Chitradurga news|nammajana.com|29-7-2024
ನಮ್ಮಜನ.ಕಾಂ, ಹೊಳಲ್ಕೆರೆ: ಕಳೆದ 15 ದಿನಗಳಿಂದ ನಿರಂತರವಾಗಿ ಹಿಡಿದ ಸೋನೆ ಮಳೆಯಿಂದ ಬೆಳೆಗಳಿಗೆ ಶೀತ (Rain damage) ಹೆಚ್ಚಿ, ರೋಗಕ್ಕೆ ತುತ್ತಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಆದರೆ, ಜಿಟಿ ಮಳೆಯಿಂದ ಪರಬೆಳೆ ಹಾನಿಯಾಗುವ ಭಯ ಮತ್ತೊಂದೆಡೆ. ತಾಲೂಕಿನಲ್ಲಿ ಈಗಾಗಲೇ ಮೆಕ್ಕೆಜೋಳ, (Rain damage) ಶೇಂಗಾ, ಹತ್ತಿ, ಈರುಳ್ಳಿ ಸೇರಿ ಅನೇಕ ಬಿತ್ತನೆಯಾಗಿದ್ದು, ಬೆಳೆಗಳು ಕೈಗೆ ಬರುವ ಮೊದಲು ಹಾಳಾಗುತ್ತವೋ ಆತಂಕ ಶುರುವಾಗಿದೆ.

ಹಳದಿಯಾದ ಈರುಳ್ಳಿ ಸಸಿ (Rain damage)
ತಾಲೂಕಿನಲ್ಲಿ ಎರಡು ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ತಾಳ್ಯ ಹೋಬಳಿಯಲ್ಲಿ 200 ಹೆಕ್ಟೇರ್ ಬಿತ್ತನೆ ಹೊರತುಪಡಿಸಿ ಉಳಿದಂತೆ ರಾಮಗಿರಿ ಹೋಬಳಿಯಲ್ಲೇ ಹೆಚ್ಚು ಈರುಳ್ಳಿ ಬಿತ್ತನೆಯಾಗಿದೆ. ಕಳೆದ 15 ದಿನಗಳಿಂದ ಹಗಲು ರಾತ್ರಿ ಮಳೆಯಾಗುತ್ತಿದೆ. ನಿರಂತರ ಶೀತ ವಾತಾವರಣ ಹಾಗೂ (Rain damage) ಭೂಮಿ ಅಗತ್ಯಕ್ಕಿಂತ ಹೆಚ್ಚು ತಂಪಾದ ಕಾರಣ ಈರುಳ್ಳಿ ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ. ಸಮತಟ್ಟಾದ ಭೂಮಿಯಲ್ಲಿ ನೀರು ನಿಂತಲ್ಲೆ ನಿಲ್ಲುತ್ತಿರುವುದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
ಹೆಚ್ಚುತ್ತಿದೆ ಕಳೆ: (Rain damage)
ನಿರಂತರವಾಗಿ ಹಿಡಿದ ಜಡಿ ಮಳೆಗೆ ಹೊಲಗಳಲ್ಲಿ ಕಳೆ ಕೂಡ (Rain damage) ಹೆಚ್ಚುತ್ತಿದೆ. ಕೆಲ ಈರುಳ್ಳಿ ಹೊಲಗಳಲ್ಲಿ ಬೆಳೆಗಿಂತ ಕಳೆಯೇ ಹೆಚ್ಚಾಗಿದ್ದು, ಕಳೆಯ ನಡುವೆ ಬೆಳೆ ಕಾಣದಂತಾಗಿದೆ. ಕಳೆ
ಮೆಕ್ಕೆ ಜೋಳಕ್ಕೂ ಹಾನಿ: ಜಡಿ ಮಳೆಯಿಂದ ಈರುಳ್ಳಿ ಅಷ್ಟೆ ಅಲ್ಲ, ಮೆಕ್ಕೆಜೋಳ, ಶೇಂಗಾ (Rain damage)
ಹಾಗೂ ಇತರೆ ಬೆಳೆಗಳಿಗೂ ಹಾನಿಯಾಗಲಿದೆ. ಅದರಲ್ಲೂ ಒಂದು ತಿಂಗಳಿಗಿಂತ ಒಳಗಿನ ಮೆಕ್ಕೆಜೋಳ ಅತಿ ಹೆಚ್ಚು (Rain damage) ಹಾನಿಗೊಳಗಾಗಲಿದೆ. ರೋಗ ಹಾಗೂ ಇಳುವರಿ ಕುಂಠಿತ ಕಾಣಲಿದೆ. ಶೇಂಗಾ ಇಳುವರಿ ಕೂಡ ಕುಂಠಿತವಾಗಲಿದೆ.
ಮಳೆ ನಿಂತಿಲ್ಲ ಕೆರೆ ತುಂಬಿಲ್ಲ:(Rain damage)
ಜಿಲ್ಲೆಯಲ್ಲಿ ಒಂದಿಷ್ಟು ಜಡಿ ಮಳೆ ಹೊರತುಪಡಿಸಿ, ಜೋರು ಮಳೆಯಾಗಿಲ್ಲ. ರಾಜ್ಯದ ಬಹುತೇಕ ಜಲಾಶಯಗಳು ತುಂಬಿವೆ. ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಕೆರೆ ತುಂಬುವಂತಹ ಮಳೆಯಾಗಿಲ್ಲ. ಒಂದೆರಡು ದಿನ ಮಳೆ ಬಿಡುವು ನೀಡಿ, (Rain damage) ಸೂರ್ಯನ ಕಿರಣಗಳು ಭೂಮಿಗೆ ಬಿದ್ದಲ್ಲಿ ರೈತರು ರಾಗಿ ಬಿತ್ತನೆ ಮಾಡಲಿದ್ದಾರೆ. ಅಲ್ಲದೇ ಬೆಳೆಗಳು ಕೂಡ ಅತಿಯಾದ ಶೀತದಿಂದ ಪಾರಾಗಲಿವೆ.
ಬಾಕ್ಸ್
ಕನಿಷ್ಠ ಎರಡು ದಿನ ಮಳೆ ಬಿಡುವು ಕೊಟ್ಟರೂ ಬೆಳೆಗಳು ಹಸನಾಗಲಿವೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಹಳದಿ ಬಣ್ಣಕ್ಕೆ ತಿರುಗಿರುವ ಈರುಳ್ಳಿಗೆ ಔಷಧ ಸಿಂಪಡಣೆ ಬೇಡ.(Rain damage) ಬದಲಿಗೆ ಜಮೀನುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ: Donkeys marry for rain: ಮಳೆಗಾಗಿ ಕತ್ತೆಗಳ ಮದುವೆ
ಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕ,
ಬಾಕ್ಸ್
ಮೂರ್ನಾಲ್ಕು ವರ್ಷ ಮಳೆ ಅಭಾವದಿಂದ ಈರುಳ್ಳಿ ಕೈ ಸೇರಿಲ್ಲ. ಈಗ 15 ದಿನದಿಂದ ಮಳೆ ಬರುತ್ತಿದೆ. ಅತಿಯಾದ ಶೀತದಿಂದ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಈ ಬಾರಿ ಏನಾಗುತ್ತೋ (Rain damage) ಎಂಬ ಭಯ ಕಾಡುತ್ತಿದೆ. ಈರುಳ್ಳಿ ಸಹವಾಸವೇ ಬೇಡ ಎಂಬಂತಾಗಿದೆ.
ತಿಪ್ಪೇಸ್ವಾಮಿ, ರೈತ ರಾಮಗಿರಿ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252