
Chitradurga news|nammajana.com |14-6-2024
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Murder Case) ಆರೋಪಿ ಅನು(ಅನಿಲ್ ಕುಮಾರ್ ) ಇಂದು ಸಂಜೆ ಪೊಲೀಸರಿಗೆ ಶರಣಾದ ವಿಷಯವನ್ನು ಟಿವಿಯಲ್ಲಿ ನೋಡಿದ ತಂದೆ ಚಂದ್ರಣ್ಣ (60) ಮನೆ ಬಳಿ ಏಕಾಏಕಿ ಕುಸಿದು ಬಿದ್ದ ಲೋ ಬಿಪಿದಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆರೋಪಿ ಅನಿಲ್ ಕುಮಾರ್ (ಅನು) ಚಿತ್ರದುರ್ಗ ಮೂಲದವನು. ನಗರದ ಸಿಹಿ ನೀರು ಹೊಂಡದ ರಸ್ತೆಯಲ್ಲಿರುವ ಈತ ವಾಸವಾಗಿದ್ದಾನೆ.

ಇದನ್ನೂ ಓದಿ: CHNNAGIRI ADIKE RATE HIKE : ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆ
ತಾಯಿ ಜಯಮ್ಮ, ತಂದೆ ಚಂದ್ರಪ್ಪ ದಂಪತಿಯ ಪುತ್ರ ಅನಿಲ್ ಕಳೆದ ಮೂರು ವರ್ಷದಿಂದ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು, ಇದಕ್ಕಿಂತ ಮೊದಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದನು. ಅನು ಸಭ್ಯ ಹುಡುಗನಾಗಿದ್ದು ಅಕ್ಕನ ಮದುವೆ ಕೂಡ ಮಾಡಿದ್ದನು. ಆದರೆ ದರ್ಶನ್ ಅಭಿಮಾನಿಗಳ (Renukaswamy Murder Case) ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಮಾತಿಗೆ ಮರುಳಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
