Chitradurga news|Nammajana.com|4-10-2025
ನಮ್ಮಜನ.ಕಾಂ, ಚಿತ್ರದುರ್ಗ: ಮೈಸೂರು ದಸರಾ ಉತ್ಸವದಲ್ಲಿ ನಡೆದ ಸ್ಥಬ್ದ ಚಿತ್ರ ಪ್ರದರ್ಶನದಲ್ಲಿ ಚಿತ್ರದುರ್ಗ ಜಿಲ್ಲೆಯ (Rajaveer Madakari Nayak Still Film) ರಾಜಾವೀರ ಮದಕರಿ ನಾಯಕ ಸ್ಥಬ್ದಚಿತ್ರ ಪ್ರಥಮ ಸ್ಥಾನ ಪಡೆದಿದೆ.

ರಾಜಾವೀರ ಮದಕರಿ ನಾಯಕ ಮದಿಸಿದ ಆನೆಯನ್ನು ಮದವಡಗಿಸಿದ ಪರಿಕಲ್ಪನೆಯಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಿಂದ ರಚಿಸಲಾಗಿತ್ತು.
ಇದನ್ನೂ ಓದಿ: Today Gold Rate | ಬಂಗಾರದ ಬೆಲೆ ಕೇಳಿ ಜನ ಶಾಕ್, ಇಂದು ಏರಿಕೆ ಹಾದಿ
ಈ ಸ್ಥಬ್ದ ಚಿತ್ರಕ್ಕೆ ಬೆಂಗಳೂರು ವಿಭಾಗ ಮಟ್ಟದಲ್ಲಿ ಮೊದಲ ಸ್ಥಾನ ಲಭಿಸಿದೆ. ಈ ಸ್ತಬ್ಧ ಚಿತ್ರ ನಿರರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ (Rajaveer Madakari Nayak Still Film) ಸಿಇಓ ಡಾ.ಎಸ್.ಆಕಾಶ್ ಪರಿಕಲ್ಪನೆ ನೀಡಿದ್ದರು.
ಸ್ತಬ್ಧ ಚಿತ್ರ ತಯಾರಿಕೆ ಹಾಗೂ ಪ್ರದರ್ಶನದಲ್ಲಿ ಶ್ರಮವಹಿಸಿದ ಎಲ್ಲಾ ಕಲಾವಿದರಿಗೂ ಹಾಗೂ ಸಹಕರಿಸಿದ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿಯಿಂದ (Rajaveer Madakari Nayak Still Film) ಅಭಿನಂದನೆ ಸಲ್ಲಿಸಿದೆ.
