Chitradurga news|nammajana.com|26-5-2024
ನಮ್ಮಜನ.ಕಾಂ, ಪರಶುರಾಂಪುರ: ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಗಾಳಿ, ಮಳೆ (Rain damage)ಬಿದ್ದು ಬಿಸಿಲ ತಾಪ ಕರಗುವಂತೆ ಮಾಡುವುದರ ಜತೆ ಮನೆ,ತೋಟಗಾರಿಕೆ,ವಿದ್ಯುತ್ ಇಲಾಖೆ ಸೇರಿದಂತೆ ಇನ್ನಿತರೆ ನಷ್ಟ ಉಂಟಾಗಿದೆ.
ಏನೆಲ್ಲ ಹಾನಿಗೊಳಗಾಗಿದೆ ನೋಡಿ
ಶುಕ್ರವಾರ ಮುಸ್ಸಂಜೆ ವೇಳೆಯಲ್ಲಿ ಬೀಸಿದ ಗಾಳಿ, ಮಳೆಗೆ (Rain damage)ಗುಡಿಸಲು, ಮನೆಗಳ ಶಡ್‌ಗಳು ಸೇರಿ ಕುಸಿದು ಬಿದ್ದು, ಹಾನಿ ಸಂಭವಿಸಿದೆ.ರೈತ ಶ್ರೀನಿವಾಸ ಅವರಿಗೆ ಸೇರಿದ ಬಾಳೆ ತೋಟ ಗಾಳಿ ಮಳೆಯಿಂದ ಸುಮಾರು ಐವತ್ತು ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ.

ಚೌಳೂರು ಸಮೀಪದ ಬಸವೇಶ್ವರ ಕಾಲೋನಿಯ ಮಳೆಗೆ ಒಂದು ಮನೆ ಬಿದ್ದಿದೆ.ಕ್ಯಾದಿಗುಂಟೆ ಗ್ರಾಮದ ರೈತ ನರಸಿಂಹಮೂರ್ತಿ ಅವರಿಗೆ ಸೇರಿದ ಗಾಳಿ ಮಳೆಗೆ ಹತ್ತುಕ್ಕಿಂತ ಹೆಚ್ಚು ಅಡಿಕೆ ಮರಗಳು ಮುರಿದು ಬಿದ್ದಿವೆ.ಸದರಿ ಗ್ರಾಮದ ಸಣ್ಣಚಿತ್ತಪ್ಪ ಅವರ ಬಾಳೆ (Rain damage)ತೋಟವು ಗಾಳಿಯಿಂದ ಅಪಾರ ನಷ್ಟ ಉಂಟಾಗಿದೆ.
ಗಾಳಿ ಮಳೆ (Rain damage) ವಿದ್ಯುತ್ ಕಂಬಗಳು ಬಿದ್ದಿವೆ
ಶುಕ್ರವಾರ ರಾತ್ರಿ ಬಾರಿ ಗಾಳಿ ಮಳೆಗೆ ಕ್ಯಾದಿಗುಂಟೆ ಗ್ರಾಮದಲ್ಲಿ ಮರಗಳು ವಿದ್ಯುತ್ ವೈರ್ ಗಳ ಮೇಲೆ ಬಿದ್ದು ಒಂಬತ್ತು ಕಂಬಗಳು ನೆಲಕ್ಕೆ ಬಿದ್ದಿವೆ.ಇದರಿಂದ ಸುಮಾರು ಒಂದು ಲಕ್ಷಕ್ಕಿಂತ ಅಧಿಕ ನಷ್ಟವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Vani Vilasa Sagara Dam: ಮೇ 26ರ ವಿ.ವಿ.ಸಾಗರದ ನೀರಿನ ಮಟ
ಮೋಡ (Rain damage)ಕವಿದ ತಂಪುಗಾಳಿ-ಶನಿವಾರ ಮುಂಜಾನೆಯಿಂದ ಮೋಡದ ಮರೆಯಲ್ಲಿ ಅವಿತ ಸೂರ್ಯ ಸಂಜೆಯಾದರೂ ದರ್ಶನವೇ ನೀಡಲಿಲ್ಲ. ಕಳೆದ ಮೂರು ತಿಂಗಳಿಂದ ಒಲೆ ಮೇಲಿನ ಹಂಚಿನಂತೆ ಕಾಯ್ದು ಸುಡುತ್ತಿದ್ದ ಭೂಮಿ ತಂಪಾಗಿದೆ. ನೈಸರ್ಗಿಕ ವಾತವರಣದಲ್ಲಿ ಆಗಿರುವ ದಿಢೀರ್ ಬದಲಾವಣೆ ರಣ ಬಿಸಲಿನಿಂದ ತತ್ತರಿಸಿದ ಜನರಿಗೆ ಎಲ್ಲಿಲ್ಲದ ಸಂತಸ ತಂದಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252