Chitradurga news|nammajana.com|18-6-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗದಲ್ಲಿ ಹತ್ಯೆ ಆಗಿರುವ (Renukaswamy case) ರೇಣುಕಾಸ್ವಾಮಿ ನಿವಾಸಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ತಂದೆ ತಾಯಿಗಷ್ಟೆ ಅಲ್ಲ ನಮಗೂ ನೋವಾಗುವಂತ ಪ್ರಕರಣವಾಗಿದೆ. ನಮ್ಮ ಸರ್ಕಾರ ಈಗಾಗಲೇ ತನಿಖೆ ಮಾಡುತ್ತಿದೆ. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ (Renukaswamy case) ಸರ್ಕಾರದಿಂದ ಕೆಲಸ ಕೊಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: G. Parameshwara: ರೇಣಕಾಸ್ವಾಮಿ ಮನೆಗೆ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ
ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ತನಿಖೆಯನ್ನ ನ್ಯಾಯಯುತವಾಗಿ ಮಾಡಿಸುತ್ತೇವೆ, ಇದರಲ್ಲಿ ಯಾರು ರಾಜಕೀಯ ಮಾಡಬಾರದು.ಈ ಘಟನೆ ನಡೆಯಬಾರದಿತ್ತು ನಡೆದು ಹೋಗಿದೆ, ಎಲ್ಲದಕ್ಕೂ ರಾಜಕೀಯ ದೃಷ್ಠಿಕೋನ ಬೇಡ ಎಂದರು.
ಪ್ರಕರಣದಲ್ಲಿ ಭಾಗಿಯಾದವರ ಬಗ್ಗೆ 24-48 ಗಂಟೆಯಲ್ಲಿ ಅರೆಸ್ಟ್ (Renukaswamy case) ಮಾಡಿದ್ದಾರೆ. ಈ ಪ್ರಕರಣವನ್ನ CBI ಗೆ ಕೊಡುವ ಅಗತ್ಯವಿಲ್ಲ. ನಮ್ಮ ಪೊಲೀಸರು ಚನ್ನಾಗಿಯೇ ತನಿಖೆ ಮಾಡಿ ಕರ್ತವ್ಯ ಮಾಡುತ್ತಿದ್ದಾರೆ.ಈ ಪ್ರಕರಣದಲ್ಲಿ ಯಾವ ಸಚಿವರು ಒತ್ತಡವೂ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತೇನೆ.
ಸಚಿವರ ಬಳಿ ರೇಣುಕಾಸ್ವಾಮಿ ಅವರ ಕುಟುಂಬ ಬೀಕರ ಹತ್ಯೆ ಕುರಿತು ಕಣ್ಣೀರಿಟ್ಟು ನ್ಯಾಯಕ್ಕಾಗಿ ಮನವಿ ಮಾಡಿದ (Renukaswamy case) ರೇಣುಕಸ್ವಾಮಿ ತಂದೆ, ತಾಯಿ. ಮಗನ ಸಾವನ್ನ ನೆನೆದು ಕಣ್ಣೀರಿಟ್ಟು ಗೋಳಾಡಿದ ರೇಣುಕಸ್ವಾಮಿ ಕುಟುಂಬಕ್ಕೆ ಸೂಕ್ತ ತನಿಖೆ ಮಾಡಿಸುವ ಭರವಸೆ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್ ನೀಡಿದ್ದಾರೆ.
ರೇಣುಕಸ್ವಾಮಿ ಪತ್ನಿಗೆ ಉದ್ಯೋಗ ನೀಡುವಂತೆ, ಸೂಕ್ತ ತನಿಖೆ ಮಾಡಿಸುವಂತೆ ಮನವಿ ಪತ್ರ ಸಲ್ಲಿಸಿದರು.(Renukaswamy case)
ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸ್ಥಳಿಯ ಶಾಸಕರಾದ ಟಿ.ರಘುಮೂರ್ತಿ, ,ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಸಚಿವ ಹೆಚ್ ಆಂಜನೇಯ ಜೊತೆಗಿದ್ದರು.