Chitradurga news|Nammajana.com|3-8-2025
ನಮ್ಮಜನ.ಕಾಂ, ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಚಳ್ಳಕೆರೆ ನಗರದ ಮಧ್ಯಭಾಗದಲ್ಲಿ ಹಾದುಹೋಗುತ್ತಿರುವ (Rajkaluve) ರಾಜಕಾಲುವೆಯ ಎರಡೂ ಬದಿಯಲ್ಲಿ ಇತರೆ ಗಿಡಗಳ ಜೊತೆಗೆ ಆಫ್ ಬೆಳೆದು ಮಳೆಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮನೆಗಳಿಗೆ ನುಗ್ಗಿ ಅವಾಂತರ ಉಂಟು ಮಾಡುತ್ತದೆ.

ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾರ್ಗದರ್ಶನದಂತೆ ಪೌರಾಯುಕ್ತ ಎಚ್.ಜಿ.ಜಗರೆಡ್ಡಿ ರಾಜಕಾಲುವೆಯ ಎರಡೂ ಬದಿಯಲ್ಲಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಬಳ್ಳಾರಿ ರಸ್ತೆಯಲ್ಲಿ ಹಾದುಹೋಗಿರುವ ರಾಜಕಾಲುವೆಯಲ್ಲಿ ಬೆಳೆದು ನಿಂತಿದ್ದ ಆಫ್‌ನ್ನು ತೆರವುಗೊಳಿಸಲಾಗುತ್ತಿದೆ. ಆದರೆ, (Rajkaluve) ಮತ್ತೊಂದು ಬದಿಯಲ್ಲಿ ಆಫ್ ಬೆಳೆದಿದ್ದು ನೀರು ಹರಿಯಲು ತೊಂದರೆಯಾಗುತ್ತಿದೆ, ಇದನ್ನು ಗಮನಿಸಿದ ಪೌರಾಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ರಾಜಕಾಲುವೆಯಲ್ಲಿ ಬೆಳೆದ ಎಲ್ಲಾ ಗಿಡಗಳನ್ನು ತೆರವು ಮಾಡಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ಧಾರೆ.
ಇದನ್ನೂ ಓದಿ: ಮೇದಾರ ಅಭಿವೃದ್ಧಿ ನಿಗಮ : ನೇರ ಸಾಲ, ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಅಹ್ವಾನ
ಪ್ರಸ್ತುತ ರಾಜಕಾಲುವೆ ರಹಿಂನಗರದಿಂದ ಆರಂಭವಾಗಿ ಬಳ್ಳಾರಿ ರಸ್ತೆಯ ಹೊಸಮನೆ ಕಪಿಲೆ ಮೂಲಕ ಕಾಟಪ್ಪನಹಟ್ಟಿ ಮೂಲಕ ಪಾವಗಡ ರಸ್ತೆ, ಮುಕ್ತಿಧಾಮದ ಮೂಲಕ ರೈಲ್ವೆ ಸ್ಟೇಷನ್ ಬಳಿಯ ಹಳ್ಳಕ್ಕೆ ಸೇರುತ್ತದೆ. ಕೆಲವೊಂದು ಸಂದರ್ಭದಲ್ಲಿ ಮಳೆ ವಿಪರೀತವಾದಗ ಹೆಚ್ಚಿನ ಪ್ರಮಾಣದ ನೀರು ಜಮೀನು ಮತ್ತು ಮನೆಗಳಿಗೆ ನುಗ್ಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ರಾಜಕಾಲುವೆಯ ಅಗಲವನ್ನು (Rajkaluve) ದೃಢೀಕರಿಸಿಕೊಂಡು ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಬೇಕೆಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಆರೋಗ್ಯ ನಿರೀಕ್ಷಕ ರುದ್ರಮುನಿ ಮೊದಲಾದವರು ಇದ್ದರು.
