Chitradurga news | nammajana.com|8-07-2025
ನಮ್ಮಜನ.ಕಾಂ, ಚಿತ್ರದುರ್ಗ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿ ಕಾರ್ಯನಿರ್ವಹಿಸುತ್ತಿರುವ ಮೋರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಇಂದಿರಾಗಾಂಧಿ ವಸತಿ ಶಾಲೆ(Residential School)ಗಳಲ್ಲಿ ಖಾಲಿ ಇರುವ 9 ಮತ್ತು 10 ನೇ ತರಗತಿಯಲ್ಲಿ ಸ್ಥಾನಗಳಿಗೆ ನೇರ ಪ್ರವೇಶ ನೀಡಲಾಗುತ್ತಿದೆ.
ಇದನ್ನೂ ಓದಿ: ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಈಗಾಗಲೇ ಸರ್ಕಾರ ಆದೇಶದಂತೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆ ಸಮಿತಿಯಲ್ಲಿ ತಾಲ್ಲೂಕುವಾರು ಖಾಲಿ ಇರುವ ಸ್ಥಾನಗಳಿಗೆ ಮೀಸಲಾತಿ ಗುರುತಿಸಲಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 9ನೇ ತರಗತಿಗೆ 8 ಹಾಗೂ 10ನೇ ತರಗತಿಗೆ 28 ಸ್ಥಾನಗಳು ಖಾಲಿಯಿವೆ.
ಚಳ್ಳಕೆರೆ ತಾಲ್ಲೂಕಿ(Residential School)ನಲ್ಲಿ 9ನೇ ತರಗತಿಗೆ 6 ಹಾಗೂ 10ನೇ ತರಗತಿಗೆ 13, ಹಿರಿಯೂರು ತಾಲ್ಲೂಕಿನಲ್ಲಿ 9ನೇ ತರಗತಿಗೆ 5 ಹಾಗೂ 10ನೇ ತರಗತಿಗೆ 22, ಹೊಳಲ್ಕೆರೆ ತಾಲ್ಲೂಕಿನಲ್ಲಿ 9ನೇ ತರಗತಿಗೆ 15 ಹಾಗೂ 10ನೇ ತರಗತಿಗೆ 27,ಹೊಸದುರ್ಗ ತಾಲ್ಲೂಕಿನಲ್ಲಿ 9ನೇ ತರಗತಿಗೆ 18 ಹಾಗೂ 10ನೇತರಗತಿಗೆ 19 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 9ನೇ ತರಗತಿಗೆ 2 ಹಾಗೂ 10ನೇ ತರಗತಿಗೆ 1 ಸ್ಥಾನ ಖಾಲಿಯಿದೆ.
ಅರ್ಹ ಅಭ್ಯರ್ಥಿಗಳು ತಮಗೆ ಸಮೀಪವಿರುವ ವಸತಿ ಶಾಲೆಗೆ ಭೇಟಿ ನೀಡಿ ನೇರ ಪ್ರವೇಶ ಪಡೆಯಬಹುದು.
ಇದನ್ನೂ ಓದಿ: ಇಂದು ಬಂಗಾರದ ಬೆಲೆಯಲ್ಲಿ ಏರಿಕೆ | ಇಂದಿನ ರೇಟ್ ಎಷ್ಟಿದೆ?
2024-25ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಶೇ.75ಕ್ಕಿಂತ ಹೆಚ್ಚಿನ ಅಂಕಗಳೊ0ದಿಗೆ ಉತ್ತೀರ್ಣರಾಗಿರುವ(Residential School) ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮೊಹಮ್ಮದ್ ಜಿಲಾನಿ ಖುರೇಷಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252