ಮ ಎಂಬುವವರಿಗೆ ಸೇರಿದ ಮನೆ ಬಿದ್ದು 30 ಸಾವಿರ, ನಾಯಕನಹಟ್ಟಿ ವಾಸಿ ಪ್ರಭಣ್ಣ ಎಂಬುವವರ ಸೇರಿದ ವಾಸದ ಮನೆ ಬಿದ್ದು ೫೦ ಸಾವಿರ ನಷ್ಟವಾಗಿದೆ. ಗಿಡ್ಡಾಪುರದ ವಾಸಿ ಕೊಲ್ಲಾರಮ್ಮ ಎಂಬುವವರಿಗೆ ಸೇರಿದ ಮನೆ ಬಿದ್ದು 45 ಸಾವಿರ, ಕುದಾಪುರ ಗ್ರಾಮದ ಮಂಗಳಮ್ಮ ಎಂಬುವವರ ಜಮೀನಿನಲ್ಲಿದ್ದ ಸುಮಾರು 7 ತೆಂಗಿನ ಮರಗಳಿಗೆ ಸಿಡಿಲು ಬಡಿದು ಸಂಪೂರ್ಣಸುಟ್ಟಿವೆ.
ಇದನ್ನೂ ಓದಿ: challakere doctor: ಡಾಕ್ಟರ್ ಅಕೌಂಟ್ ನಿಂದ 7.40 ಲಕ್ಷ ಕದ್ದ ಕಳ್ಳರು, ಡಾಕ್ಟರ್ ಮೋಸ ಹೋಗಿದ್ದೇಗೆ?
ಕೃತಿಕ ಮಳೆಯ ಅಂತಿಮ ದಿನವಾದ ಶುಕ್ರವಾರ ತಡರಾತ್ರಿ ತಾಲ್ಲೂಕಿನಾದ್ಯಂತ ಮತ್ತೊಮ್ಮೆ ಮಳೆ (Rain) ಪ್ರಮಾಣ ಹೆಚ್ಚಿದ್ದು, ಚಳ್ಳಕೆರೆ-೫೦.೦೦, ಪರಶುರಾಮಪುರ-೩೬.೦೪, ತಳಕು-೫೧.೦೨, ನಾಯಕನಹಟ್ಟಿ-೬೫.೦೬, ದೇವರಮರಿಕುಂಟೆ-೪೧.೦೨ ಒಟ್ಟು ೨೪೩.೧೪ ಮಳೆಯಾಗಿದೆ.