Chitradurga news | nammajana.com | 19-5-2024
ವರದಿ:ಲಕ್ಕಿಹಳ್ಳಿ ಸಿದ್ದೇಶ್
ನಮ್ಮಜನ.ಕಾಂ, ಹೊಸದುರ್ಗ: ತಾಲೂಕಿನ ಹಲವು ಕಡೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆಗಳಲ್ಲಿ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆ(Rain) ಯಿಂದಾಗಿ ವೇದಾವತಿ ನದಿ ಮೈದುಂಬಿ ಕೆಲ್ಲೋಡ್ ಬ್ಯಾರೇಜ್ (Kelod barrage) ಭರ್ತಿಯಾಗಿ ಹರಿಯುತ್ತಿದ್ದು, ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಮಳೆಯಿಂದ (Rain) ರೈತರ ಮೊಗದಲ್ಲಿ ಮಂದಹಾಸ
ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳನ್ನು ಕೂಡ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿತ್ತು. ಈ ಭಾಗದ ರೈತರ ಜಮೀನುಗಳಲ್ಲಿ ಬರುತ್ತಿದ್ದ ನೀರು ಬತ್ತಿ ಹೋಗಿ ತೋಟಗಳು ಒಣಗಿ ನಿಲ್ಲುವ ಹಂತಕ್ಕೆ ಬಂದಿದ್ದವು. ಮಳೆ (Rain) ಬರುವುದನ್ನೇ ಕಾಯುತ್ತಾ ರೈತರು ಮುಗಿಲು ನೋಡುತ್ತಿದ್ದರು. ರೈತರ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ವರುಣಾದೇವ ಕೃಪೆ ತೋರಿದ್ದಾನೆ.
ಸುರಿದ ಮಳೆಗೆ (Rain) ಕೊಚ್ಚಿ ಹೋದ ರಸ್ತೆ
ಹೊಸದುರ್ಗ ಪಟ್ಟಣದ ಸುತ್ತಮುತ್ತ 120.6 ಮಿ.ಮೀ, ಬಾಗೂರು 40.3 ಮಿ.ಮೀ, ಮಾಡದಕೆರೆ 51.2 ಮಿ.ಮೀ, ಮತ್ತೋಡು 14.4 ಮಿ.ಮೀ, ಶ್ರೀರಾಂಪುರ 15.0 ಮಿ.ಮೀ ಮಳೆಯಾಗಿದೆ. ಕಡದನಕೆರೆ ಗ್ರಾಮದಲ್ಲಿ ಸುರಿದ ಮಳೆಗೆ ಗ್ರಾಮದ ಮುಖ್ಯರಸ್ತೆ ಕೊಚ್ಚಿ ಹೋಗಿದೆ.
ಇದನ್ನೂ ಓದಿ: Death news: ಸೋಬಾನೆ ಪದದ ಕೋಗಿಲೆ ಈಶ್ವರಪ್ಪ ಇನ್ನು ನೆನಪು ಮಾತ್ರ
ಹೆಬ್ಬಳ್ಳಿ, ಹೊನ್ನೇಕೆರೆ, ಆಲದಹಳ್ಳಿ, ಮಾಡದಕೆರೆ, ಕುಂಬಾರಗಟ್ಟೆ,ಹೆಗ್ಗೆರೆ, ಶ್ರೀರಾಂಪುರ ಮತ್ತು ಇನ್ನಿತರ ಗ್ರಾಮಗಳಲ್ಲಿ ಕೆಲ ರೈತರ ಜಮೀನುಗಳಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ಮಳೆ (Rain) ಹಾನಿಯಿಂದಾಗಿ ತಾಲೂಕಿನಲ್ಲಿ ಒಟ್ಟು 2 ಲಕ್ಷದ 30 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ತಹಶೀಲ್ದಾರ್ ಕಚೇರಿಯಿಂದ ಮಾಹಿತಿ ನೀಡಲಾಗಿದೆ.