Chitradurga news|nammajana.com|23-10-2024
ನಮ್ಮಜನ.ಕಾಂ, ಚಿತ್ರದುರ್ಗ: ಸೋಮವಾರ ರಾತ್ರಿ ಮತ್ತೆ ಸುರಿದ ಭಾರೀ ಮಳೆಗೆ ದೊಡ್ಡ ಪ್ರಮಾಣದ ನೀರು ಲಕ್ಷ್ಮೀಸಾಗರಕ್ಕೆ ಬಂದಿದೆ.ಕೆರೆಈಗಾಗಲೇಕೋಡಿಬಿದ್ದಿದ್ದರಿಂದ ಅಪಾರ (RAIN) ಪ್ರಮಾಣದನೀರು ಹರಿದು ಲಕ್ಷ್ಮೀಸಾಗರ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ನುಗ್ಗಿ ಬಂದು ನಿಂತಿದೆ.
ಸರ್ಕಾರಿ ಪ್ರೌಢಶಾಲೆಯ ಸುಮಾರು 2 ಎಕರೆ ಪ್ರದೇಶದಲ್ಲಿ ಬಹಳ ನೀರು ನಿಂತಿದ್ದು, ಶಾಲೆಯ ಕಟ್ಟಡವನ್ನು ತಗ್ಗು ಪ್ರದೇಶದಲ್ಲಿ ನಿರ್ಮಿಸಿದ್ದರಿಂದ ನೀರು ನಿಂತಿದೆ ಎಂದು ಹೇಳಲಾಗಿದೆ. ಶಾಲಾ ಕಟ್ಟಡದ ಮೂರು ಮೆಟ್ಟಿಲುಗಳನ್ನು ಮೀರಿ ಅಧಿಕ ಪ್ರಮಾಣದ ನೀರು ನಿಂತಿದೆ. ಶಾಲೆಯಲ್ಲಿರುವ (RAIN) ಕಡತಗಳನ್ನು ರಕ್ಷಿಸಲು ಕಟ್ಟಡಕ್ಕೆ ಹೋಗುವುದಕ್ಕೂ ಕೆಲವರು ಭಯ ಬೀಳುವ ಪರಿಸ್ಥಿತಿ ಇದೆ.

ಇಡೀ ಶಾಲೆಯ ಆವರಣವೇಕೆರೆಯಂತಾಗಿದ್ದು, ಈಗ ಅಲ್ಲಿನಿಂತಿರುವ ನೀರು ಹೊರಗೆ ಹೋಗಲು ಒಂದು ವಾರವೇ ಕಾಯಬೇಕಾಗಬಹುದು.
ಇಡೀ ಕಟ್ಟಡ ಹಾಗೂ ಶಾಲೆಗೆ ನಿರ್ಮಿಸಿರುವ ಕಾಂಪೋಂಡ್ ಗೋಡೆಗಳಿಗೆ ಇದರಿಂದ ಧಕ್ಕೆ ಬರುವ ಸಂಭವವೂ ಇದೆ. ಶಾಲೆಯಲ್ಲಿ60 ಮಕ್ಕಳು ಓದುತ್ತಿದ್ದು, ತಾತ್ಕಾಲಿಕವಾಗಿಊರಿನಲ್ಲಿರುವಸರ್ಕಾರಿ ಪ್ರಾಥ ಮಿಕಶಾಲೆಯ ಕಟ್ಟಡದಲ್ಲಿ ತರಗತಿಗಳನ್ನು ನಡೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳುಸೂಚಿಸಿ ದ್ದಾರೆಂದು ಮುಖ್ಯ ಶಿಕ್ಷಕ (RAIN) ತಿಪ್ಪೇಸ್ವಾಮಿ ತಿಳಿಸಿದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರ | ಒಂದೇ ದಿನ ಭರ್ಜರಿ ನೀರು, ನೀರಿನ ಮಟ್ಟ ಭಾರೀ ಏರಿಕೆ | Vani Vilasa Sagara Dam
ಲಕ್ಷ್ಮೀಸಾಗರ ಮತ್ತು ವಿಜಾಪುರದ ಕೆಲವು ಯುವಕರು ಜೆಸಿಬಿ ಇಟಾಚಿ ಬಳಸಿ ಶಾಲಾ ಆವರಣದಲ್ಲಿ ನಿಂತಿರುವ ನೀರನ್ನು ಹೊರಗೆ ಹಾಕುವ ಕೆಲಸ ಮಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252