Chitradurga news|nammajana.com|10-7-2024
ನಮ್ಮಜನ.ಕಾಂ, ಚಿತ್ರದುರ್ಗ: ತುರುವನೂರು ಹೋಬಳಿಯ ಕೂನಬೇವು ಗ್ರಾಮದಲ್ಲಿ ಮಂಗಳವಾರ ಅದ್ದೂರಿ ತೆರೆದ ವಾಹನ ಬೆಳ್ಳಿರಥದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ (Retired soldier O. Jayanna welcome) ಮೂಲಕ ಗ್ರಾಮಸ್ಥರು ಅದ್ದೂರಿ ಸ್ವಾಗತವನ್ನು ಕೋರಿದರು.
ಗ್ರಾಮದ ಯುವಕ ಯುವತಿಯರು ಕುಣಿದು ಭರ್ಜರಿ ಸ್ಟೆಪ್ಪು ಹಾಕುವ ಮೂಲಕ ಪಟಾಕಿ ಸಿಡಿಸಿ ಮೆರವಣಿಗೆ ಉದ್ದಕ್ಕೂ ಸಂಭ್ರಮಿಸಿದರು.
ಅರೇಸೇನಾ ಪಡೆ ಜಿಲ್ಲಾಧ್ಯಕ್ಷ ನಿಂಗರಾಜ್ ಮಾತನಾಡಿ ನಿವೃತ್ತಿ ನಂತರ ಸ್ವಗ್ರಾಮಕ್ಕೆ ಬರುವ ಸೈನಿಕರು ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಯುವಕರಿಗೆ ಮಾರ್ಗದರ್ಶನ (Retired soldier O. Jayanna welcome) ಮಾಡಿ ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು. ದೇಶದ ರಕ್ಷಣೆಗಾಗಿ ಯುವಕರು ಸೇನೆಗೆ ಸೇರುತ್ತಾರೆ, ಮಳೆ ಗಾಳಿ ಶೀತವನ್ನು ಲೆಕ್ಕಿಸದೆ ಪ್ರಾಣ ಪಣಕ್ಕಿಟ್ಟು ಪ್ರತಿ ಭಾರತೀಯರನ್ನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವ ಯೋಧರು ದೇವರಿಗೆ ಸರಿಸಮಾನ ಎಂದರು.
ನಿವೃತ್ತ ಸೈನಿಕ ಓ.ಜಯಣ್ಣ ಮಾತನಾಡಿ ಯುವಕರು ದೇಶ ಸೇವೆ ಸಲ್ಲಿಸಲು ಮುಂದೆ ಬರಬೇಕು, ಇದು ಹೆಮ್ಮೆಯ ಕೆಲಸ ಸೈನಿಕರು ಕೇವಲ ಗಡಿ ಕಾಯುವ ಕೆಲಸದ ಜೊತೆಗೆ ಪ್ರಾಕೃತಿಕವಾಗಿ (Retired soldier O. Jayanna welcome) ವಿಕೋಪಗಳ ಸಂದರ್ಭದಲ್ಲಿಯೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ಸದಾ ಋಣಿಯಾಗಿರಬೇಕು, ರೈತ ಇಡೀ ದೇಶಕ್ಕೆ ಅನ್ನ ನೀಡಿದರೆ ಸೈನಿಕ ದೇಶ ಸಂತೋಷದಿಂದ ಇರಲು ಸಾಧ್ಯವಾಗಿದೆ. ಇವರಿಬ್ಬರೂ ದೇಶದ ಬೆನ್ನೆಲುಬು ಎಂದರು.
ನಲಗೇತನಹಟ್ಟಿ ಕೆ ಟಿ ಮುತ್ತುರಾಜ್ ಅವರು ವೀರ ಯೋಧರ ಕುರಿತು ದೇಶಭಕ್ತಿ ಗೀತೆಗಳನ್ನು ಹಾಡಿದರು.
ಇದನ್ನೂ ಓದಿ: ತೋಟದ ಮನೆಗೆ ನುಗ್ಗಿ ಮನೆಯವರನ್ನ ಕಟ್ಟಿ ಹಾಕಿ 6.50 ಲಕ್ಷ ದರೋಡೆ | Robbery of 6.50 lakh in Hirehalli
ಈ ಸಂದರ್ಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ .ತಿಪ್ಪೇಸ್ವಾಮಿ, ಅರಸೇನಾ ಪಡೆ ಜಿಲ್ಲಾ ಉಪಾಧ್ಯಕ್ಷ ಡಿ. ಜಯಣ್ಣ, ಹಾಗೂ ಎಲ್ಲಾ ಸದಸ್ಯರು (Retired soldier O. Jayanna welcome) ಸಮಸ್ತ ಕೂನಬೇವು ಗ್ರಾಮದ ಗ್ರಾಮಸ್ಥರು ಇದ್ದರು.