Chitradurga News | Nammajana.com |24-09-2025
ನಮ್ಮಜನ ನ್ಯೂಸ್ ಕಾಂ, ಚಿತ್ರದುರ್ಗ: ಇಂದಿನ (Rajamatthi Thimmanna Nayaka) ಯುವ ಪೀಳಿಗೆಗೆ ನಮ್ಮ ಚಿತ್ರದುರ್ಗ ಇತಿಹಾಸವನ್ನು ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ ಇದರಿಂದ ನಮ್ಮ ದುರ್ಗದಲ್ಲಿ ಯಾವ ರಾಜರು ಆಳ್ವಿಕೆಯನ್ನು ನಡೆಸಿದರು ಅವರ ಕಾಲದಲ್ಲಿ ಏನು ಪ್ರಗತಿಯಾಯಿತು ಕೋಟೆಯನ್ನು ಯಾವಾಗ ನಿರ್ಮಾಣ ಮಾಡಲಾಯಿತು ಎಂಬ ಮಾಹಿತಿಗಳು ಸಿಗುತ್ತವೆ ಎಂದ ಸಾಹಿತಿ ಬಿ.ಎಲ್.ವೇಣು ತಿಳಿಸಿದರು.

ಇದನ್ನೂ ಓದಿ: Power cut : 2 ದಿನ ವಿದ್ಯುತ್ ವ್ಯತ್ಯಯ | ಈ ಹಳ್ಳಿಗಳಲ್ಲಿ ಕರೆಂಟ್ ಇರಲ್ಲ…
ನಗರದ ಕೋಟೆ ರಸ್ತೆಯಲ್ಲಿನ ಏಕನಾಥೇಶ್ವರಿ ಪಾದಗುಡಿಯ ಬಳಿಯಲ್ಲಿನ ವೃತ್ತಕ್ಕೆ ಹಗಲು ಕಗ್ಗೋಲೆಯ ಮಾನ್ಯ ರಾಜಮತ್ತಿತಿಮ್ಮಣ್ಣ ನಾಯಕ ವೃತ್ತ ಎಂದು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ವೃತ್ತಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು,
ರಾಜಮತ್ತಿತಿಮ್ಮಣ್ಣ ನಾಯಕರವರು ಚಿತ್ರದುರ್ಗವನ್ನು ಆಳಿದ ಪ್ರಥಮ ಅರಸರಾಗಿದ್ಧಾರೆ, ತಿಮ್ಮಣ್ಣ ನಾಯಕ ಕರೆ, ಮಾವಿನ ತೋಪು ಹಾಗೂ ಬೆಟ್ಟದ ಮೇಲಿನ ಏಕನಾಥೇಶ್ವರಿ ಅಮ್ಮನವರ ದೇವಾಲಯವನ್ನು ಇವರ ಕಾಲದಲ್ಲಿಯೇ ನಿರ್ಮಾಣ ಮಾಡಲಾಗಿತ್ತು. ವಿಜಯನಗರದ ಅರಸ ಆಳ್ವಿಕೆ ಬಲಹೀನಗೊಂಡಾಗ ಸುತ್ತಮುತ್ತಲಿನ ಪಾಳೇಗಾರರು ತಾವೇ ಸ್ವತಂತ್ರ ದೊರೆಗಳಾಗಿ ಬಿಟ್ಟರೆನ್ನುತ್ತದೆ ಇತಿಹಾಸ.
ಆದರೆ ಮತ್ತಿ ತಿಮ್ಮಣ್ಣನಾಯಕರಂಥವರು ತಮ್ಮ ಛಲ ಬಲ ದುರ್ಗದ ಮೇಲಿನ ಗಾಢಪ್ರೇಮವನ್ನೇ ಪಣವಾಗಿಟ್ಟು ಪಟ್ಟವನ್ನೇರಿದವರು. ತಮ್ಮ ಪರಾಕ್ರಮ ಸಮರ ಚಾತುರ್ಯ ದಿಟ್ಟ ನಿರ್ಧಾರ ಪ್ರಜಾಪ್ರೇಮ ನಾಡು ನುಡಿ ನೆಲ ಜಲದ ಮೇಲಿನ ಅಪಾರ ಅಭಿಮಾನ, ಜೀವನದಲ್ಲಿ ಎದುರಾಗುವ ಕಡುಕಷ್ಟಗಳಿಗೆ ಒಡ್ಡಿಕೊಳ್ಳುವ ಪರಿ ಸ್ವಾಭಿಮಾನವನ್ನೇ ಪಣಕ್ಕಿಟ್ಟ ವೈಖರಿ.
ಯುದ್ಧದಲ್ಲಿ ಕೈ ಕಳೆದುಕೊಂಡರೂ ಮೋಟುಗೈನಲ್ಲೇ ನಡೆಸುವ ಸಮರಗಳು,ಕಂಡ ಗೆಲುವುಗಳು,ಜೀವನ ಪ್ರೀತಿ ಪ್ರಜಾವಾತ್ಸಲ್ಯ ಆತನನ್ನೂ ಜನ ಬಹುಬೇಗ ದೊರೆಯೆಂದು ಮನಸಾ ಒಪ್ಪಿಕೊಂಡವು ಎಂದರು.
ರಾಜಮತ್ತಿತಿಮ್ಮಣ್ಣ ನಾಯಕ ವೃತ್ತ ಎಂದು ನಾಮಕರಣ:
ವಿಜಯನಗರದ ಮಲ್ಲಣ್ಣ ಒಡೆಯರ್‍ನ ಕೆಟ್ಟ ಆಡಳಿತದಿಂದ ಬೇಸತ್ತಿದ್ದ ಜನ ತಿಮ್ಮಣ್ಣನಾಯಕನನ್ನು ಗೌರವಿಸಿದಾಗ ತಿರುಮಲರಾಯರೂ ತೆಪ್ಪೆಗಾದರು. ಆದರೆ ಸಾಳ್ವ ನರಸಿಂಗರಾಯನ ಕಣ್ಣು ದುರ್ಗದ ಮೇಲಿತ್ತು. ವಿಜಯನಗರದ ಅರಸರ ಬಳಿ ಚಾಡಿ ಹೇಳಿ ಯುದ್ದಕ್ಕೆ ಬಂದು ಸೋತರೂ ಕೆಟ್ಟ ಬುದ್ಧಿ ಬಿಡಲಿಲ್ಲ.
ಇದನ್ನೂ ಓದಿ: Chitradurga Gold Rate | ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ಇದೇ ಸಮಯಮದಲ್ಲಿ ಅವನ ಪಟ್ಟದ ಕುದುರೆ,ಆನೆ ಕದ್ದು ಯುದ್ಧ ಮಾಡಲು ವಾಹನವೇ ಇಲ್ಲದಂತೆ ಮಾಡಿ ರಾಯನನ್ನು ನಾಯಕ ನಗೆ ಪಾಟಲು ಮಾಡಿದ್ದ ತಮ್ಮ ಅಜಾತಶತ್ರುವಾದ ಕಲ್ಬುರ್ಗಿಯ ಆದಿಲ್ ಶಾಹಿ ಸುಲ್ತಾನನನ್ನು ಗೆದ್ದು ಬರಲು ಶ್ರೀರಂಗರಾಯ ಸೂಚಿಸುವಂತೆ ಮಾಡಿದ.
ತಿಮ್ಮಣ್ಣನಾಯಕ ಸವಾಲಿನಂತೆ ಸ್ವೀಕರಿಸಿ ಸಮರಗೈದು ಅರಸರಿಗೆ ತಿಂಗಳಾದರೂ ಗೆಲ್ಲಲಾಗದ ಕಲ್ಬುರ್ಗಿಯನ್ನು ಮೂರು ಹಗಲಿನಲ್ಲೇ ಜಯಿಸಿ ವಿಜಯನಗರದ ಅರಸರಿಗೆ ಬಳುವಳಿಯಾಗಿ ನೀಡಿದನು ನಾಯಕ. ಅರಸರು ನಾಯಕನಿಗೆ ಹಗಲುಕಗ್ಗೊಲೆ ಮಾನ್ಯ ನೆಂದು ಬಿರುದು ನೀಡಿ ಗೌರವಿಸಲಾಯಿತು.
ಅರಸ ತಿಮ್ಮಣ್ಣನಾಯಕನನ್ನು ಹಬ್ಬಕ್ಕೆ ಕರೆದಂತೆ ಮಾಡಿ ಮೋಸದಿಂದ ಬಂಧಿಸಿ ನೆಲಮಾಳಿಗೆ ಯಲ್ಲಿಟ್ಟ.ನಾಯಕನದು ಬಲಿಷ್ಠ ಸೇನೆಯಲ್ಲ.ಮಗನೂ ಚಿಕ್ಕವನೂ ಆದ್ದರಿಂದ ಯಾರೂ ಸಂಧಾನಕ್ಕೆ ಬರಲೂ ಹೆದರಿದರು.ಹೀಗಾಗಿ ಐದುವರ್ಷಗಳ ಕಾಲ ಸೆರೆವಾದಲ್ಲೇ ಇದ್ದು ಮೃತನಾಗುತ್ತಾನೆ. ತುಂಗಾ ನದಿಯ ತಟದಲ್ಲೇ ತಿಮ್ಮಣ್ಣನಾಯಕನ ಮಗ ಒಬಣ್ಣನಾಯಕನ್ನು ಕರೆಸಿ ಅಂತ್ಯ ಸಂಸ್ಕಾರ ಮಾಡಿಸುವಷ್ಟು ಸಂಸ್ಕಾರ ತೋರುತ್ತಾರೆ ವಿಜಯನಗರದ ಅರಸರು. ಅಲ್ಲಿಂದ ಅಸ್ತಿ ತಂದು ಮತ್ತಿ ಗ್ರಾಮದಲ್ಲಿಯೂ ಅಂತಿಮ ನಮನ ಸಲ್ಲಿಸುತ್ತಾರೆ ಎಂದು ವೇನು ತಿಳಿಸಿದರು.
ಇದನ್ನೂ ಓದಿ: application : ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ನಗರಸಭೆಯ ಮಾಜಿ ಅಧ್ಯಕ್ಷರಾದ(Rajamatthi Thimmanna Nayaka) ಬಿ.ಕಾಂತರಾಜ್ ಮಾತನಾಡಿ, ಚಿತ್ರದುರ್ಗವನ್ನು ಹಲವಾರು ಪಾಳೇಗಾರರು ಆಳ್ವಿಕೆಯನ್ನು ನಡೆಸಿದ್ದಾರೆ ಇದರಲ್ಲಿ ರಾಜಮತ್ತಿತಿಮ್ಮಣ್ಣ ನಾಯಕರವರು ಚಿತ್ರದುರ್ಗವನ್ನು ಆಳಿದ ಪ್ರಥಮ ಅರಸರಾಗಿದ್ಧಾರೆ, ಇವರ ಹೆಸರನ್ನು ವೃತ್ತಕ್ಕೆ ಇಡುವುದು ನಮ್ಮ ಸೌಭಾಗ್ಯವಾಗಿದೆ, ಈ ವೃತ್ತದ ಮೇಲೆ ಚಿತ್ರರ್ಗವನ್ನಾಳಿದ ಎಲ್ಲಾ ನಾಯಕರುಗಳ ಭಾವ ಚಿತ್ರವನ್ನು ಹಾಕುವುದರ ಮೂಲಕ ಇಲ್ಲಿಗೆ ಬರುವ ಪ್ರವಾಸಿಗರಿಗೆ ನಮ್ಮ ದುರ್ಗದ ಇತಿಹಾಸ ತಿಳಿಯುತ್ತದೆ ಈ ಕಾರ್ಯವನ್ನು ನಮ್ಮ ನಗರಸಭೆ ಮಾಡಲಿ ಎಂದರು.
ಇತಿಹಾಸ ಸಂಶೋಧಕರಾದ ಮಹಾಂತೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ರಮೇಶ್, ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್, ಮದಕರಿ ಸಂಘದ ಅಧ್ಯಕ್ಷರಾದ ಡಿ.ಗೋಪಾಲಸ್ವಾಮಿ ನಾಯಕ್ ನಗರಸಭಾ ಸದಸ್ಯರಾದ ದೀಪು, ಚಂದ್ರಶೇಖರ್, ಮಾಜಿ ಸದಸ್ಯರಾ ಎಸ್.ಬಿ. ಮಲ್ಲಿಕಾರ್ಜನ್, ಸಿ.ಟಿ.ರಾಜೇಶ್, ಸಾಹಿತಿ ಆನಂದಕುಮಾರ್, ಕುಮಾರ್, ಶಿವಶಕ್ತಿ ಪ್ರಸನ್ನ ಕುಮಾರ್ ಅಜೇಯ ಮದಕರಿ ಸೋಮಶೇಖರ್, ರಾಜ ಮದಕರಿ ನಾಯಕ, ಸರ್ಕಾರಿ ನಿವೃತ್ತಿ ನಾಯಕರ ಸಂಘದ ಬೋರಯ್ಯ, ಕರವೇ ಅಧ್ಯಕ್ಷ ರಮೇಶ್, ಸೋಮೇಂದ್ರ, ಪಾಪೇಶ್ ನಾಯಕ್, ಸಾಹಿತಿ ಕುಮಾರ್ ಬಡ್ಡಪ್ಪ, ನವೀನ್ ಮಸ್ಕಲ್ ಸೇರಿದಂತೆ ಇತರರು ಭಾಗವಹಿಸಿದ್ದರು.
