Chitradurga News | Nammajana.com | 10-08-2025
ನಮ್ಮಜನ.ಕಾಂ,ಹೊಳಲ್ಕೆರೆ: ಮೂರನೇ(Holalkere) ಬಾರಿ ಹೊಳಲ್ಕೆರೆಯಲ್ಲಿ ಶಾಸಕನಾಗಿದ್ದೇನೆ. ಮತ ಹಾಕಿದವರು, ಹಾಕದವರು ಎನ್ನುವ ತಾರತಮ್ಯ ಯಾರಿಗೂ ಮಾಡಿಲ್ಲ. ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದೇನೆ. ಅಧಿಕಾರವಿದ್ದಾಗ ಜನರಿಗೆ ಉಪಕಾರ ಮಾಡಬೇಕೆಂಬ ಮನೋಭಿಲಾಷೆ ನನ್ನದು ಎಂದು ಶಾಸಕ ಡಾ.ಎಂ.ಚಂದ್ರಪ್ಪ ನುಡಿದರು.
ಇದನ್ನೂ ಓದಿ: ಚಳ್ಳಕೆರೆ ತಾಲ್ಲೂಕಿನಾದ್ಯಂತ ಆಶ್ಲೇಷ ಮಳೆಯ ಆರ್ಭಟ ಆರೇ ದಿನದಲ್ಲಿ 779.16 ಎಂ.ಎಂ ಮಳೆ | ಜಮೀನು ನೀರು ಅಪಾತ ನಷ್ಟ

ತಾಲ್ಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಹಾಲುಕೊಳ್ಳದ ಜಂಗಮೇಶ್ವರಸ್ವಾಮಿಯ ಪುನರ್ ನಿರ್ಮಾಣ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಥಮ ಬಾರಿಗೆ ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದಾಗ ಮತ ಕೇಳಲು ಹಳ್ಳಿಗಳಿಗೆ ಹೋಗಲು ರಸ್ತೆಗಳಿರಲಿಲ್ಲ. ಗೆದ್ದ ಮೇಲೆ ಐದು ವರ್ಷದಲ್ಲಿ 386 ಹಳ್ಳಿಗಳಿಗೆ ರಸ್ತೆ ಮಾಡಿಸಿದ್ದರಿಂದ ಜನ ರಸ್ತೆ ರಾಜ ಎನ್ನುವ ಬಿರುದು ನೀಡಿ ಎರಡನೆ ಬಾರಿಗೆ ಚುನಾವಣೆಗೆ ನಿಂತಾಗ ಯುವಕರು ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿ 21 ಸಾವಿರ ಮತಗಳ ಅಂತರದಿಂದ ಮತ್ತೆ ಗೆಲ್ಲಿಸಿದರೆಂದು ಶಾಸಕ ಡಾ.ಎಂ.ಚಂದ್ರಪ್ಪ ಸ್ಮರಿಸಿಕೊಂಡರು.
ಸಾರ್ವಜನಿಕರ ಬದುಕನ್ನು ಸ್ವಂತ(Holalkere) ಬದುಕೆಂದು ಅರ್ಥಮಾಡಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಭದ್ರಾ ಜಲಾಶಯದಿಂದ ಇನ್ನು ಮೂರು ತಿಂಗಳೊಳಗೆ ತಾಲ್ಲೂಕಿನ 37 ಕೆರೆಗಳಿಗೆ ನೀರು ತುಂಬಿಸುತ್ತೇನೆಂದು ಭರವಸೆ ನೀಡಿದರು.
ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಮಹಾಸ್ವಾಮೀಜಿ ಮಾತನಾಡಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರು ಪಕ್ಷಾತೀತವಾಗಿದ್ದಾರೆ. ಬೇರೆ ಪಕ್ಷದವರೆಂದು ಯಾರನ್ನು ಕಡೆಗಣಿಸುವುದಿಲ್ಲ. ಇಂತಹ ಶಾಸಕರು ನಿಮಗೆ ಸಿಕ್ಕಿರುವುದು ಪುಣ್ಯ. ಗ್ರಾಮಕ್ಕೆ ಏನೇನು ಬೇಕು ಎನ್ನುವುದನ್ನು ಪಟ್ಟಿ ಮಾಡಿಕೊಂಡು ಶಾಸಕರಿಂದ ಅನುಕೂಲ ಪಡೆದುಕೊಳ್ಳಿ.
ಇದನ್ನೂ ಓದಿ: ಆಗಸ್ಟ್ 12 ರಂದು ಆಶಾ ಕಾರ್ಯಕರ್ತರ ಪ್ರತಿಭಟನೆ
ಇನ್ನು ಮೂರು ತಿಂಗಳೊಳಗೆ ಭದ್ರಾ(Holalkere) ಜಲಾಶಯದಿಂದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದಾಗಿ ಮಾತು ಕೊಟ್ಟಿದ್ದಾರೆ. ಅವರಲ್ಲಿ ಬದ್ದತೆಯಿದೆ. ಹೇಳಿದ ಕೆಲಸವನ್ನು ಮಾಡಿ ಮುಗಿಸುವ ಸಾಮಥ್ರ್ಯವಿದೆ. ಹೊಸಕೆರೆ ಮತ್ತು ಹಳೆಕೆರೆಯ ಹೂಳೆತ್ತುವಂತೆ ಶಾಸಕರಲ್ಲಿ ಬೇಡಿಕೆಯಿಟ್ಟ ಸ್ವಾಮೀಜಿ ಶಾಸಕ ಡಾ.ಎಂ.ಚಂದ್ರಪ್ಪನವರಿಗೆ ನೀವುಗಳೆಲ್ಲಾ ಸಹಕಾರ ಕೊಡಿ ಎಂದು ತಾಳಿಕಟ್ಟೆ ಗ್ರಾಮದ ಹಾಲುಮತಸ್ಥರಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್, ಗೋವಿಂದಪ್ಪ, ಚಿಕ್ಕಪ್ಪ, ಹಳ್ಳಪ್ಪ, ಯಲ್ಲಪ್ಪ, ಚಂದ್ರಪ್ಪ ಹಾಗೂ ಊರಿನ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.
