Chitradurga news|nammajana.com|6-8-2024
ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ ನರಸಭೆಯ ಅಧ್ಯಕ್ಷರ, ಉಪಾಧ್ಯಕ್ಷರ ಮೀಸಲಾತಿ ದಿಢೀರನೆ ಪ್ರಕಟಗೊಂಡ (Reservation)ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಗರಿಗೆದರಿದ ಚಟುವಟಿಕೆಗಳು. ಬಹುತೇಕ ಎಲ್ಲಾ ಪಕ್ಷದ ಚುನಾಯಿತ ಸದಸ್ಯರು ನಿರೀಕ್ಷಿಸಿದಂತೆ ಮೀಸಲಾತಿ ಪ್ರಕಟಗೊಳ್ಳದ ಹಿನ್ನೆಲೆಯಲ್ಲಿ ಬೇಸರವಾದರೂ ಸದಸ್ಯರು ಸರ್ಕಾರ ನೂತನ ಮೀಸಲಾತಿಯನ್ನು ಒಪ್ಪಿಕೊಳ್ಳುವ ಅನಿರ್ವಾಯತೆ ಉಂಟಾಗಿದೆ.
ಪ್ರಸ್ತುತ ನಗರಸಭೆಯಲ್ಲಿ 31 ಸದಸ್ಯರಿದ್ದು, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿದೆ. ಕಳೆದ ನವೆಂಬರ್ 2020 ರಲ್ಲಿ ನಗರಸಭೆಯ ಆಡಳಿತ ಪ್ರಾರಂಭಗೊಂಡಿದ್ದು, ಸಾಮಾನ್ಯ ಮಹಿಳೆ (Reservation) ಮೀಸಲಾತಿಯಲ್ಲಿ ಮೊದಲ ಬಾರಿಗೆ ಜಯಲಕ್ಷ್ಮಿ ಕೃಷ್ಣಮೂರ್ತಿ, ಎರಡನೇ ಬಾರಿಗೆ ಸುಮಕ್ಕ ಆಂಜಿನಪ್ಪ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಿದ್ಧಾರೆ.
ಕಳೆದ ಮೇ 2023 ರಲ್ಲಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅಧ್ಯಕ್ಷರ ಆಡಳಿತಾವಧಿ ಮುಕ್ತಾಯಗೊಂಡಿತ್ತು. ಅಂದಿನಿಂದ ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ (Reservation) ಆಡಳಿತವನ್ನು ನಡೆಸಲಾಗಿತ್ತು.
ಪ್ರಸ್ತುತ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಿರುವುದು ವಿಶೇಷವಾಗಿದೆ. ಅಧ್ಯಕ್ಷ ಸ್ಥಾನ ಬಿಸಿಎಂಬಿ ಮಹಿಳೆ ಸ್ಥಾನಕ್ಕೆ ಮೀಸಲಾಗಿದೆ.
ಬಿಸಿಎಂಬಿ ಮೀಸಲಾತಿಯಲ್ಲಿ ನಗರದ 21ನೇ ವಾರ್ಡ್ ಸದಸ್ಯೆ ಎಂ.ಸಾವಿತ್ರಮ್ಮ ಏಕಮಾತ್ರ ಅಭ್ಯರ್ಥಿಯಾಗಿದ್ದಾರೆ. ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆೆ. ಉಪಾಧ್ಯಕ್ಷ (Reservation) ಸ್ಥಾನ ಎಸ್ಟಿ ಮೀಸಲಾತಿ ಬಂದಿದ್ದು, ನಗರದ 6ನೇ ವಾರ್ಡ್ ಕವಿತಾಬೋರಯ್ಯ, 8 ನೇ ವಾರ್ಡ್ ಸುಜಾತ ಪಾಲಯ್ಯ, 10ನೇ ವಾರ್ಡ್ ಸುಮಾಭರಮಣ್ಣ, 19ನೇ ವಾರ್ಡ್ ಕವಿತಾವೀರೇಶ್ ಸ್ಪರ್ಧೆಯಲ್ಲಿದ್ಧಾರೆ.
ಸುಮಾರು ಒಂದು ವರ್ಷದ ನಂತರ ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಒದಗಿ ಬಂದಿದ್ದು, ಮುಂದಿನ 2025 ರಲ್ಲಿ ಮತ್ತೊಮ್ಮೆ ನಗರಸಭೆಗೆ ಚುನಾವಣೆ ನಡೆಯುವ ಸಂಭವವಿದೆ.