Chitradurga news | nammajana.com |10-9-2024
ನಮ್ಮಜನ.ಕಾಂ, ಚಿತ್ರದುರ್ಗ: ನಟ ದರ್ಶನ್ ಜೈಲು ಪಲಾಗಿದ್ದು ಕಾರಣವಾಗಿದ್ದ ರೇಣುಕಾಸ್ವಾಮಿ ಕೇಸ್ ನಲ್ಲಿ ಚಾರ್ಜ್ ಶೀಟ್ (Renukaswamy) ಸಲ್ಲಿಕೆಯಾಗಿದೆ.

ಈ ಚಾರ್ಜ್‌ಶೀಟ್‌ನಲ್ಲಿ ಅಚ್ಚರಿಯ ವಿಚಾರಗಳು ಒಂದು ಹೊರಬಿದ್ದಿದ್ದು ಎಲ್ಲಾರೂ ನೆಬ್ಬೆರಗಾಗಿದ್ದಾರೆ. ನಟಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದರು ಎನ್ನುವ ಕಾರಣಕ್ಕೆ ಸಾಕಷ್ಟು ಅವಂತರಗಳು ಸೃಷ್ಟಿಯಾಗಿವೆ ಎಂದು ಹೇಳಲಾಗಿದೆ. ಆದರೆ, ರೇಣುಕಾಸ್ವಾಮಿ ಅವರು ಕನ್ನಡದ ಖ್ಯಾತ ನಟಿಯರಿಗೂ ಅಶ್ಲೀಲ ಮೆಸೇಜ್ ಕಳಿಸಿದ್ದು ಕೇಸ್ ನಲ್ಲಿ ಬೆಳಕಿಗೆ ಬಂದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇನ್ನಿತರೆ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಈ ವಿಚಾರ ಹೊರ ಬಂದಿದ್ದು ರೇಣುಕಾಸ್ವಾಮಿ ತನ್ನ ನಕಲಿ ಅಕೌಂಟ್‌ನಿಂದ (Renukaswamy) ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯರಿಗೂ ಅಶ್ಲೀಲ ಮೆಸೇಜ್ ಮಾಡಿರುವುದನ್ನು ನೋಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಮೊಬೈಲ್ ಪಡೆದಿದ್ದ ಆರೋಪಿಗಳು ಈ ವೇಳೆ ಮೆಸೇಜ್‌ಗಳನ್ನು ನೋಡಿದ್ದರಂತೆ. ಇದರಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೂ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ಎಂದು ಹೇಳಿಕೆ ನೀಡಿದ್ದಾರೆ.
ʼರೇಣುಕಾಸ್ವಾಮಿ ಮೊಬೈಲ್‌ನಲ್ಲಿ ನಾವು ನಟಿ ರಾಗಿಣಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ಅಶ್ಲೀಲ ಮಸೇಜ್ ಕಳುಹಿಸಿರೋದನ್ನ ನೋಡಿದ್ದೇವೆʼ ಎಂದು ಆರೋಪಿಗಳು (Renukaswamy) ಪೊಲೀಸರಿಗೆ ಮುಂದೆ ಹೇಳಿಕೆ ನೀಡಿದ್ದು, ಇದನ್ನೂ ಕೂಡ ಚಾರ್ಜ್‌ಶೀಟ್‌ನಲ್ಲೂ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಅಡಕೆ ಧಾರಣೆ |10 ಸೆಪ್ಟಂಬರ್ 2024 | ಭೀಮಸಮುದ್ರ, ಶಿವಮೊಗ್ಗ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್ ? | Adike Rate
ಪವಿತ್ರಾಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದರಿಂದಲೇ ಆತನನ್ನು ದರ್ಶನ್ ಹಾಗೂ ಇನ್ನಿತರೆ (Renukaswamy) ಆರೋಪಿಗಳು ಬೆಂಗಳೂರಿಗೆ ಕರೆ ತಂದು ಹಲ್ಲೆ ನಡೆಸಿ, ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಅಶ್ಲೀಲ ಮೆಸೇಜ್‌ಗಳೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.
